VIDEO: ಕೊಹ್ಲಿ ಇಷ್ಟ... ಧೋನಿಯ ಹೆಲಿಕಾಪ್ಟರ್ ಶಾಟ್​ನಂತೆ ನಾನೂ ಸಿಕ್ಸರ್ ಸಿಡಿಸಬೇಕು; ಬಾಲಕಿಯ ಬ್ಯಾಟಿಂಗ್ ನೋಡಿ ಫಿದಾ ಆದ ನೆಟ್ಟಿಗರು!

Girl Play cricket
Published on

ಲಡಾಖ್​: ಶಾಲೆಯೊಂದರಲ್ಲಿ ಬಾಲಕಿಯರು ಕ್ರಿಕೆಟ್ ಆಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ಬಾಲಕಿಯೊಬ್ಬಳ ಬ್ಯಾಟಿಂಗ್ ನೋಡಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ಮಕ್ಸೂಮಾ ಎಂಬ ಆರನೇ ತರಗತಿಯ ಹುಡುಗಿ ಬ್ಯಾಟ್ ಬೀಸಿದ್ದಾಳೆ. ತನ್ನ ತಂಡದ ಪರ ಅದ್ಭುತವಾಗಿ ಬ್ಯಾಟಿಂಗ್ ಮಾಡಿ, ಎಲ್ಲರೂ ಮೆಚ್ಚುವಂತಹ ಹೊಡೆತೆಗಳನ್ನು ಹೊಡೆದಿದ್ದಾಳೆ. ಬಾಲಕಿಯ ಈ ಬ್ಯಾಟಿಂಗ್ ವಿಡಿಯೋವನ್ನು ಲಡಾಖ್ ಶಾಲಾ ಶಿಕ್ಷಣ ನಿರ್ದೇಶನಾಲಯ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದೀಗ ಈ ವಿಡಿಯೋ 3 ಲಕ್ಷಕ್ಕೂ ಹೆಚ್ಚಿನ ವೀಕ್ಷಣೆ ಪಡೆದಿದೆ.

ಬಾಲಕಿ ತನ್ನ ಸಹಪಾಠಿಗಳೊಂದಿಗೆ ಕ್ರಿಕೆಟ್ ಆಡಿದ್ದು, ಗಮನ ಸೆಳೆಯುವಂತೆ ಬ್ಯಾಟಿಂಗ್ ಮಾಡಿದ್ದಾಳೆ. ಈಕೆಯ ಹೊಡೆತಕ್ಕೆ ಬಾಲ್​ ಮೈದಾನದಿಂದಲೇ ಹೊರ ಹೋಗಿದೆ. ಈ ವೇಳೆ ವಿಡಿಯೋ ಮಾಡಿದ ವ್ಯಕ್ತಿ, ನಿನ್ನ ಇಷ್ಟದ ಕ್ರಿಕೆಟ್ ಆಟಗಾರ ಯಾರು ಎಂದು ಕೇಳಿದ್ದಾರೆ. ಕೂಡಲೇ ವಿರಾಟ್ ಕೊಹ್ಲಿ ನೆಚ್ಚಿನ ಕ್ರಿಕೆಟರ್. ನನಗೆ ಧೋನಿ ಹೆಲಿಕಾಪ್ಟರ್ ಶಾಟ್ ಇಷ್ಟ. ಅದನ್ನು ನಾನು ಅಭ್ಯಾಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾಳೆ.

ನನ್ನ ತಂದೆ ಹಾಗೂ ಶಾಲೆಯಲ್ಲಿ ಶಿಕ್ಷಕರು ಕ್ರಿಕೆಟ್ ಆಡಲು ಸದಾ ಪ್ರೋತ್ಸಾಹಿಸುತ್ತಾರೆ. ನಾನು ವಿರಾಟ್ ಕೊಹ್ಲಿಯಂತೆ ಆಡಲು ಅಭ್ಯಾಸ ನಡೆಸುತ್ತಿದ್ದೇನೆ ಎಂದು ಬಾಲಕಿ ಮಕ್ಸೂಮಾ ಹೇಳಿಕೊಂಡಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net