ಸೌಂದರ್ಯ ಜಗದೀಶ್​ ಸೂಸೈಡ್​ ಪ್ರಕರಣ; ಸ್ನೇಹಿತ ಕೊಟ್ಟ ಸ್ಪಷ್ಟನೆ ಹೀಗಿದೆ

1 Min Read
Soundarya jagadeesh

ಬೆಂಗಳೂರು: ಖ್ಯಾತ ಉದ್ಯಮಿ, ನಿರ್ಮಾಪಕ ಸೌಂದರ್ಯ ಜಗದೀಶ್​ ಅವರ ನಿಧನ ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದೆ. ಸ್ಯಾಂಡಲ್​ವುಡ್​ನ ಖ್ಯಾತನಾಮರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಜಗದೀಶ್​ ಅವರ ಸಾವು ಹಲವು ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದ್ದು, ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.

ಇತ್ತ ಸೌಂದರ್ಯ ಜಗದೀಶ್​ ಅವರ ನಿಧನದ ಕುರಿತು ಅವರ ಗೆಳೆಯ ಶ್ರೇಯಸ್​ ಪ್ರತಿಕ್ರಿಯಿಸಿದ್ದು, ಹುಟ್ಟಿಕೊಂಡಿರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಂತೆ-ಕಂತೆಗಳಿಗೆ ಅವರು ಪುರ್ಣವಿರಾಮ ಹಾಕಿದ್ದಾರೆ.

ಇದನ್ನೂ ಓದಿ: ಶೂಟಿಂಗ್ ವೇಳೆ ಕಂಟೆಂಟ್​ ವಿಚಾರವಾಗಿ ಗಲಾಟೆ; ಭೀಕರವಾಗಿ ಪ್ರಾಣಬಿಟ್ಟ ಪ್ರೇಮಿಗಳು

ಈ ಕುರಿತು ಮಾತನಾಡಿರುವ ಶ್ರೇಯಸ್​, ಆರ್ಥಿಕ ಸಂಕಷ್ಟದಿಂದ ಸೌಂದರ್ಯ ಜಗದೀಶ್​ ಅವರು ಬಳಲುತ್ತಿದ್ದರು ಕಳೆದ ಕೆಲ ದಿನಗಳ ಹಿಂದೆ ಬ್ಯಾಂಕ್​ನವರು ನೋಟಿಸ್​ ಕೊಟ್ಟಿದ್ದರು ಇದಕ್ಕಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ. ಬ್ಯಾಂಕ್​ ನೋಟಿಸ್​ಗೂ ಅವರ ಸಾವಿಗೂ ಯಾವುದೇ ಸಂಬಂಧವಿಲ್ಲ.​ ನೋಟಿಸ್​ ಇತ್ಯಾದಿ ಎಲ್ಲ ಸುಮಾರು ದಿನದಿಂದ ಇರುವಂಥದ್ದು. ಬಿಸ್ನಿಸ್​ ಬೇರೆ, ಇದು ಬೇರೆ. ಅವರೆಡಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಸೌಂದರ್ಯ ಜಗದೀಶ್​ ಅವರಿಗೆ ಹೃದಯಾಘಾತ ಆಗಿರಬಹುದಾ ಅಥವಾ ಏನಾದರೂ ಆರೋಗ್ಯ ಸಮಸ್ಯೆ ಇದ್ದರಬಹುದಾ ಎಂಬ ಶಂಕೆ ಸಹ ವ್ಯಕ್ತವಾಗಿದೆ. ಅವರಿಗೆ ಹೃದಯಾಘಾತವಾಗಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುದ್ದಿ ತಿಳಿದ ಕೂಡಲೇ ನಾವು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೇವೆ. ಜಗದೀಶ್​ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಕಾರಣ ಏನು ಎಂಬುದನ್ನು ನಾವು ಸಡನ್​ ಆಗಿ ಹೇಳೋಕೆ ಆಗಲ್ಲ. ಹೃದಯಾಘಾತ ಆಗಿದೆ ಎಂಬುದೆಲ್ಲಾ ಸುಳ್ಳು ಸುದ್ದಿ. ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಸೌಂದರ್ಯ ಜಗದೀಶ್​ ಅವರ ಸ್ನೇಹಿತ ಶ್ರೇಯಸ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ.

See also  ಬೆರಳುಗಳುನ್ನು ಮಡಚಲು ಕಷ್ಟ ಪಡುತ್ತಿರುವ ದರ್ಶನ್; ಜೈಲು ಆಸ್ಪತ್ರೆಯಲ್ಲೇ ಚಿಕಿತ್ಸೆ
Share This Article