ದುರ್ಗಕ್ಕೆ ಮೀನಾ ನೂತನ ಎಸ್ಪಿ

SP Dharmendrakumar Meena
Published on

ಚಿತ್ರದುರ್ಗ: ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯದ ನಿರ್ದೇಶಕರಾಗಿದ್ದ ಧರ್ಮೇಂದ್ರ ಕುಮಾರ್ ಮೀನಾ ಅವರನ್ನು ಜಿಲ್ಲೆಯ ಜಿಲ್ಲಾ ರಕ್ಷಣಾಧಿಕಾರಿಯನ್ನಾಗಿ ವರ್ಗಾಯಿಸಿ ರಾಜ್ಯ ಸರ್ಕಾರ ಸೋಮವಾರ ಆದೇಶಿಸಿದೆ. ಎಸ್‌ಪಿ ಕೆ.ಪರಶುರಾಮ ಅವರನ್ನು ವರ್ಗಾಯಿಸಿದ್ದು ಅವರಿಗೆ ಹುದ್ದೆಯನ್ನು ತೋರಿಸಿಲ್ಲ.

ಪರಶುರಾಮ್ ಅವರು ಚಿತ್ರದುರ್ಗ ಜಿಲ್ಲಾ ರಕ್ಷಣಾಧಿಕಾರಿಯಾಗಿ 2022 ಜ.20ರಂದು ಅಧಿಕಾರ ಸ್ವೀಕರಿಸಿದ್ದರು. ಮೀನಾ ಅವರು 2012ರ ಬ್ಯಾಚ್ ಐಪಿಎಸ್, ಕರ್ನಾಟಕ ಕೇಡರ್ ಅಧಿಕಾರಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net