ಸೆ.29ಕ್ಕೆ ನಿವೃತ್ತ ಶಿಕ್ಷಕರ ಸಂಘಗಳ ಒಕ್ಕೂಟದ ಸಭೆ

Retired Teachers union
ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿವೃತ್ತ ಶಿಕ್ಷಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರೊ. ಕೆ.ಜಿ.ಲೋಕೇಶ್ ಮಾತನಾಡಿದರು. ಜಿಲ್ಲಾಧ್ಯಕ್ಷ ಡಾ. ಬಿ.ಸಿ.ಗೌಡರ ಶಿವಣ್ಣನವರ್, ಉಪಾಧ್ಯಕ್ಷ ಪ್ರೊ. ಎಚ್.ಎಂ.ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಬಿ.ಯು.ಕಣ್ಣಪ್ಪನವರ್, ಖಜಾಂಚಿ ಪ್ರೊ. ಆರ್.ಮಂಜುನಾಥ್ ಇದ್ದರು.
Published on

ಶಿವಮೊಗ್ಗ: ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿವೃತ್ತ ಶಿಕ್ಷಕರ ಸಂಘಗಳ ಒಕ್ಕೂಟದಿಂದ 75 ವರ್ಷಗಳ ಹಿರಿಯ ಆಜೀವ ಸದಸ್ಯರಿಗೆ ಸನ್ಮಾನ ಹಾಗೂ 3ನೇ ವಾರ್ಷಿಕ ಸಭೆಯನ್ನು ಸೆ.29ರ ಬೆಳಗ್ಗೆ 10ಕ್ಕೆ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಪ್ರೊ. ಕೆ.ಜಿ.ಲೋಕೇಶ್ ಹೇಳಿದರು.

2018ರಲ್ಲಿ 18 ಸಮಾನಮನಸ್ಕರ ನಿವೃತ್ತ ಸ್ನೇಹಿತರೊಂದಿಗೆ ಬೆಂಗಳೂರಿನಿಂದ ಆರಂಭವಾದ ಸಂಘಟನೆ ಇಂದು 3 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಒಕ್ಕೂಟದಲ್ಲಿ ಕೇವಲ ನಿವೃತ್ತ ಶಿಕ್ಷಕರಲ್ಲದೆ ಅನೇಕ ವಿಶ್ವವಿದ್ಯಾಲಯಗಳ ವಿಶ್ರಾಂತ ಕುಲಪತಿಗಳೂ ಸದಸ್ಯತ್ವ ಪಡೆದಿದ್ದಾರೆ. ಸಂಘಟನೆ ಕೇವಲ ನಮ್ಮ ಹಕ್ಕುಗಳ ಬಗ್ಗೆಯೇ ಒತ್ತು ಕೊಡದೆ ಅನೇಕ ಸಮಾಜಮುಖಿ ಕಾರ್ಯಕ್ರಮ ನಡೆಸುತ್ತಿದೆ. ಕೆಲವು ಸದಸ್ಯರು ಆಯ್ದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಮೂಲ ಸೌಲಭ್ಯ ಕಲ್ಪಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿವೃತ್ತ ಶಿಕ್ಷಕರು ವಾಸವಾಗಿರುವ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ಇದ್ದಲ್ಲಿ ಸ್ವಯಂಪ್ರೇರಿತರಾಗಿ ಉಚಿತವಾಗಿ ಪಾಠ ಮಾಡುತ್ತೇವೆ ಮತ್ತು ಮೆಂಟರ್‌ಗಳಾಗಿ ಕಾರ್ಯನಿರ್ವಹಿಸಲು ಸಿದ್ಧರಿದ್ದೇವೆ ಎಂದು ಒಕ್ಕೂಟವು ಈಗಾಗಲೇ ಸರ್ಕಾರಕ್ಕೆ ಪತ್ರ ಬರೆದಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿರುವ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಉಚಿತ ರಕ್ತ ಪರೀಕ್ಷೆ ಮತ್ತು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಎಸ್.ಎಲ್.ಬೋಜೇಗೌಡ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮತ್ತಿತರರು ಭಾಗವಹಿಸುವರು ಎಂದು ತಿಳಿಸಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಡಾ. ಬಿ.ಸಿ.ಗೌಡರ ಶಿವಣ್ಣನವರ್, ಉಪಾಧ್ಯಕ್ಷ ಪ್ರೊ. ಎಚ್.ಎಂ.ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಡಾ. ಬಿ.ಯು.ಕಣ್ಣಪ್ಪನವರ್, ಖಜಾಂಚಿ ಪ್ರೊ. ಆರ್.ಮಂಜುನಾಥ್, ಸದಸ್ಯರಾದ ವೇಣುಗೋಪಾಲ ರೆಡ್ಡಿ, ಸದಾನಂದ ಹೆಗಡೆ, ದಾಕ್ಷಾಯಿಣಮ್ಮ, ಚಂದ್ರಮೌಳಿ, ಎಂ.ಚಂದ್ರಪ್ಪ, ಧನಂಜಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net