ಶ್ವಾನ ಪ್ರೇಮ; 116 ಶ್ವಾನ ಸಾಕಿ, 45 ಕೋಟಿ ರೂ. ಆಸ್ತಿ ಮೀಸಲಿಟ್ಟ ನಟ ಮಿಥುನ್ ಚಕ್ರವರ್ತಿ...

mithunchakraborty
Published on

ಮುಂಬೈ: ಬಾಲಿವುಡ್‌ ನಟ ಮಿಥುನ್ ಚಕ್ರವರ್ತಿ ದೊಡ್ಡ ಶ್ವಾನ ಪ್ರೇಮಿ. ಮುಂಬೈ ಮತ್ತು ಭಾರತದ ಇತರ ಭಾಗಗಳಲ್ಲಿ ತನ್ನ ವಿವಿಧ ಆಸ್ತಿಗಳಲ್ಲಿ ನಟ 116 ನಾಯಿಗಳನ್ನು ಸಾಕಿದ್ದಾರೆ. ಯೋಗಿತಾ ಬಾಲಿಯವರನ್ನು ಮದುವೆಯಾದ ಮಿಥುನ್ ಚಕ್ರವರ್ತಿ ನಾಲ್ಕು ಮಕ್ಕಳ ತಂದೆಯೂ ಹೌದು. ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಮಗುವನ್ನು ದತ್ತು ಪಡೆದು ಸಾಕಿರುವ ಮಿಥುನ್ ನಟನೆಯಿಂದ ಮಾತ್ರವಲ್ಲ ವೈಯಕ್ತಿಕ ಜೀವನದ ಮೂಲಕವೂ ಗಮನ ಸೆಳೆಯುತ್ತಾರೆ.

ಮುಂಬೈ ಬಳಿಯ ಮಡ್ ಐಲ್ಯಾಂಡ್‌ನಲ್ಲಿರುವ ತಮ್ಮ 1.5 ಎಕರೆ ಜಾಗದಲ್ಲಿ ನಟ 76 ನಾಯಿಗಳಿವೆಯಂತೆ. ಇವರ ಆಸ್ತಿ ಸುಮಾರು 45 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಇದರಲ್ಲಿ ಅವರ ವೈಯಕ್ತಿಕ ನಿವಾಸವೂ ಒಂದು. ಆದರೆ, ಜಾಗದ ಹೆಚ್ಚಿನ ಭಾಗವನ್ನು ನಾಯಿಗಳಿಗೆ ಮೀಸಲಿಟ್ಟಿದ್ದಾರೆ. ನಾಯಿಗಳಿಗಾಗಿ ಕೆನಲ್‌ಗಳು ಮತ್ತು ಆಟದ ಮೈದಾನಗಳ ವ್ಯವಸ್ಥೆ ಮಾಡಿದ್ದಾರೆ ಮಿಥುನ್. ನಾಯಿಗಳಿಗೆ ಬೇಕಾದ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಈ ಕೆನಲ್ ಹೊಂದಿದೆ.

ಹಿಂದಿನ ವರ್ಷ ಸಂದರ್ಶನವೊಂದರಲ್ಲಿ ಮಿಥುನ್ ಚಕ್ರವರ್ತಿ ಸೊಸೆ ನಟಿ ಮದಾಲ್ಸಾ ಶರ್ಮಾ ನಾಯಿಗಳ ಬಗ್ಗೆ ಮಾತನಾಡಿದ್ದರು. ನಾಯಿಗಳಿಗೆ ಪ್ರತ್ಯೇಕ ಕೊಠಡಿಗಳಿವೆ. ನಾಯಿಗಳನ್ನು ನೋಡಿಕೊಳ್ಳಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ನಾಯಿಯನ್ನು ಮಕ್ಕಳಂತೆ ನೋಡಿಕೊಳ್ಬೇಕು. ಅವರನ್ನು ಆರೈಕೆ ಮಾಡ್ಬೇಕು. ಅವರಿಗೆ ಸಮಯಕ್ಕೆ ಸರಿಯಾಗಿ ಆಹಾರ ನೀಡ್ಬೇಕು. ನಾಯಿಯನ್ನು ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿರುವ ನಾಯಿಗಳನ್ನು ನೋಡಿಕೊಳ್ಳಲು ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇರುತ್ತದೆ ಎಂದು ಅವರು ಹೇಳಿದ್ದರು.

70ರ ದಶಕದ ಮಧ್ಯಭಾಗದಲ್ಲಿ ಬಾಲಿವುಡ್ ಗೆ ಕಾಲಿಟ್ಟ ನಟ ಮಿಥುನ್ ಚಕ್ರವರ್ತಿ. ಆರಂಭದಲ್ಲಿ  ರೈಲ್ವೆ ನಿಲ್ದಾಣ, ಫುಟ್ಬಾತ್‌ನಲ್ಲಿ ಮಲಗಿದ್ದಿದೆ. ಆದ್ರೆ ಕಾಲ ಹಾಗೇ ಇರಲಿಲ್ಲ. ಒಂದಾದ್ಮೇಲೆ ಒಂದರಂತೆ ಹಿಟ್ ಚಿತ್ರಗಳನ್ನು ನೀಡಿದ ಮಿಥುನ್ ಚಕ್ರವರ್ತಿ ಈಗ ಕೋಟ್ಯಾಧಿಪತಿ. ಮಿಥುನ್ ಬಳಿ ಸುಮಾರು 400 ಕೋಟಿ ಮೌಲ್ಯದ ಆಸ್ತಿ ಇದೆ. ಮಡ್ ಐಲ್ಯಾಂಡ್, ಊಟಿಯಲ್ಲೂ ಮಿಥುನ್ ಮನೆ ಹೊಂದಿದ್ದಾರೆ. ಅಲ್ಲದೆ ಹಲವಾರು ಹೊಟೇಲ್, ಕಾಟೇಜ್ ಮಾಲೀಕ. ಮುಂಬೈ ಬಳಿ ಫಾರ್ಮ್ ಹೌಸ್ ಹೊಂದಿರುವ ಮಿಥುನ್ ಚಕ್ರವರ್ತಿ, ಮೈಸೂರಿನಲ್ಲೂ ಆಸ್ತಿ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net