ಅಷ್ಟಾಂಗ ಯೋಗದಿಂದ ಮಾನಸಿಕ ಪರಿವರ್ತನೆ

yoga
ಸೋಗಾನೆ ಕೇಂದ್ರ ಕಾರಾಗೃಹದಲ್ಲಿ ಸಜಾ ಬಂಧಿಗಳಿಗೆ ಯೋಗ ತರಬೇತಿ ಪ್ರಮಾಣ ಪತ್ರವನ್ನು ಕಾರಾಗೃಹದ ಸಹಾಯಕ ಅಧೀಕ್ಷಕ ಶಿವಾನಂದ ಶಿವಪುರಿ ವಿತರಣೆ ಮಾಡಿದರು. ಜೆ.ನಾಗರಾಜ್, ಸಿ.ರಮೇಶ್, ಸವಿತಾ ರಮೇಶ್, ಟಿ.ಹೇಮಾ, ಮಾಧವಮೂರ್ತಿ, ಸರಳಾ ವಾಸನ್ ಇದ್ದರು.
Published on

ಶಿವಮೊಗ್ಗ: ಪತಂಜಲಿ ಮಹರ್ಷಿಗಳ ಅಷ್ಟಾಂಗಯೋಗ ಸೂತ್ರದಿಂದ ಮಾನಸಿಕ ಪರಿವರ್ತನೆ ಸಾಧ್ಯ. ಇಲ್ಲಿ ಯಶಸ್ವಿಯಾಗಿ ಯೋಗ ತರಬೇತಿ ಪಡೆದಿರುವುದು ಸಜಾ ಬಂಧಿಗಳಿಗೆ ಮುಂದೆ ಉಪಯೋಗಕ್ಕೆ ಬರಲಿದೆ ಎಂದು ಸೋಗಾನೆ ಕೇಂದ್ರ ಕಾರಾಗೃಹದ ಸಹಾಯಕ ಅಧೀಕ್ಷಕ ಶಿವಾನಂದ ಶಿವಪುರಿ ಹೇಳಿದರು.

ಕೇಂದ್ರ ಕಾರಾಗೃಹದಲ್ಲಿ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಜೆಸಿಐ ಮತ್ತಿತರ ಸಂಘಟನೆಗಳಿಂದ ಸಜಾ ಬಂಧಿಗಳಿಗೆ ಏರ್ಪಡಿಸಿದ್ದ ಯೋಗ ತರಬೇತಿಯ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಕೇಂದ್ರ ಕಾರಾಗೃಹದಲ್ಲಿರುವ ಪ್ರತಿಯೊಬ್ಬರೂ ಯೋಗಾಸನ ಕಲಿತು ನಿರಂತರವಾಗಿ ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.
ಜೇಸಿ ತರಬೇತುದಾರರಾದ ಹೊಸಪೇಟೆಯ ಸವಿತಾ ರಮೇಶ್ ಮಾತನಾಡಿ, ಸಜಾ ಬಂಧಿಗಳ ಮಾನಸಿಕ ಪರಿವರ್ತನೆಗೆ ಯೋಗಾಸನದ ಜತೆಗೆ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ಸಹಕಾರಿ. ಮುಂದಿನ ದಿನದಲ್ಲಿ ಕಾರ್ಯಾಗಾರ ಆಯೋಜಿಸಲಾಗುವುದು ಎಂದರು.
ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್ ಮಾತನಾಡಿ, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಡಾ. ಆರ್.ಆನಿತಾ, ಯೋಗ ಶಿಕ್ಷಕರಾದ ಎಸ್.ಎನ್.ಲೀಲಾ, ಗೋಪಾಲಕೃಷ್ಣ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಯೋಗ ತರಬೇತಿ ಶಿಬಿರ ನಡೆಸಲಾಯಿತು ಎಂದು ಹೇಳಿದರು.
ಜೈಲರ್‌ಗಳಾದ ಜಿ.ಎಂ.ಮಹೇಶ್, ಅನಿಲ್‌ಕುಮಾರ್, ಪತಂಜಲಿ ಆಡಳಿತಾಧಿಕಾರಿ ಎಂ.ಪೂವಯ್ಯ, ಸಿಇ ಪರಿಸರ ಸಿ.ರಮೇಶ್, ಗೃಹರಕ್ಷಕ ದಳದ ಹಿರಿಯ ಘಟಕಾಧಿಕಾರಿ ಜಿ.ಇ.ಶಿವಾನಂದಪ್ಪ, ಕಲಾವಿದರಾದ ಟಿ.ಹೇಮಾ, ಮಾಧವಮೂರ್ತಿ, ಕಾರ್ಯದರ್ಶಿ ಸುಮಾ ಕಳಾಸಪುರ, ಯೋಗ ಶಿಕ್ಷಕಿ ಸರಳಾ ವಾಸನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net