

ಮೇರಠ್: ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ಒಳಗಾದವರ ಮನೆಗೆ ಪ್ರಿಯಾಂಕಾ ಗಾಂಧಿ ಭೇಟಿ ಕೊಟ್ಟ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.
ಡಿಸೆಂಬರ್ 20ರಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಒಳಗಾದವರ ಕುಟುಂಬಗಳನ್ನು ಪಾರ್ಟಪುರದಲ್ಲಿ ಭೇಟಿ ಮಾಡಲು ಪ್ರಿಯಾಂಕಾ ಗಾಂಧಿ ಬಂದಿದ್ದರು.
ಪ್ರಿಯಾಂಕಾ ಗಾಂಧಿ ಜತೆಗೆ ಸಂತ್ರಸ್ಥರ ಮನೆಯೊಳಗೆ ನುಗ್ಗಲು ಕಾರ್ಯಕರ್ತರು ಯತ್ನಿಸಿದ್ದಾರೆ, ಈ ವೇಳೆ ನೂಕುನುಗ್ಗಲು, ವಾಗ್ವಾದ ನಡೆದಿದೆ.
ಈ ಹಿಂದೆ ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ವೇಳೆ ಬಂಧನಕ್ಕೊಳಗಾಗಿದ್ದ ನಿವೃತ್ತ ಅಧಿಕಾರಿ ಕುಟುಂಬದವರನ್ನು ಭೇಟಿಯಾಗಲು ಬಂದ ಪ್ರಿಯಾಂಕಾ ಅವರನ್ನು ಉತ್ತರಪ್ರದೇಶ ಪೊಲೀಸರು ತಡೆದಿದ್ದರು.
ಪೊಲೀಸರು ನನ್ನ ಮೇಲೆ ಕೈ ಮಾಡಿದರು. ನನ್ನ ಕುತ್ತಿಗೆ ಹಿಸುಕಿದ್ದರು ಎಂದು ಪ್ರಿಯಾಂಕಾ ಗಾಂಧಿ ಆರೋಪ ಮಾಡಿದ್ದರು, ಇದಕ್ಕೆ ಪೊಲೀಸರು ಪ್ರತಿಕ್ರಿಯಿಸಿ ಅವರ ಆರೋಪ ಸುಳ್ಳು, ಅವರು ಮಾಹಿತಿ ನೀಡಿದ ದಾರಿಯನ್ನು ಬಿಟ್ಟು ಬೇರೆ ದಾರಿಯಲ್ಲಿ ಹೋಗಿದ್ದರಿಂದ ಅವರನ್ನು ಪ್ರಶ್ನಿಸಿದ್ದೆವು ಎಂದಿದ್ದರು. (ಏಜೆನ್ಸೀಸ್)