ಜೆಸಿಐ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ನಾಡಿದ್ದು ಸಭೆ

jci
Published on

ಶಿವಮೊಗ್ಗ: ಜೆಸಿಐ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಅಂಕುರ್ ಜುನ್‌ಜುನ್‌ವಾಲಾ ಅವರು ಜು.23ರಂದು ವಲಯ 24ಕ್ಕೆ ಅಧಿಕೃತ ಭೇಟಿ ನೀಡುವರು ಎಂದು ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಸಂಸ್ಥೆ ಅಧ್ಯಕ್ಷ ಗಣೇಶ್ ಹೇಳಿದರು.

ಜು.23ರಂದು ಬೆಳಗ್ಗೆ 11ಕ್ಕೆ ಆಗಮಿಸುವ ಅಂಕುರ್ ಅವರನ್ನು ವಿಮಾನ ನಿಲ್ದಾಣದಿಂದ ಸರ್ಕಾರಿ ನೌಕರರ ಭವನದವರೆಗೆ ಕಾರು, ಬೈಕ್ ರ‌್ಯಾಲಿ ಮೂಲಕ ಕರೆತರಲಾಗುವುದು. ಸಹ್ಯಾದ್ರಿ ಕಾಲೇಜಿನ ಎಲ್ಲ ವಿಭಾಗಗಳ ಸಹಯೋಗದೊಂದಿಗೆ ಕಾಲೇಜಿನ ಮುಂಭಾಗದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಧ್ಯಾಹ್ನ 12ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲೆಯ ಎಲ್ಲ ಘಟಕಗಳ ಅಧ್ಯಕ್ಷರೊಂದಿಗೆ ಸಭೆ ನಡೆಸುವರು. ಮುಖ್ಯ ಅತಿಥಿಗಳಾಗಿ ವಲಯ 24ರ ಅಧ್ಯಕ್ಷ ಸಿ.ಎ.ಗೌರೀಶ್ ಭಾರ್ಗವ್, ವಲಯ 24ರ ವ್ಯಾಪ್ತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರ ಪ್ರವಾಸ ನಿರ್ದೇಶಕ ಸುದರ್ಶನ್ ತಾಯಿಮನೆ, ಜೆಸಿಐನ ಎಲ್ಲ ಹಿರಿಯ ಸದಸ್ಯರು ಭಾಗವಹಿಸುವರು ಎಂದರು.

ರಾಷ್ಟ್ರೀಯ ಅಧ್ಯಕ್ಷರ ಭೇಟಿ ಸಂದರ್ಭದಲ್ಲಿ ಜೆಸಿಐನ ಎರಡು ಯೋಜನೆಗಳನ್ನು ಉದ್ಘಾಟಿಸುವರು. ಪೊಲೀಸ್ ಬ್ಯಾರಿಕೇಡ್, ಸ್ವಾಗತದ ಬೋರ್ಡ್ ನೀಡುವರು. ಸಾರ್ವಜನಿಕರನ್ನು ಭೇಟಿ ಮಾಡಿ ಜೆಸಿಐಗೆ ಏಕೆ ಸೇರಬೇಕು ಎಂಬ ಬಗ್ಗೆ ಅರಿವು ಮೂಡಿಸುವರು ಎಂದು ತಿಳಿಸಿದರು. ಜೆಸಿಐ ಪ್ರಮುಖರಾದ ರೇಖಾ ರಂಗನಾಥ್, ಗೌರೀಶ್ ಭಾರ್ಗವ್, ನವೀನ್ ತಲಾರಿ, ರುದ್ರೇಶ್, ಸ್ಮಿತಾ, ನಿವೇದಿತಾ, ಸ್ವಾತಿ, ಜಿ.ವಿಜಯಕುಮಾರ್, ಗಣೇಶ್ ಪೈ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net