

ಕೇರಳ; ಓಣಂ ಹಬ್ಬದಂದು ತರಾವರಿ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಮುಖ್ಯವಾಗಿ ಬಾಳೆ ಎಲೆಯಲ್ಲಿ ಭಕ್ಷ್ಯಗಳನ್ನು ಬಡಿಸಲಾಗುತ್ತದೆ. ಹಾಗೆಯೇ ನೆಲದ ಮೇಲೆ ಕುಳಿತು ಓಣಂ ಔತಣಕೂಟವನ್ನು ಮನೆಮಂದಿ ಸೇರಿ ಸವಿಯುತ್ತಾರೆ. 'ಓಣಸದ್ಯ' ಎಂಬ ಹೆಸರಿನಲ್ಲಿ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಈ ಕ್ರಮದಲ್ಲಿ, ಕೇರಳದ ಕಾಲೇಜಿನಲ್ಲಿ 399 ಬಗೆಯ ಖಾದ್ಯಗಳನ್ನು ಒಳಗೊಂಡ ಓಣಸದ್ಯ ಗಿನ್ನಿಸ್ ದಾಖಲೆ ಪುಸ್ತಕಕ್ಕೆ ಸೇರಿದೆ. ಇದರಲ್ಲಿ ಒಟ್ಟು 204 ವಿದ್ಯಾರ್ಥಿಗಳು ಮತ್ತು 11 ಶಿಕ್ಷಕರು ಭಾಗವಹಿಸಿದ್ದರು.
ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಷ್ಟೊಂದು ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲು ಮಾಡಿದ ಪ್ರಯತ್ನವನ್ನು ಜನರು ಶ್ಲಾಘಿಸಿದ್ದಾರೆ.
2022 ರಲ್ಲಿ, ಅವರು 241 ಭಕ್ಷ್ಯಗಳನ್ನು ತಯಾರಿಸಿ ಏಷ್ಯನ್ ಬುಕ್ ಆಫ್ ರೆಕಾರ್ಡ್ನಲ್ಲಿ ಗುರುತಿಸಲ್ಪಟ್ಟರು. 2023 ರಲ್ಲಿ ಅವರು, 321 ಭಕ್ಷ್ಯಗಳೊಂದಿಗೆ ತಮ್ಮದೇ ಆದ ದಾಖಲೆಯನ್ನು ನಿರ್ಮಿಸಿದ್ದರು. ಆದಾಗ್ಯೂ 2025 ರಲ್ಲಿ, ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು ಕಾಲೇಜಿನ ಶಿಕ್ಷಕರ ಸಾಮೂಹಿಕ ಪ್ರಯತ್ನದಿಂದಾಗಿ 399 ಭಕ್ಷ್ಯಗಳನ್ನು ತಯಾರು ಮಾಡಲಾಗಿತ್ತು.
(ಏಜೆನ್ಸೀಸ್)
ಇನ್ನೂ ಈ ವಿಡಿಯೋಗೆ ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಒಂದು ಕಡೆ ಐಷಾರಾಮಿ ಮತ್ತು ಇನ್ನೊಂದು ಕಡೆ ಹಸಿವು ಎಂದು ಒಬ್ಬ ಇನ್‌ಸ್ಟಾಗ್ರಾಮ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಇದು ಮೂರ್ಖತನದ ಪ್ರದರ್ಶನ, ಓಣಸದ್ಯ ಸಾಂಪ್ರದಾಯಿಕವಾಗಿರಬೇಕು! ಗಿನ್ನಿಸ್ ವಿಶ್ವ ದಾಖಲೆಗಾಗಿ ಅಲ್ಲ ಎಂದು ಹೇಳಿದ್ದಾರೆ.