

ಶ್ರೀನಗರ: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೊಗಳಿ ಟ್ವೀಟ್ ಮಾಡಿದ್ದಾರೆ. ದೇಶದ ರಾಜಕೀಯದಲ್ಲಿ ಸತ್ಯ ಹೇಳಲು ಹೆದರದ ರಾಜಕಾರಣಿ ಎಂದರೆ ಅದು ರಾಹುಲ್ ಗಾಂಧಿ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ನೂತನ ಭಾರತವು ಆಯ್ದ ಕೆಲವೇ ಕೆಲವು ಬಂಡವಾಳಶಾಹಿಗಳ ಹಿಡಿತದಲ್ಲಿದೆ ಎನ್ನುವುದು ಸತ್ಯವಾದ ಮಾತು. ರಾಹುಲ್ ಗಾಂಧಿ ಅವರ ಬಗ್ಗೆ ಯಾರು ಏನು ಹಾಸ್ಯವನ್ನಾದರೂ ಮಾಡಬಹುದು ಆದರೆ ಅವರು ಸತ್ಯವನ್ನು ಮಾತನಾಡುವ ಧೈರ್ಯಶಾಲಿ ರಾಜಕಾರಣಿ. ಪ್ರಸ್ತುತ ಆಡಳಿತದಲ್ಲಿರುವ ಸರ್ವಾಧಿಕಾರಿಗಳ ವಿರುದ್ಧ ನಿಂತಿದ್ದಕ್ಕೆ ಇತಿಹಾಸ ಅವರನ್ನು ನೆನಪಿಸಿಕೊಳ್ಳಲಿದೆ ಎಂದು ಮುಫ್ತಿ ಅವರು ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಅವರು, "ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ದಳ (ಎನ್ಐಎ)ವನ್ನು ಕೃಷಿ ಕಾಯ್ದೆಯ ವಿರುದ್ಧ ಹೋರಾಡುತ್ತಿರುವ ರೈತರ ಮೇಲೆ ಪ್ರಯೋಗಿಸುತ್ತಿದೆ. ಕಾಶ್ಮೀರಿಗಳು, ರೈತರು ಮತ್ತು ಸರ್ಕಾರದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವವರ ಮೇಲೆ ಎನ್ಐಎ ತೆಗೆದುಕೊಳ್ಳುತ್ತಿರುವ ಕ್ರಮವನ್ನು ನೋಡಿದರೆ ಸಂಸ್ಥೆ ಎಷ್ಟು ಹಾಳಾಗಿದೆ ಎನ್ನುವುದುನ್ನು ಹೇಳಬಹುದು" ಎಂದು ಹೇಳಿದ್ದಾರೆ. (ಏಜೆನ್ಸೀಸ್)