ಭಾರತದ ಶ್ರೀಮಂತ ಗಾಯಕಿ ಯಾರು ಗೊತ್ತೇ? ಆಕೆ ಸಿನಿಮಾವೊಂದಕ್ಕೆ ಪಡೆವ ಸಂಭಾವನೆ 80ಕೋಟಿ ರೂ.!

tulasi kumar
Published on

ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಸಂಗೀತಕ್ಕೆ ಪ್ರಾಧಾನ್ಯತೆ ಇರುವುದು ತಿಳಿದ ಸಂಗತಿಯೇ, ಆದರೆ ಚಿತ್ರರಂಗದಲ್ಲಿ ಕೊಡುವ ಸಂಭಾವನೆ ಕಡಿಮೆಯೇ ಎಂಬ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಆದರೆ ಇದಕ್ಕೆ ಅಪವಾದ ಎಂಬಂತೆ ಗಾಯಕಿಯೊಬ್ಬರು ಹಾಡೊಂದಕ್ಕೆ 35ಲಕ್ಷ ರೂ., ಸಿನಿಮಾಗೆ 80ಲಕ್ಷ ರೂ.ಸಂಭಾವನೆ ಪಡೆಯುತ್ತಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ 200ಕೋಟಿ ರೂ.ಬೆಲೆಬಾಳುತ್ತದೆ.

ಇವರು ಆಶಾ ಭೋಂಸ್ಲೆ, ಶ್ರೇಯಾ ಘೋಷಾಲ್, ಸುನಿಧಿ ಚೌಹಾಣ್, ನೇಹಾ ಕಕ್ಕರ್... ಅಲ್ಲ, ಭಾರತದ ಈ ಶ್ರೀಮಂತ ಗಾಯಕಿ ತುಳಸಿ ಕುಮಾರ್. ಇವರು ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಭೂಷಣ್ ಕುಮಾರ್ ಅವರ ಸಹೋದರಿ ಮತ್ತು ದಿವಂಗತ ಗಾಯಕ ಮತ್ತು ಟಿ-ಸೀರೀಸ್ ಸಂಸ್ಥಾಪಕ ಗುಲ್ಶನ್ ಕುಮಾರ್ ಅವರ ಪುತ್ರಿ. ಪ್ರಸ್ತುತ ಶ್ರೇಯಾ ಘೋಷಾಲ್, ಸುನಿಧಿ ಚೌಹಾನ್ ಮತ್ತು ನೇಹಾ ಕಕ್ಕರ್ ಸೇರಿ ಹಲವರು ಈಗ ಭಾರತದ ಅಗ್ರ ಮಹಿಳಾ ಗಾಯಕಿಯರಾಗಿ ಪರಿಗಣಿಸಲ್ಪಟ್ಟಿದ್ದಾರೆ. ಲೆಜೆಂಡರಿ ಆಶಾ ಭೋಂಸ್ಲೆ ಅವರು ದಶಕಗಳಿಂದ ಹಾಡುತ್ತಿದ್ದಾರೆ ಮತ್ತು ಅವರು ಭಾರತೀಯ ಸಂಗೀತ ಉದ್ಯಮದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ. ಈ ಎಲ್ಲಾ ಗಾಯಕರು ಸಾಕಷ್ಟು ಹಣ ಮತ್ತು ಖ್ಯಾತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಭಾರತದ ಶ್ರೀಮಂತ ಮಹಿಳಾ ಗಾಯಕಿಯ ವಿಷಯಕ್ಕೆ ಬಂದರೆ, ಕಡಿಮೆ ಹೆಸರುವಾಸಿಯಾದ ಯುವ ಗಾಯಕಿ ಈ ತಾರೆಗಳಿಗಿಂತ ಮುಂದಿದ್ದಾರೆ ತುಳಸಿ ಕುಮಾರ್. ಅವರು 200 ಕೋಟಿ ರೂಪಾಯಿಗಳ ಆಸ್ತಿ ಹೊಂದಿರುವ ಶ್ರೀಮಂತ ಗಾಯಕಿಯಾಗಿದ್ದಾರೆ.

ತುಳಸಿ ಕುಮಾರ್ 2009 ರಲ್ಲಿ 'ಲವ್ ಹೋ ಜಾಯೆ' ಆಲ್ಬಂನೊಂದಿಗೆ ಗಾಯನಕ್ಕೆ ಪಾದಾರ್ಪಣೆ ಮಾಡಿದರು. 'ಮುಜೆ ತೇರಿ', 'ಬಿಲ್ಲು' ಚಿತ್ರದ 'ಲವ್ ಮೇರಾ ಹಿಟ್' ಮತ್ತು 'ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ'ನ 'ತುಮ್ ಜೋ ಆಯೆ' ಹಾಡುಗಳನ್ನು ಒಳಗೊಂಡಂತೆ ಅವರು ಅನೇಕ ಚಿತ್ರಗಳಿಗೆ ಹಾಡಿದ್ದಾರೆ. 37 ವರ್ಷ ವಯಸ್ಸಿನ ಈ ಗಾಯಕಿ ಹಿತೇಶ್ ರಾಲ್ಹಾನ್ ಅವರನ್ನು 2015 ರಲ್ಲಿ ವಿವಾಹವಾದರು. ಶ್ರೇಯಾ ಘೋಷಾಲ್ ಅವರ ಆಸ್ತಿ ಮೌಲ್ಯವು ಸುಮಾರು 180-185 ಕೋಟಿ ರೂ., ಸುನಿಧಿ ಚೌಹಾಣ್ 100 ಕೋಟಿ ರೂ.ಗೂ ಅಧಿಕ ಸಂಪತ್ತು ಹೊಂದಿದ್ದರೆ, ಪ್ರಸ್ತುತ ಆಶಾ ಭೋಂಸ್ಲೆ ಚಿತ್ರವೊಂದಕ್ಕೆ 80 ಕೋಟಿ ರೂ. ನೇಹಾ ಕಕ್ಕರ್ ಸುಮಾರು 40 ಕೋಟಿ ರೂ. ಗಾಯನ ಸಂವೇದನೆ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net