ಮೇಘಾ-ಸಾಯಿ ನಿಶ್ಚಿತಾರ್ಥ: ಆರು ವರ್ಷಗಳ ಪ್ರೀತಿಯ ಟ್ರೇಲರ್ ರಿಲೀಸ್

megha
Published on

ನಿತಿನ್ ನಾಯಕನಾಗಿದ್ದ ತೆಲುಗಿನ ‘ಲೀ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದವರು ನಟಿ ಮೇಘಾ ಅಕಾಶ್. ಬಳಿಕ ತಮಿಳಿನ ‘ಪೆಟ್ಟಾ’, ‘ಯಾದುಂ ಊರೆ, ಯಾರೆನ್ ಕೇಳಿರ್’, ಹಿಂದಿಯ ‘ರಾಧೆ’, ತೆಲುಗಿನ ‘ರಾವಣಾಸುರ’, ‘ಮನು ಚರಿತ’ ಹಾಗೂ ಇತ್ತೀಚೆಗೆ ತೆರೆಕಂಡಿದ್ದ ‘ಮಳೈ ಪಿಡಿಕ್ಕತ ಮನಿತನ್’ ಸೇರಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಖ್ಯಾತಿ ಮೇಘಾಗೆ ಸಲ್ಲುತ್ತದೆ. ಸದ್ಯ ಅವರು ತೆಲುಗಿನ ‘ಸಹ ಕುಟುಂಬನಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಮೇಘಾ ಬಹುಕಾಲದ ಗೆಳೆಯ ಸಾಯಿ ವಿಷ್ಣು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆ.22ರಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಜೋಡಿ ಉಂಗುರ ಬದಲಾಯಿಸಿಕೊಂಡಿದೆ. ನಿಶ್ಚಿತಾರ್ಥದ ಫೋಟೋಗಳನ್ನು ಮೇಘಾ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಸಿನಿ ತಾರೆಯರು ಹಾಗೂ ಅಭಿಮಾನಿಗಳು ಜೋಡಿಗೆ ಅಭಿನಂದನೆ ತಿಳಿಸಿದ್ದಾರೆ. ಈ ವರ್ಷದ ಕೊನೆಯಲ್ಲಿ ಜೋಡಿ ಹಸಮಣೆ ಏರಲಿದ್ದಾರೆ ಎನ್ನಲಾಗಿದೆ. -ಏಜೆನ್ಸೀಸ್.

ಕಿರಣ್ ಬದುಕಿನಲ್ಲಿ ರಹಸ್ಯ: 2019ರಲ್ಲಿ ತೆರೆಕಂಡಿದ್ದ ‘ರಾಜಾ ವಾರು, ರಾಣಿ ಗಾರು’ ಚಿತ್ರದಲ್ಲಿ ನಟ ಕಿರಣ್ ಅಬ್ಬಾವರಂಗೆ ನಾಯಕಿಯಾಗಿ ರಹಸ್ಯ ಗೋರಖ್ ಅಭಿನಯಿಸಿದ್ದರು. ಕಿರಣ್-ರಹಸ್ಯ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಅಲ್ಲದೇ, ಕಿರಣ್‌ಗೆ ಈ ಸಿನಿಮಾ ಸೈಮಾ ಉತ್ತಮ ನಾಯಕ ನಟ (ಡೆಬ್ಯೂ) ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಈ ರೀಲ್ ಜೋಡಿ ಇದೀಗ ರಿಯಲ್ ಲ್ೈನಲ್ಲಿ ಹಸಮಣೆ ಏರಿದೆ. ಕಿರಣ್ ಹಾಗೂ ರಹಸ್ಯ ಕೊಡಗಿನಲ್ಲಿ ಹಿಂದು ಸಂಪ್ರದಾಯದಂತೆ ಆ. 22ರಂದು ಮದುವೆಯಾಗಿದ್ದಾರೆ. ಮದುವೆ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ. ಸದ್ಯ ತೆಲುಗಿನ ‘ಕಾ’ ಚಿತ್ರದಲ್ಲಿ ಕಿರಣ್-ರಹಸ್ಯ ಒಟ್ಟಿಗೆ ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net