ಹೆಂಡತಿ, ಮಕ್ಕಳನ್ನು ನೋಡಲು ಅಮೆರಿಕಗೆ ತೆರಳಿದ ಮೇಲುಕೋಟೆ ಶಾಸಕ ದರ್ಶನ್​ ಪುಟ್ಟಣ್ಣಯ್ಯ

Darshan Puttannaiah
Published on

ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ರೈತ ಸಂಘದ ನಾಯಕ ದರ್ಶನ್​ ಪುಟ್ಟಣ್ಣಯ್ಯ ಅವರು ವಿದೇಶಕ್ಕೆ ತೆರಳಿದ್ದಾರೆ.

ಹೆಂಡತಿ ಮತ್ತು ಮಕ್ಕಳನ್ನು ನೋಡಲು ದರ್ಶನ್​ ಪುಟ್ಟಣ್ಣಯ್ಯ ಅವರು ಅಮೆರಿಕಗೆ ತೆರಳಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆಂದು ದರ್ಶನ್​ ಅವರು ಐದು ತಿಂಗಳ‌ ಹಿಂದೆ ಮಂಡ್ಯಗೆ ಬಂದಿದ್ದರು. ಚುನಾವಣೆ ಮುಗಿದು ಜಯಶಾಲಿಯಾಗಿರುವ ದರ್ಶನ್​ ಅವರು ಕೊಂಚ ಬಿಡುವು ಮಾಡಿಕೊಂಡು ಇದೀಗ ಹೆಂಡತಿ ಮಕ್ಕಳನ್ನು ನೋಡಲು ಅಮೆರಿಕಗೆ ತೆರಳಿದ್ದಾರೆ.

ನನ್ನ ನಂಬರ್‌ಗೆ ಕರೆ ಮಾಡಿ

ಈ ಬಗ್ಗೆ ಮಾತನಾಡಿರುವ ದರ್ಶನ್​, ಪತ್ನಿ ಮತ್ತು ಮಕ್ಕಳನ್ನು ನೋಡಿ 5 ತಿಂಗಳು‌ ಆಗಿವೆ. ಹೀಗಾಗಿ ಅವರನ್ನು ನೋಡಲು ಅಮೆರಿಕಗೆ ಹೋಗುತ್ತಿದ್ದೇನೆ. 10 ದಿನಗಳ ಬಳಿಕ ವಾಪಸ್​ ಬರುತ್ತೇನೆ. ಅಲ್ಲಿಯವರೆಗೂ ಎಲ್ಲರೂ ಶಾಂತಿಯಿಂದ‌ ಇರಬೇಕು. ಜನರಿಗೆ ಏನಾದರೂ ಸಮಸ್ಯೆ ಇದ್ದರೆ ನನ್ನ ನಂಬರ್‌ಗೆ ಕರೆ ಮಾಡಿ. ನಮ್ಮ ಕಡೆಯವರು‌ ನಿಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಅಮೆರಿಕದಿಂದ ಬಂದು ಎಲ್ಲರನ್ನು ಕಾಣುತ್ತೇನೆ ಎಂದು ಅಮೆರಿಕಗೆ‌ ಹೊರಡುವ ಮುನ್ನ ವಿಡಿಯೋ ಸಂದೇಶವನ್ನು ಹರಿಬಿಟ್ಟಿದ್ದಾರೆ.

ಅಂದಹಾಗೆ ದರ್ಶನ್​ ಪುಟ್ಟಣ್ಣಯ್ಯ ಅವರು ಪುಟ್ಟರಾಜು ವಿರುದ್ಧ ಜಯ ದಾಖಲಿಸಿದರು. ಸರ್ವೋದಯ ಕರ್ನಾಟಕ ಪಕ್ಷದಿಂದ ದರ್ಶನ್​ ಸ್ಪರ್ಧಿಸಿದರು. ಅವರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್​ ಬೆಂಬಲ ನೀಡಿತು. ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ದರ್ಶನ್​ ಪುಟ್ಟಣ್ಣಯ್ಯ ಮೇಲೆ ಜನರ ನಿರೀಕ್ಷೆ ತುಂಬಾ ಇದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net