ಡೊನಾಲ್ಡ್​ ಟ್ರಂಪ್​ಗೆ ಡಿವೋರ್ಸ್ ಕೊಡ್ತಾರಾ ಮೆಲನಿಯಾ? ದಾಂಪತ್ಯ ರಹಸ್ಯ ಬಿಚ್ಚಿಟ್ಟ ಸಲಹೆಗಾರ!

Trump
Published on

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷಿಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್​ ಪಕ್ಷದ ಡೊನಾಲ್ಡ್​ ಟ್ರಂಪ್, ಡೆಮಾಕ್ರಟಿಕ್​ ಪಕ್ಷದ ಜೋ ಬೈಡೆನ್​ ಎದುರು ಹೀನಾಯವಾಗಿ ಸೋತಿದ್ದು, ಇದರ ಬೆನ್ನಲ್ಲೇ ಟ್ರಂಪ್​ ಅವರಿಗೆ ಮತ್ತೊಂದು ಮುಖಭಂಗ ಎದುರಾಗಲಿದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಟ್ರಂಪ್​ ಪತ್ನಿ ಮೆಲನಿಯಾ ಟ್ರಂಪ್​ ವಿಚ್ಛೇದನ ನೀಡಲು ತಯಾರಿ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಟ್ರಂಪ್​ ಆಡಳಿತದಲ್ಲಿದ್ದ ಸಹಾಯಕರೊಬ್ಬರು ಈ ವಿಚಾರವನ್ನು ತಿಳಿಸಿದ್ದು, ಯಾವುದೇ ಕ್ಷಣದಲ್ಲಿ ಮೆಲನಿಯಾ ಡಿವೋರ್ಸ್​ ನೀಡಬಹುದು ಎಂದಿದ್ದಾರೆ.

ಶ್ವೇತಭವನದಲ್ಲಿ ಟ್ರಂಪ್​ ಅವರು ಪ್ರತ್ಯೇಕ ಬೆಡ್​ರೂಮ್​ ಹೊಂದಿದ್ದರು. ಅವರ ಮದುವೆ ಒಂದು "ವಹಿವಾಟು" ಆಗಿತ್ತು ಎಂದು ಅಮೆರಿಕದ ಮಾಜಿ ಪ್ರಥಮ ಮಹಿಳೆ ಮೆಲೆನಿಯಾ ಟ್ರಂಪ್​ ಅವರ ಹಿರಿಯ ಸಲಹೆಗಾರರಾಗಿ ನೇಮಕವಾಗಿದ್ದ ಸ್ಟೇಫನೈ ವಾಕ್​ಆಫ್​ ಅವರು ಅಮೆರಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಟ್ರಂಪ್​ ದಂಪತಿಯ 15 ವರ್ಷದ ದಾಂಪತ್ಯ ಅಂತ್ಯವಾಗಲಿದೆ. ಶ್ವೇತಭವನದಿಂದ ಹೊರಬಂದಾಗಿನಿಂದ ಮೆಲೆನಿಯಾ ಅವರು ಪ್ರತಿ ಸೆಕೆಂಡ್​ ಎಣಿಸುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಅವರು ಡಿವೋರ್ಸ್​ ಪಡೆದುಕೊಳ್ಳಬಹುದು ಎಂದು ಮೆಲನಿಯಾರ ಮತ್ತೋರ್ವ ಮಾಜಿ ಸಹಾಯಕ ಒಮಾರೊಸಾ ಮಾನಿಗಾಲ್ಟ್​ ಹೇಳಿದ್ದಾರೆ.

2016ರಲ್ಲಿ ಟ್ರಂಪ್​ ವಿಜೇತರಾದಾಗ ಮೆಲೆನಿಯಾ ಕಣ್ಣೀರಾಕಿ ಜಯಗಳಿಸುತ್ತಾರೆಂದು ನಿರೀಕ್ಷಿಸಿರಲಿಲ್ಲ ಎಂದು ಆಕೆಯ ಸ್ನೇಹಿತೆಗೆ ಹೇಳಿದ್ದರಂತೆ. ಆದರೆ, ಡಿವೋರ್ಸ್​ ವದಂತಿ ಹರಿದಾಡುತ್ತಲೇ ಅದನ್ನು ತಳ್ಳಿಹಾಕಿರುವ ಮೆಲೆನಿಯಾ ನನ್ನ ಪತಿಯೊಂದಿಗೆ ನಾನು ಉತ್ತಮ ಸಂಬಂಧ ಹೊಂದಿದ್ದೇನೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net