ಭಾರತ ಪ್ರವಾಸಕ್ಕೆ ಬರಲು ಉತ್ಸುಕರಾಗಿದ್ದಾರಂತೆ ಟ್ರಂಪ್​ ದಂಪತಿ: ಮೋದಿಗೆ ಥ್ಯಾಂಕ್ಸ್​ ಹೇಳಿದ ಮೆಲಾನಿಯಾ ಟ್ರಂಪ್​

melania trump
Published on

ವಾಷಿಂಗ್ಟನ್​: ಭಾರತಕ್ಕೆ ಪ್ರವಾಸ ಬರಲು ಉತ್ಸುಕುರಾಗಿರುವುದಾಗಿ ಡೊನಾಲ್ಡ್​ ಟ್ರಂಪ್​ನ ಪತ್ನಿ ಮೆಲಾನಿಯಾ ಟ್ರಂಪ್​ ತಿಳಿಸಿದ್ದಾರೆ.

ನಿನ್ನೆ (ಫೆ.12) ಪ್ರಧಾನಿ ಮೋದಿಯವರು ಡೊನಾಲ್ಡ್​ ಟ್ರಂಪ್​ ಮತ್ತು ಮೆಲಾನಿಯಾ ಟ್ರಂಪ್​ ಭಾರತಕ್ಕೆ ಪ್ರವಾಸ ಬರುತ್ತಿರುವ ವಿಚಾರವನ್ನು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದು, ಅವರಿಬ್ಬರಿಗೂ ಆದರದ ಸ್ವಾಗತವನ್ನು ಕೋರಿದ್ದರು. ಈ ಭೇಟಿಯು ವಿಶೇಷವಾಗಿರಲಿದ್ದು, ಇದು ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವನ್ನು ಇನ್ನಷ್ಟು ಭದ್ರಗೊಳಿಸಿ ಬಹುಕಾಲ ಕೊಂಡೊಯ್ಯಲಿದೆ ಎಂದು ಪ್ರಧಾನಿ ಟ್ವೀಟ್​ನಲ್ಲಿ ತಿಳಿಸಿದ್ದರು.

ಪ್ರಧಾನಿಯ ಟ್ವೀಟಿಗೆ ಪ್ರತಿಕ್ರಿಯಿಸಿರುವ ಮೆಲಾನಿಯಾ ಟ್ರಂಪ್​, "ಭಾರತಕ್ಕೆ ಆಹ್ವಾನಿಸಿದ್ದಕ್ಕೆ ನರೇಂದ್ರ ಮೋದಿಯವರಿಗೆ ಧನ್ಯವಾದಗಳು. ಈ ತಿಂಗಳ ಕೊನೆಯಲ್ಲಿ ಅಹಮದಾಬಾದ್​ ಮತ್ತು ದೆಹಲಿಗೆ ಭೇಟಿ ನೀಡಲು ಎದುರು ನೋಡುತ್ತಿದ್ದೇವೆ. ನಾನು ಮತ್ತು ಡೊನಾಲ್ಡ್​ ಟ್ರಂಪ್​ ಈ ಪ್ರವಾಸದ ಬಗ್ಗೆ ಉತ್ಸುಕುರಾಗಿದ್ದೇವೆ. ಈ ಪ್ರವಾಸದ ಮೂಲಕ ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧ ಹೆಚ್ಚು ನಿಕಟವಾಗಲಿದೆ" ಎಂದು ಟ್ವೀಟ್​ ಮಾಡಿದ್ದಾರೆ.

ಅಮೆರಿಕದ ಅಧಕ್ಷ ಡೊನಾಲ್ಡ್​ ಟ್ರಂಪ್​ ಮತ್ತು ಆತನ ಪತ್ನಿ ಮೆಲಾನಿಯಾ ಟ್ರಂಪ್​ ಈ ತಿಂಗಳ 24 ಮತ್ತು 25ರಂದು ಭಾರತಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net