ಶ್ರದ್ಧಾ ಪ್ರಕರಣದ ಆರೋಪಿ ಅಫ್ತಾಬ್​ನನ್ನು ಕರೆದೊಯ್ಯುತ್ತಿದ್ದ ಪೊಲೀಸ್​ ವ್ಯಾನ್​ ಅಡ್ಡಗಟ್ಟಿದ ಖಡ್ಗಧಾರಿಗಳು!

Pub crime
Published on

ನವದೆಹಲಿ: ಶ್ರದ್ಧಾ ವಾಕರ್​ ಭೀಕರ ಕೊಲೆ ಪ್ರಕರಣದ ಆರೋಪಿ ಅಫ್ತಾಬ್​ ಅಮಿನ್​ ಪೂನಾವಾಲಾನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ವ್ಯಾನ್​ಗೆ ಇಂದು ಸಂಜೆ ಖಡ್ಗಧಾರಿಗಳ ಗುಂಪು ಅಡ್ಡಗಟ್ಟಿದ ಘಟನೆಯೊಂದು ನಡೆದಿದೆ. ಪೊಲೀಸರು ಪ್ರಕರಣವನ್ನು ಸಮರ್ಥವಾಗಿ ಎದುರಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ಪಶ್ಚಿಮ ದೆಹಲಿಯಲ್ಲಿನ ಫೊರೆನ್ಸಿಕ್ ಸೈನ್ಸ್​ ಲ್ಯಾಬೊರೇಟರಿಯಿಂದ ಜೈಲಿಗೆ ವಾಪಸ್​ ಕರೆದುಕೊಂಡು ಬರುತ್ತಿರುವಾಗ ಎಫ್​ಎಸ್​ಎಲ್​ ಕಟ್ಟಡದ ಹೊರಗೆ ಈ ಪ್ರಕರಣ ನಡೆದಿದೆ. ಈ ದಾಳಿಗೆ ಹಿಂದೂ ಸೇನಾ ಹೊಣೆಯನ್ನು ಹೊತ್ತುಕೊಂಡಿದೆ. ಹಿಂದೂ ಸೇನಾ ಎಂಬ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ವಿಷ್ಣು ಗುಪ್ತ, ಅಫ್ತಾಬ್​ ಹೇಗೆ ಹಿಂದೂ ಹುಡುಗಿಯನ್ನು ತುಂಡು ತುಂಡಾಗಿಸಿದ ಎಂಬುದನ್ನು ನೋಡಲು ಇಡೀ ದೇಶವೇ ಕಾಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ.

ಖಡ್ಗಧಾರಿಗಳು ಅವರ ಕಾರನ್ನು ಪೊಲೀಸ್ ವ್ಯಾನ್​ಗೆ ಅಡ್ಡಲಾಗಿ ನಿಲ್ಲಿಸಿದ್ದರು. ಬಳಿಕ ಐವರು ಖಡ್ಗ ಝಳಪಿಸುತ್ತ ಪೊಲೀಸ್ ವ್ಯಾನ್​ನತ್ತ ಬಂದಿದ್ದರು. ಆದರೆ ಪೊಲೀಸರು ಅವರ ಆಯುಧ ತೆಗೆದು ಖಡ್ಗಧಾರಿಗಳನ್ನು ಎದುರಿಸಿದ್ದರು. ಇದರಲ್ಲಿ ಯಾರಿಗೂ ಗಾಯವಾಗಿಲ್ಲ ಹಾಗೂ ಇಬ್ಬರು ಖಡ್ಗಧಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರು ತಮ್ಮ ಹೆಸರನ್ನು ನಿಗಮ್ ಗುಜ್ಜಾರ್​, ಕುಲ್​ದೀಪ್ ಥಾಕೂರ್ ಹಾಗೂ ತಾವು ಗುರುಗ್ರಾಮ ನಿವಾಸಿಗಳು ಮತ್ತು ಹಿಂದೂ ಸೇನಾ ಸದಸ್ಯರು ಎಂಬುದಾಗಿ ಹೇಳಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net