ಸ್ಟಾರ್ ಹೀರೋಯಿನ್​ಗಳ ಬಾಡಿ ಡಬಲ್​ ಆಗಿ ಕೆಲಸ ಮಾಡಿದ ವ್ಯಕ್ತಿ ಇಂದು 1500 ಕೋಟಿ ರೂ. ಒಡೆಯ

Jitendra
Published on

ಮುಂಬೈ: 1970 ಮತ್ತು 80 ರ ದಶಕದಲ್ಲಿ, ಹಿಂದಿ ಚಲನಚಿತ್ರೋದ್ಯಮವು ಅಮಿತಾಭ್ ಬಚ್ಚನ್, ಧರ್ಮೇಂದ್ರ, ವಿನೋದ್ ಖನ್ನಾ ಮತ್ತು ರಾಜೇಶ್ ಖನ್ನಾ ಅವರಂತಹ ಸೂಪರ್‌ಸ್ಟಾರ್‌ಗಳಿಂದ ಪ್ರಾಬಲ್ಯ ಹೊಂದಿತ್ತು. ಆದರೆ, ಈ ನಟ ಬಾಲಿವುಡ್​ ಪ್ರವೇಶಿಸುವ ಮೂಲಕ ಸೂಪರ್​ಸ್ಟಾರ್​ಗಳ ನಿದ್ದೆಗೆಡಿಸಿದ್ದು ಮಾತ್ರ ಸುಳ್ಳಲ್ಲ. ಈಗ ನಾವು ಮಾತನಾಡಲು ಹೊರಟಿರುವ ನಟ ಬೆಳೆದು ಬಂದ ಹಾದಿ ರೋಚಕವಾಗಿದ್ದು ಇದು ಹಲವರಲ್ಲಿ ಸ್ಫೂರ್ತಿದಾಯಕವಾಗಿದೆ.

ನಾವು ಈಗ ಮಾತನಾಡಲು ಹೊರಟಿರುವ ನಟ 200ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಬಾಲಿವುಡ್​ನ ರಿಮೇಕ್​ ಕಿಂಗ್​ ಎಂದೇ ಹೆಸರುವಾಸಿಯಾಗಿದ್ದಾರೆ. ಈ ನಟ 2005ರಲ್ಲಿ ಚಿತ್ರರಂಗ ತೊರೆದರಾದರೂ ಇಂದಿಗೂ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾರೆ. ಇವರು ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ 100 ರೂಪಾಯಿ ಎಂದು ಹೇಳಲಾಗಿದ್ದು, ಇಂದಿಗೆ ಕಿವರು 1500 ಕೋಟಿ ರೂ. ಒಡೆಯ ಎಂಬುದು ವಿಶೇಷ.

ಈಗ ನಾವು ಹೇಳಲು ಹೊರಟಿರುವ ನಟನ ಹೆಸರು ಜೀತೇಂದ್ರ ಇವರ ತಂದೆ ಮೂಲತಃ ಉದ್ಯಮಿಯಾಗಿದ್ದು, ಇದರ ಜೊತೆಗೆ ಸಿನಿಮಾಗಳ ಚಿತ್ರೀಕರಣಕ್ಕೆ ಡುಪ್ಲಿಕೇಟ್​ ಆಭರಣಗಳನ್ನು ಸರಬರಾಜು ಮಾಡುತ್ತಿದ್ದರು. ಹಾಗೆಯೇ 1963ರಲ್ಲಿ ಸೆಹ್ರಾ ಚಿತ್ರಕ್ಕೆ ಡುಪ್ಲಿಕೇಟ್​ ಆಭರಣಗಳನ್ನು ಕೊಡಲು ಸೆಟ್​ಗೆ ಭೇಟಿ ನೀಡಿದ ಸಮಯದಲ್ಲಿ ಇವರನ್ನು ನೋಡಿದ ನಿರ್ದೇಶಕ ಶಾಂತಾರಾಮ್​ ಇವರನ್ನು ಹಿರೋಯಿನ್​ನ ಬಾಡಿ ಡಬಲ್​ ಆಗಿ ಬಳಸಿಕೊಂಡರು. ಚಿತ್ರಗಳಲ್ಲಿ ಬಾಡಿ ಡಬಲ್​ ಎಂದರೆ ನಟನ ಬದಲಾಗಿ ಅವರಂತೆ ಹೋಲುವ ವ್ಯಕ್ತಿಯನ್ನು (ಮುಖ ತೋರಿಸುವುದಿಲ್ಲ) ಬಳಸಿಕೊಳ್ಳುವುದನ್ನು ಬಾಡಿ ಡಬಲ್​ ಎಂದು ಕರೆಯಲಾಗುತ್ತದೆ.

Jitendra

ಇದಾದ ಬಳಿಕ ಶಾಂತಾರಾಮ್​ ನಿರ್ದೇಶನದ ಗೀತ್ ಗಯಾ ಪಥರೋನ್ ನೇ ಚಿತ್ರದ ಮೂಲಕ ಬಾಲಿವುಡ್​ ಪ್ರದೇಶಿಸಿದ ಜೀತೇಂದ್ರ ಮೊದಲ ಚಿತ್ರಕ್ಕೆ 100 ರೂಪಾಯಿ ಸಂಭಾವನೆ ಪಡೆದರು ಎಂದು ಹೇಳಲಾಗಿದೆ. 1969ರಲ್ಲಿ ಬಿಡುಗಡೆಯಾದ ಫರ್ಜ್​ ಚಿತ್ರದ ಬಳಿಕ ರಾತ್ರೋರಾತ್ರಿ ಸ್ಟಾರ್​ ಆದ ನಟ ಜೀತೇಂದ್ರ ಬ್ಯಾಕ್​ ಟು ಬ್ಯಾಕ್​ ಹಿಟ್​ ಚಿತ್ರಗಳನ್ನು ನೀಡಿದ್ದಾರೆ.

200ಕ್ಕೂ ಅಧಿಕ ಚಲನಚಿತ್ರಗಳಲ್ಲಿ ನಟಿಸಿರುವ ಜೀತೇಂದ್ರ ಅವರನ್ನು ಬಾಲಿವುಡ್​ನ ಜಂಪಿಂಗ್​ ಜಾಕ್​ ಎಂದು ಕರೆಯಲಾಗುತ್ತದೆ. ಜೀತೀಂದ್ರ ನಟಿಸಿರುವ 200 ಚಿತ್ರಗಳಲ್ಲಿ 80ಕ್ಕೂ ಅಧಿಕ ಸಿನಿಮಾಗಳು ರಿಮೇಕ್​ ಎಂದು ಹೇಳಲಾಗಿದೆ. ನಟಿ ಜೀತೇಂದ್ರ ಅವರ ಪುತ್ರಿ ಏಕ್ತಾ ಕಪೂರ್​ ಜನಪ್ರಿಯ ನಿರ್ಮಾಪಕಿ, ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದು, ಬಾಲಿವುಡ್​ನಲ್ಲಿ ಹಲವಾರು ಸೀರಿಯಲ್, ಶೋ, ವೆಬ್​ ಸೀರೀಸ್​ಗಳನ್ನು ನಿರ್ಮಾಣಿಸಿ ನಿರ್ದೇಶಿಸಿದ್ದಾರೆ. ಇತ್ತೀಚಿಗೆ ಖ್ಯಾತ ಸುದ್ದಿ ಸಂಸ್ಥೆಯೊಂದು ಪ್ರಕಟಿಸಿದ ವರದಿ ಪ್ರಕಾರ ಜೀತೇಂದ್ರ ಅವರ ಒಟ್ಟು ಆಸ್ತಿ ಮೌಲ್ಯವು 1512 ಕೋಟಿ ರೂ ಎಂದು ತಿಳಿದು ಬಂದಿದ್ದು, ಬಾಲಿವುಡ್​ನ ಶ್ರೀಮಂತ ನಟರ ಪೈಕಿ ಒಬ್ಬರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net