ಸಂಗೀತ ಕಲಿಕೆಯಿಂದ ಮಾನಸಿಕ ನೆಮ್ಮದಿ

music
ಕದಂಬ ಕರೋಕೆ ಸೀಸನ್-2ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ರವಿ ಚವ್ಹಾಣ್, ಭದ್ರಾವತಿ ವಾಸು, ಹೇಮಂತ್, ಸುಮಾ, ಪ್ರಿಯಾಂಕಾ ಇತರರಿದ್ದರು.
Published on

ಶಿವಮೊಗ್ಗ: ಸ್ಪರ್ಧೆಗಳಲ್ಲಿ ಸೋಲು-ಗೆಲುವಿನ ಲೆಕ್ಕಾಚಾರವಷ್ಟೇ ಮುಖ್ಯವಲ್ಲ. ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರಿಂದ ಪ್ರತಿಭೆ ಅನಾವರಣಕ್ಕೆ ವೇದಿಕೆ ಸಿಕ್ಕಂತಾಗುತ್ತದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯಕುಮಾರ್ ಹೇಳಿದರು.

ಅಶೋಕನಗರ ಎಆರ್‌ಬಿ ಕಾಲನಿಯ ಯೋಗ ಮಂದಿರದಲ್ಲಿ ಕದಂಬ ಕರೋಕೆ ಗ್ರೂಪ್ ಆಯೋಜಿಸಿದ್ದ ಕದಂಬ ಕರೋಕೆ ಗಾಯನ ಸ್ಪರ್ಧೆ ಸೀಸನ್-2 ಉದ್ಘಾಟಿಸಿ ಮಾತನಾಡಿದ ಅವರು, ಸಂಗೀತ ಕಲಿಕೆಯಿಂದ ಮನುಷ್ಯನ ಖಿನ್ನತೆ ದೂರವಾಗುತ್ತದೆ. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಂಗೀತ ನೆರವಾಗುತ್ತದೆ ಎಂದು ತಿಳಿಸಿದರು.
ಹಿರಿಯ ಗಾಯಕ ಭದ್ರಾವತಿ ವಾಸು ಮಾತನಾಡಿ, ಕಠಿಣ ಪರಿಶ್ರಮದಿಂದ ಧ್ವನಿ ಸಂಸ್ಕರಣೆಗೆ ಪ್ರಾಮುಖ್ಯ ನೀಡಬೇಕು. ಬಾಲ್ಯದಿಂದಲೇ ಸಂಗೀತಾಭ್ಯಾಸ ಮಾಡಬೇಕು ಎಂದು ಹೇಳಿದರು.
ನಿವೃತ್ತ ಎಎಸ್‌ಐ ರವಿ ಚವ್ಹಾಣ್ ಮಾತನಾಡಿ, ಸ್ಪರ್ಧೆಗಳ ಆಯೋಜನೆಯಿಂದ ಪ್ರತಿಭಾನ್ವಿತರಿಗೆ ಉತ್ತಮ ಅವಕಾಶಗಳು ಸಿಗುತ್ತವೆ ಎಂದು ತಿಳಿಸಿದರು. ಗಾಯಕರಾದ ಆದ್ಯಾ ಪ್ರಶಾಂತ್, ರಾಜಶೇಖರ್, ಹೇಮಂತ್, ಅನೂಪ್, ಸುಮಾ, ಭರತ್, ಸುಮಿತ್ರಾ, ಪ್ರಿಯಾಂಅ, ಆನಂದ, ಲಕ್ಷ್ಮೀಕಾಂತ್ ಜಿದ್ದರು.
ಸ್ಪರ್ಧೆ ವಿಜೇತರು: ಕದಂಬ ಕರೋಕೆ ಸೀಸನ್-2ರಲ್ಲಿ ಶಿಕಾರಿಪುರದ ರಾಜು ಪ್ರಥಮ, ಗುರುರಾಜ್ ದ್ವಿತೀಯ ಹಾಗೂ ಶಿವಮೊಗ್ಗದ ಅಜಯ್ ತೃತೀಯ ಸ್ಥಾನ ಪಡೆದರು. ಯುಗಳ ಗೀತೆ, ವೈಯಕ್ತಿಕ ಗೀತಗಾಯನ, ಕನ್ನಡ ಹಾಗೂ ಹಿಂದಿ ಗೀತೆಗಳನ್ನು ಕಲಾವಿದರು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net