ಮೆಗ್ಗಾನ್‌ನಲ್ಲಿ ಮೊದಲ ಬಾರಿ ಕಾಕ್ಲಿಯರ್ ಇಂಪ್ಲಾಂಟ್ ಆಪರೇಷನ್

1 smg 13
Published on

ಶಿವಮೊಗ್ಗ: ನಾಲ್ಕೂವರೆ ವರ್ಷದ ಮಗುವಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೊತ್ತಮೊದಲ ಬಾರಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಿದ್ದು ಯಶಸ್ವಿಯಾಗಿದೆ.

ಜನಿಸುವಾಗಲೇ ಕಿವುಡುತನದಿಂದ ಬಳಲುತ್ತಿದ್ದ ಶಿಕಾರಿಪುರ ತಾಲೂಕಿನ ನರಸಪುರದ ನಾಲ್ಕೂವರೆ ವರ್ಷದ ವರ್ಷಿಣಿ ಎಂಬಾಕೆಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಬುಧವಾರ ಇಎನ್‌ಟಿ(ಕಿವಿ, ಮೂಗು ಮತ್ತು ಗಂಟಲು) ತಜ್ಞರ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರಿನ ಡಾ. ಶಂಕರ್ ಮಡಿಕೇರಿ ನೇತೃತ್ವದಲ್ಲಿ ಆಪರೇಷನ್ ಮಾಡಲಾಯಿತು. ಸತತ ಎರಡು ಗಂಟೆಯ ಶಸ್ತ್ರಚಿಕಿತ್ಸೆ ಯಶಸ್ವಿಗೊಂಡಿದ್ದು ಇನ್ನೊಂದು ವರ್ಷದಲ್ಲಿ ವರ್ಷಿಣಿಗೆ ಕಿವಿ ಕೇಳುವುದರ ಜತೆಗೆ ಮಾತನಾಡಲು ಸಾಧ್ಯವಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ಇದುವರೆಗೆ ಸುಸಜ್ಜಿತ ಯಂತ್ರ, ಆಪರೇಷನ್ ಥಿಯೇಟರ್ ಇದ್ದರೂ ಕಾಕ್ಲಿಯರ್ ಇಂಪ್ಲಾಂಟ್ ಸಮಸ್ಯೆಗೆ ನುರಿತ ಶಸ್ತ್ರಚಿಕಿತ್ಸಕರು ಇರಲಿಲ್ಲ. ಹಾಗಾಗಿ ಮಕ್ಕಳನ್ನು ಬೇರೆಡೆ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತಿತ್ತು. ಇದಕ್ಕೆ 10ರಿಂದ 12 ಲಕ್ಷ ರೂ.ವರೆಗೂ ವೆಚ್ಚವಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಆಯುಷ್ಮಾನ್ ಭಾರತ ಯೋಜನೆಯಡಿ ಈ ಚಿಕಿತ್ಸೆ ಸೇರಿಸಿದ್ದು ಬಡ ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 800ರಿಂದ 1 ಸಾವಿರ ಮಕ್ಕಳು ಜನಿಸುತ್ತವೆ. ಎಲ್ಲ ಮಕ್ಕಳಿಗೂ ಕಿವಿ ತಪಾಸಣೆ ಮಾಡಲಾಗುತ್ತದೆ. ಆದರೆ ತಾಲೂಕು ಆಸ್ಪತ್ರೆಗಳಲ್ಲಿ ಈ ವ್ಯವಸ್ಥೆ ಇಲ್ಲ. ಶಸ್ತ್ರಚಿಕಿತ್ಸೆ ಬಳಿಕ ಕೇಳಲು, ಮಾತನಾಡಲು ಒಂದು ವರ್ಷ ಸಮಯ ತೆಗೆದುಕೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net