ಸರ್ಕಾರಿ ಆಸ್ಪತ್ರೆ ಅಭಿವೃದ್ಧಿಗೆ ಬೇಕು ಸಹಕಾರ

ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ರಕ್ಷಾ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಿತು. ಡಾ.ಸುನೀಲ್ ಜತ್ತನ್ನ, ಪುತ್ತು ಬಾವ, ಪುಷ್ಪರಾಜ ಕೊಲಕಾಡಿ ಇದ್ದರು.
ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ರಕ್ಷಾ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಿತು. ಡಾ.ಸುನೀಲ್ ಜತ್ತನ್ನ, ಪುತ್ತು ಬಾವ, ಪುಷ್ಪರಾಜ ಕೊಲಕಾಡಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ ರಕ್ಷಾ ಸಮಿತಿ ಸದಸ್ಯರ ಸಭೆ
  • ಸಿಆರ್ ಸಿಸ್ಟಮ್ ಹಾಗೂ ದಂತ ಎಕ್ಸ್ ರೇ ಉದ್ಘಾಟನೆ
  • ರೂಟ್ ಕ್ಯಾನಲ್ ಟ್ರೀಟ್ಮೆಂಟ್ ಆರಂಭಿಸಲು ತೀರ್ಮಾನ
ಮೂಲ್ಕಿ: ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ ಬಡವರಿಗೆ ಉತ್ತಮ ಸ್ಪಂದನೆ ನೀಡುತ್ತಿದೆ, ಸರ್ಕಾರಿ ಆಸ್ಪತ್ರೆ ಎಂಬ ತಾತ್ಸಾರ ಮನೋಭಾವ ಬಿಟ್ಟು ಜನರು ಆಸ್ಪತ್ರೆ ಅಭಿವೃದ್ಧಿಗೆ ಸಹಕಾರ ನೀಡಬೇಕು. ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಸದನದಲ್ಲಿ ಪ್ರಸ್ತಾಪ ಮಾಡಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ರಕ್ಷಾ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಡಾ.ಸುನೀಲ್ ಜತ್ತನ್ನ ಮಾತನಾಡಿ,138 ವರ್ಷಗಳ ಇತಿಹಾಸವಿರುವ ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರವನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಬೇಕು, ಆಸ್ಪತ್ರೆಗೆ ಸಿಬ್ಬಂದಿ ಕೊರತೆ, ವಸತಿಗೃಹದ ಬಳಿಯ ಕೊಳವೆಬಾವಿಯಿಂದ ನೀರು ಪೂರೈಕೆಯ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು, ಆಸ್ಪತ್ರೆಗೆ ಬಣ್ಣ ಬಳಿದು ನವೀಕರಣಗೊಳಿಸುವುದು, ದ್ರವ ತ್ಯಾಜ್ಯದ ವಿಲೇವಾರಿಗೆ ಸೂಕ್ತ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು, ವಿದ್ಯುತ್ ಸಂಪರ್ಕದ ವೈರ್‌ಗಳು, ನೀರಿನ ಟ್ಯಾಂಕ್ ಹಳೆಯದಾಗಿದ್ದು, ದುರಸ್ತಿ ಕಾರ್ಯ ನಡೆಸಬೇಕು, ಜೈವಿಕ ವೈದ್ಯಕೀಯ ತ್ಯಾಜ್ಯದ ಶೇಖರಣೆಗಾಗಿ ಹೊಸ ಕೊಠಡಿ ಅಗತ್ಯ, ಆಸ್ಪತ್ರೆಯ ವಾರ್ಡ್ ಗಳಲ್ಲಿ ಮೇಲ್ಛಾವಣಿ ಮಳೆಗೆ ಸೋರಿಕೆಯಾಗುತ್ತಿದ್ದು ದುರಸ್ತಿಗೊಳಿಸಬೇಕು ಎಂಬ ಬೇಡಿಕೆ ಮಂಡಿಸಿ ಸರ್ವರ ಸಹಕಾರ ಕೋರಿದರು.

ಸಿಆರ್ ಸಿಸ್ಟಮ್ ಉದ್ಘಾಟನೆ

ಆಸ್ಪತ್ರೆಯ ಕ್ಷ ಕಿರಣ ವಿಭಾಗದಲ್ಲಿ ನೂತನವಾಗಿ ಅಳವಡಿಸಿರುವ ಸಿಆರ್ ಸಿಸ್ಟಮ್ ಹಾಗೂ ದಂತ ಎಕ್ಸ್ ರೇ ಗಳನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು, ದಂತ ವಿಭಾಗದಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಸಹಯೋಗದೊಂದಿಗೆ ಎಂಡೋ ಡೆಂಟಿಸ್ಟ್ ಹಾಗೂ ರೂಟ್ ಕ್ಯಾನಲ್ ಟ್ರೀಟ್ಮೆಂಟ್ ಆರಂಭಿಸಲು ತೀರ್ಮಾನಿಸಲಾಯಿತು ಮತ್ತು ಸಮುದಾಯ ಆಸ್ಪತ್ರೆ ಅಭಿವೃದ್ಧಿಗೆ ಸಹಕಾರ ನೀಡಿದ ನಿವೃತ್ತ ತಾಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ ಅವರನ್ನು ಗೌರವಿಸಲಾಯಿತು.
ಆರೋಗ್ಯ ರಕ್ಷಾ ಕಾರ್ಯಕಾರಿ ಸಮಿತಿ ಸದಸ್ಯರಾದ ಪುತ್ತು ಬಾವ, ಪುಷ್ಪರಾಜ ಕೊಲಕಾಡಿ, ರಮೇಶ್, ಮೂಲ್ಕಿ ನಪಂ ಮಾಜಿ ಅಧ್ಯಕ್ಷರಾದ ಸುನೀಲ್ ಆಳ್ವ, ಸತೀಶ್ ಅಂಚನ್, ಸುಭಾಷ್ ಶೆಟ್ಟಿ, ಮಾಜಿ ಸದಸ್ಯ ಶೈಲೇಶ್ ಕುಮಾರ್, ಮೂಲ್ಕಿ ಪೊಲೀಸ್ ನಿರೀಕ್ಷಕ ಮಂಜುನಾಥ್ ಬಿ.ಎಸ್., ವೈದ್ಯರಾದ ಡಾ.ಲೆವಿನಾ, ಡಾ.ಕೃಷ್ಣಪ್ರಸಾದ್, ಡಾ.ಜಗದೀಶ್, ಡಾ.ಸಂಗೀತಾ, ಡಾ.ದಿವ್ಯ ರಾವ್, ಡಾ.ವೇಣುಗೋಪಾಲ್, ಮುಕ್ಕ ಆಸ್ಪತ್ರೆಯ ಎಚ್.ಒ.ಡಿ. ಡಾ.ಶ್ರೀವಿದ್ಯಾ ಭಟ್, ಜಿಪಂ ಇಂಜಿನಿಯರ್ ಪ್ರಶಾಂತ್ ಆಳ್ವ, ತಾಪಂ ಇ.ಒ. ಗುರುದತ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತಿನ್ ಪುತ್ರನ್, ನರ್ಸಿಂಗ್ ಸ್ಟಾಪ್ ಶಾಂತಿ ಫರ್ನಾಂಡಿಸ್, ರಚನಾ ಇಂದ್ರ, ಮೀರಾ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net