ಮಕ್ಕಳ ಜೊತೆಗೆ ಶಾಲಾ ವಾಹನದಲ್ಲಿ ಪ್ರಯಾಣ ಮಾಡಿದ ಮೇಘಾಲಯ ಸಿಎಂ…

meghalaya cm
Published on

ಶಿಲ್ಲಾಂಗ್: ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ಶೇರಿಂಗ್​ ರೂಪದ ಶಾಲಾ ಬಸ್ ವ್ಯವಸ್ಥೆ, ಪ್ರಧಾನ ಪ್ರವಾಸೋದ್ಯಮ ವಾಹನಗಳು ಮತ್ತು ಕೃಷಿ ಪ್ರಕ್ರಿಯೆ ವಾಹನಗಳ ಯೋಜನೆಗೆ ಚಾಲನೆ ನೀಡಿದರು. ಮುಖ್ಯಮಂತ್ರಿಗಳು ಬುಧವಾರ ಶೇರಿಂಗ್​ ಶಾಲಾ ಬಸ್‌ಗಳಿಗೆ ಚಾಲನೆ ನೀಡಿದ್ದು ಶಿಲ್ಲಾಂಗ್‌ನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಇದು ಸಹಾಯ ಮಾಡಲಿದೆ ಎಂದು ಹೇಳಿದರು. ಈ ಸಂದರ್ಭ ಹೊಸದಾಗಿ ಶುರುವಾಗಿರುವ ಶೇರಿಂಗ್​ ಶಾಲಾ ಬಸ್​ ವ್ಯವಸ್ಥೆಯನ್ನು ಅನುಭವಿಸಲು ಶಾಲಾ ಮಕ್ಕಳೊಂದಿಗೆ ಪ್ರಯಾಣ ಮಾಡಿದ್ದಾರೆ.

"ಶೇರಿಂಗ್​ ಶಾಲಾ ಬಸ್ ವ್ಯವಸ್ಥೆಗೆ ಇಂದು ನಮ್ಮ ವಿದ್ಯಾರ್ಥಿಗಳೊಂದಿಗೆ ಬಸ್ ಸವಾರಿ ಮಾಡಿದ್ದು, ಈ ನಡೆ ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಶಿಲ್ಲಾಂಗ್ ನಗರದಲ್ಲಿ ಖಾಸಗಿ ವಾಹನಗಳಿಂದ ಶಾಲಾ ಬಸ್‌ಗಳಿಗೆ ಶಾಲಾ ಪ್ರಯಾಣದಲ್ಲಿ ಮೋಡ್ ಶಿಫ್ಟ್ ಅನ್ನು ರಚಿಸಲಿದ್ದೇವೆ" ಎಂದು ಸಿಎಂ ಸಂಗ್ಮಾ ಟ್ವೀಟ್ ಮಾಡಿದ್ದಾರೆ.

ಬಸ್ಸುಗಳು ಸಸ್ಟೈನಬಲ್ ಟ್ರಾನ್ಸ್​ಪೋರ್ಟ್​, ಮತ್ತು ಎಫಿಶಿಯೆಂಟ್ ಮೊಬಿಲಿಟಿ ಸೊಸೈಟಿ (STEMS) ಕಾರ್ಯಕ್ರಮದ ಭಾಗವಾಗಿದ್ದು, ನಗರದ ದಟ್ಟಣೆಯನ್ನು ಕಡಿಮೆ ಮಾಡಲು ಈ ಕ್ರಮಕ್ಕೆ ಮೇಘಾಲಯ ಸರ್ಕಾರ ಮುಂದಾಗಿದೆ. ಪ್ರವಾಸಿ ವಾಹನಗಳು ಒಟ್ಟಾರೆ ಪ್ರವಾಸೋದ್ಯಮ ಕ್ಷೇತ್ರವನ್ನು ಸುಧಾರಿಸಲು ಮತ್ತು ಪ್ರವಾಸಿಗರಿಗೆ ಉತ್ತಮ ಸಾರಿಗೆ ಸೇವೆಗಳನ್ನು ಒದಗಿಸಲು ಸಹಾಯ ಮಾಡಲಿದೆ. ಅದಲ್ಲದೇ  ಉದ್ಯಮಿಗಳಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಒಂದು ಮಾರ್ಗವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮೇಘಾಲಯ ಸರ್ಕಾರವು ಪ್ರವಾಸೋದ್ಯಮ ಉದ್ಯಮಿಗಳಿಗೆ ಪ್ರೀಮಿಯಂ ಪ್ರವಾಸಿ ವಾಹನಗಳನ್ನು ಖರೀದಿಸಲು ಹಣಕಾಸಿನ ನೆರವು ನೀಡುತ್ತಿದೆ. "ಇದು ನಮ್ಮ ರಾಜ್ಯದಲ್ಲಿ 'ಹೈ-ಕ್ವಾಲಿಟಿ ಪ್ರವಾಸೋದ್ಯಮವನ್ನು' ಉತ್ತೇಜಿಸುವ ಮೊದಲ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ, ಪ್ರವಾಸೋದ್ಯಮ ಹೆಚ್ಚಾಗಿಸಲು ಸಹಾಯ ಒದಗಿಸಲಾಗುವುದು" ಎಂದು ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

ಕೃಷಿ ವಾಹನಗಳ ಕುರಿತು, ಮುಖ್ಯಮಂತ್ರಿಗಳು ವಾಹನಗಳನ್ನು ರೈತ ಸಂಘಗಳು ಮತ್ತು ಗುಂಪುಗಳಿಗೆ ನೀಡಲಿದ್ದಾರೆ. ಇದರಿಂದಾಗಿ ರೈತರು ಬಲವಾದ ಸಾರಿಗೆ ಜಾಲವನ್ನು ಪಡೆಯಲಿದ್ದು ಅದು ಅಂತಿಮವಾಗಿ ರೈತರಿಗೆ ಸಹಾಯ ಮಾಡಲಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net