

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಹೀನಾಯ ಸೋಲುಂಡಿದ್ದು, ಜೋ ಬೈಡೆನ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಾಗಿದೆ. ಟ್ರಂಪ್ ಕುಟುಂಬ ಶ್ವೇತಭವನದಿಂದ ಹೊರನಡೆದು ಹೋಗಿದೆ. ಆದರೆ ಶ್ವೇತಭವನದಿಂದ ಹೊರನಡೆಯುತ್ತಿದ್ದಂತೆಯೇ ಟ್ರಂಪ್ರ ಪತ್ನಿ ಮೆಲನಿಯಾ ಟ್ರಂಪ್ ಕೂಡ ಟ್ರಂಪ್ಗೆ ಕೈ ಕೊಡಲಿದ್ದಾರಾ ಎನ್ನು ಕುತೂಹಲ ಆರಂಭವಾಗಿದೆ. ಇಷ್ಟಕ್ಕೆಲ್ಲ ಕಾರಣವಾಗಿರುವುದು ಆ ಒಂದು ವಿಡಿಯೋ.
ಶ್ವೇತಭವನದಿಂದ ವಾಪಾಸಾದ ದಂಪತಿ, ಫ್ಲೋರಿಡಾದಲ್ಲಿ ವಿಮಾನವನ್ನು ಇಳಿದು ಕೆಳಗೆ ಬರುತ್ತಿದ್ದಂತೆಯೇ ಟ್ರಂಪ್, ಮಾಧ್ಯಮದವರಿಗೆ ಕೈ ಬೀಸಿದ್ದಾರೆ. ಆದರೆ ಟ್ರಂಪ್ ಪಕ್ಕ ನಿಲ್ಲಲೂ ಇಷ್ಟ ಪಡದ ಮೆಲನಿಯಾ ಸೀದಾ ನಡೆದು ಹೋಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ. ಟ್ರಂಪ್ ಸೋತರೆ ಮೆಲನಿಯಾ ವಿಚ್ಛೇದನ ನೀಡಲಿದ್ದಾರೆ ಎನ್ನುವ ಸುದ್ದಿಗಳು ಈ ಮುಂಚೆಯೇ ಹರಿದಾಡಿದ್ದರಿಂದಾಗಿ ಈಗ ಅಂತದ್ದೊಂದು ನಿರ್ಧಾರವನ್ನು ಮೆಲನಿಯಾ ತೆಗೆದುಕೊಂಡಿದ್ದಾರೆಯೇ ಎನ್ನುವ ಪ್ರಶ್ನೆಗಳೂ ಮೂಡಿವೆ.
ಮೂಲಗಳ ಪ್ರಕಾರ ಟ್ರಂಪ್ ಪತ್ನಿ ಮೆಲನಿಯಾ ಟ್ರಂಪ್ ವಿಚ್ಛೇದನ ನೀಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಈ ಹಿಂದೆಯೇ ಕೇಳಿಬಂದಿತ್ತು. ಟ್ರಂಪ್ ಆಡಳಿತದಲ್ಲಿದ್ದ ಸಹಾಯಕರೊಬ್ಬರು ಈ ವಿಚಾರವನ್ನು ತಿಳಿಸಿದ್ದು, ಯಾವುದೇ ಕ್ಷಣದಲ್ಲಿ ಮೆಲನಿಯಾ ಡಿವೋರ್ಸ್ ನೀಡಬಹುದು ಎಂದಿದ್ದರು. ಶ್ವೇತಭವನದಲ್ಲಿ ಟ್ರಂಪ್ ಅವರು ಪ್ರತ್ಯೇಕ ಬೆಡ್ರೂಮ್ ಹೊಂದಿದ್ದರು. ಅವರ ಮದುವೆ ಒಂದು “ವಹಿವಾಟು” ಆಗಿತ್ತು ಎಂದು ಅಮೆರಿಕದ ಮಾಜಿ ಪ್ರಥಮ ಮಹಿಳೆ ಮೆಲೆನಿಯಾ ಟ್ರಂಪ್ ಅವರ ಹಿರಿಯ ಸಲಹೆಗಾರರಾಗಿ ನೇಮಕವಾಗಿದ್ದ ಸ್ಟೇಫನೈ ವಾಕ್ಆಫ್ ಅವರು ಅಮೆರಿಕ ಮಾಧ್ಯಮಗಳಿಗೆ ತಿಳಿಸಿದ್ದರು. (ಏಜೆನ್ಸೀಸ್)