ಲ್ಯಾಪ್ರೋಸ್ಕೋಪಿಕ್ ಮತ್ತು ಹರ್ನಿಯಾ ಶಸ್ತ್ರಚಿಕಿತ್ಸೆಯನ್ನು ಉತ್ಕೃಷ್ಟಗೊಳಿಸಲು ತರಬೇತಿ ನೀಡುವ ಸಲುವಾಗಿ ಪರಸ್ಪರ ಕೈಜೋಡಿಸಿದ ಮೆಡ್‌ಟ್ರಾನಿಕ್ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು

mng--6 AUg Father mullar
Published on

ಮಂಗಳೂರು : ವೈದ್ಯಕೀಯ ತಂತ್ರಜ್ಞಾನದಲ್ಲಿ ಜಾಗತಿಕ ಮನ್ನಣೆ ಗಳಿಸಿರುವ ಮೆಡ್‌ಟ್ರಾನಿಕ್ ಸಂಸ್ಥೆಯು ಭಾರತದಲ್ಲಿ ಹೊಸ ಸರ್ಜನ್ ಗಳಿಗೆ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮತ್ತು ವೃತ್ತಿಪರ ಸರ್ಜನ್ ಗಳಿಗೆ ಲ್ಯಾಪ್ ಹರ್ನಿಯಾ ಶಸ್ತ್ರಚಿಕಿತ್ಸೆಯನ್ನು ಉತ್ಕೃಷ್ಟ ಮಟ್ಟದಲ್ಲಿ ನಡೆಸುವುದು ಹೇಗೆ ಎಂಬ ರಚನಾತ್ಮಕ ತರಬೇತಿ ಒದಗಿಸುವ ಉದ್ದೇಶದಿಂದ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ (ಎಫ್ಎಂಸಿಸಿ) ಜೊತೆಗೆ ಸಹಭಾಗಿತ್ವ ಮಾಡಿಕೊಂಡಿದೆ.

ಉತ್ಕೃಷ್ಟ ಮಟ್ಟದ ವೈದ್ಯಕೀಯ ಶಿಕ್ಷಣವನ್ನು ಒದಗಿಸುವ ಮತ್ತು ಹೊಸ ಪೀಳಿಗೆಯ ಶಸ್ತ್ರಚಿಕಿತ್ಸಕರಿಗೆ ಪ್ರಾಯೋಗಿಕ ಜ್ಞಾನ, ನಿಖರ ತಂತ್ರ ಮತ್ತು ಪ್ರಾಯೋಗಿಕ ತರಬೇತಿ ಒದಗಿಸುವ ಮೆಡ್‌ಟ್ರಾನಿಕ್‌ನ ಉದ್ದೇಶದ ಭಾಗವಾಗಿ ಈ ಸಹಭಾಗಿತ್ವವು ಮೂಡಿಬಂದಿದೆ.

ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಲ್ಯಾಪ್ರೋಸ್ಕೋಪಿಕ್ ಹರ್ನಿಯಾ ಶಸ್ತ್ರಚಿಕಿತ್ಸೆ ಕುರಿತಾದ ಪ್ರಾಯೋಗಿಕ ಅನುಭವ ಪಡೆಯುವುದರ ಜೊತೆಗೆ ಶಾರೀರಿಕ ಮತ್ತು ಕಾರ್ಯವಿಧಾನದ ಅಂಶಗಳ ಬಗ್ಗೆ ಆಳವಾದ ತಿಳುವಳಿಕೆಯುಳ್ಳ ಸಮಗ್ರ ತರಬೇತಿ ಪಡೆಯಲಿದ್ದಾರೆ. ಈ ತರಬೇತಿಯ ಪಠ್ಯಕ್ರಮವು ಮಿನಿಮಲ್ ಇನ್ವೇಸಿವ್ ಸರ್ಜರಿ (ಎಂಐಎಸ್) ಕುರಿತ ಉಪನ್ಯಾಸ ಅವಧಿಗಳನ್ನು ಒಳಗೊಂಡಿದೆ. ಈ ತರಬೇತಿಯಲ್ಲಿ ಎರ್ಗಾನಾಮಿಕ್ಸ್, ಉಪಕರಣಗಳು ಮತ್ತು ಶಸ್ತ್ರಚಿಕಿತ್ಸೆಯ ನಿಖರತೆಯ ಕುರಿತು ಗಮನ ಹರಿಸಲಾಗುತ್ತದೆ. ಭಾಗವಹಿಸುವವರು ನೇರವಾಗಿ ಶಸ್ತ್ರಚಿಕಿತ್ಸೆ ವೀಕ್ಷಿಸುವ, ಕೇಸ್ ಸ್ಟಡಿಯಲ್ಲಿ ಪಾಲ್ಗೊಳ್ಳುವ ಮತ್ತು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆಯ ವಿಶ್ಲೇಷಣೆಯಲ್ಲಿ ಭಾಗವಹಿಸುವ ಅವಕಾಶ ಹೊಂದಲಿದ್ದಾರೆ ಮತ್ತು ಈ ಮೂಲಕ ಉತ್ಕೃಷ್ಟ ಶಸ್ತ್ರಚಿಕಿತ್ಸಾ ಕೌಶಲಗಳನ್ನು ಕಲಿಯಲಿದ್ದಾರೆ.

ಈ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಫಾದರ್ ಮುಲ್ಲರ್ ಕಾಲೇಜಿನ ಪರಿಣತ ಉಪನ್ಯಾಸಕರ ಮೇಲ್ವಿಚಾರಣೆಯಯಲ್ಲಿ ಮಾರ್ಗದರ್ಶನದ ಕಾರ್ಯವಿಧಾನಗಳನ್ನು ಕಲಿಯುವುದರಿಂದ ಹಿಡಿದು ತಮ್ಮ ಸಂಸ್ಥೆಗಳಲ್ಲಿ ಸ್ವತಂತ್ರವಾಗಿ ಶಸ್ತ್ರಚಿಕಿತ್ಸೆ ನಡೆಸುವವರೆಗೆ ಬೆಳವಣಿಗೆ ಸಾಧಿಸಲಿದ್ದಾರೆ. “ಹರ್ನಿಯಾ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಗಳಿಕೆ” ಈ ಸಹಭಾಗಿತ್ವದ ಮೂಲ ಉದ್ದೇಶವಾಗಿದ್ದು, ಈ ಮೂಲಕ ಶಸ್ತ್ರಚಿಕಿತ್ಸಕರಿಗೆ ಸಾಂಪ್ರದಾಯಿಕ ಓಪನ್ ಹರ್ನಿಯಾ ಶಸ್ತ್ರಚಿಕಿತ್ಸೆಯಿಂದ ಹಿಡಿದು ಉನ್ನತ ಮಟ್ಟದ ಮಿನಿಮಲ್ ಇನ್ವೇಸಿವ್ ತಂತ್ರಗಳವರಗೆ ಹಂತ-ಹಂತದ ಮಾರ್ಗದರ್ಶನ ಒದಗಿಸಲಾಗುತ್ತದೆ. ಫಾದರ್ ಮುಲ್ಲರ್ ಆಸ್ಪತ್ರೆಯ ಅತ್ಯುತ್ತಮವಾದ ತರಬೇತಿ ಮೂಲಸೌಕರ್ಯವನ್ನು ಬಳಸಿಕೊಂಡು, ಶಸ್ತ್ರಚಿಕಿತ್ಸಾ ಕ್ರಮಗಳನ್ನು ಉತ್ಕೃಷ್ಟಗೊಳಿಸುವ ಮತ್ತು ರೋಗಿಗಳಿಗೆ ಅತ್ಯುತ್ತಮ ಫಲಿತಾಂಶಗಳನ್ನು ನೀಡುವ ಕೌಶಲ್ಯಪೂರ್ಣ ಹರ್ನಿಯಾ ಶಸ್ತ್ರಚಿಕಿತ್ಸಕರ ತಂಡವನ್ನು ರಚಿಸುವ ಗುರಿಯನ್ನು ಈ ತರಬೇತಿ ಕಾಯರ್ಕ್ರಮವು ಹೊಂದಿದೆ.

 ಕುರಿತು ಮಾತನಾಡಿದ ಮೆಡ್ಟ್ರಾನಿಕ್ ಇಂಡಿಯಾದ ಮೆಡಿಕಲ್ ಸರ್ಜಿಕಲ್ ವಿಭಾಗದ ಹಿರಿಯ ನಿರ್ದೇಶಕ ಅಭಿಷೇಕ್ ಭಾರ್ಗವ ಅವರು, “ವೈದ್ಯಕೀಯ ಕ್ಷೇತ್ರದಲ್ಲಿನ ನಿಜವಾದ ಆವಿಷ್ಕಾರ ಎಂದರೆ ತಾಂತ್ರಿಕ ಪ್ರಗತಿಯಷ್ಟೇ ಅಲ್ಲ ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರನ್ನು ಸಬಲೀಕರಣ ಮಾಡುವುದು ಎಂಬುದು ಮೆಡ್‌ಟ್ರಾನಿಕ್ ಸಂಸ್ಥೆಯ ನಂಬಿಕೆಯಾಗಿದೆ. ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯು ನಮ್ಮ ವೈದ್ಯಕೀಯ ಸೇವೆಯನ್ನು ಬದಲಿಸುವ ಮತ್ತು ರೋಗಿಗಳಿಗೆ ಅತ್ಯುತ್ತ ಫಲಿತಾಂಶ ನೀಡುವಲ್ಲಿ ಬಹಳ ಮಹತ್ವದ್ದಾಗಿದೆ. ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಜೊತೆಗಿನ ನಮ್ಮ ಸಹಭಾಗಿತ್ವವು ನಿರಂತರ ಕಲಿಕೆ ಮತ್ತು ಸಾಮರ್ಥ್ಯ ಹೆಚ್ಚಿಸುವ ಕ್ರಮಗಳ ಮೂಲಕ ಶಸ್ತ್ರಚಿಕಿತ್ಸಾ ವಿಭಾಗವನ್ನು ಉತ್ಕೃಷ್ಟಗೊಳಿಸುವ ಈ ಎರಡೂ ಸಂಸ್ಥೆಗಳ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಪ್ರಾಯೋಗಿಕ ತರಬೇತಿ, ತಜ್ಞರ ಮಾರ್ಗದರ್ಶನ ಮತ್ತು ಅತ್ಯಾಧುನಿಕ ಮಿನಿಮಲ್ ಇನ್ವೇಸಿವ್ ತಂತ್ರಜ್ಞಾನದ ಪರಿಚಯ ಇತ್ಯಾದಿಗಳ ಮೂಲಕ ಹೊಸ ಪೀಳಿಗೆಯ ಶಸ್ತ್ರಚಿಕಿತ್ಸಕರಿಗೆ ಸುರಕ್ಷಿತವಾದ ಮತ್ತು ಹೆಚ್ಚು ನಿಖರವಾದ ಶಸ್ತ್ರಚಿಕಿತ್ಸೆ ನಡೆಸಲು ಬೇಕಾಗುವ ಅಗತ್ಯ ಕೌಶಲ್ಯಗಳನ್ನು ಕಲಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಅಂತಿಮವಾಗಿ, ವೈದ್ಯಕೀಯ ಕ್ಷೇತ್ರವನ್ನು ಉನ್ನತೀಕರಿಸುವುದು ಮತ್ತು ಸಮಾಜಕ್ಕೆ ಉತ್ತಮ ಗುಣಮಟ್ಟದ ಶಸ್ತ್ರಚಿಕಿತ್ಸಾ ಸೌಲಭ್ಯವನ್ನು ಒದಗಿಸುವುದು ನಮ್ಮ ಗುರಿಯಾಗಿದೆ” ಎಂದರು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ರೆವ್ ಫಾದರ್ ಫೌಸ್ಟಿನ್ ಎಲ್ ಲೋಬೊ ಅವರು ಮಾತನಾಡಿ,“ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ನಾವು ವೈದ್ಯಕೀಯ ಶಿಕ್ಷಣಕ್ಕೆ ಮಾತ್ರವೇ ಒತ್ತು ನೀಡುತ್ತಿಲ್ಲ, ಬದಲಿಗೆ ಅತ್ಯುತ್ತಮ, ಶ್ರೇಷ್ಠ ವೈದ್ಯಕೀಯ ಸೇವೆಯನ್ನು ಒದಗಿಸಲು ಬದ್ಧರಾಗಿದ್ದೇವೆ. ಮೆಡ್‌ಟ್ರಾನಿಕ್‌ಜೊತೆಗಿನ ಈ ಸಹಭಾಗಿತ್ವವು ಶಸ್ತ್ರಚಿಕಿತ್ಸಾ ಸಾಮರ್ಥ್ಯಗಳನ್ನು ಹೆಚ್ಚಿಸುವ ಮತ್ತು ಜ್ಞಾನ ಹಂಚುವ ವಿಚಾರದಲ್ಲಿ ಬಹಳ ಮಹತ್ವದ ಹೆಜ್ಜೆಯಾಗಿದೆ. ನಮ್ಮ ಪರಿಣತ ಉಪನ್ಯಾಸಕರ ತಂಡ ಮತ್ತು ಮೂಲಸೌಕರ್ಯ ಹಾಗೂ ಮೆಡ್‌ಟ್ರಾನಿಕ್‌ ಸಂಸ್ಥೆಯ ತಾಂತ್ರಿಕ ಪರಿಣತಿ ಎರಡೂ ಜೊತೆಗೂಡಿ ತರಬೇತಿಯಲ್ಲಿ ಪಾಲ್ಗೊಳ್ಳುವವರಿಗೆ ಸಮಗ್ರ ಕಲಿಕಾ ಅನುಭವ ಒದಗಿಸಲಿದೆ. ಈ ಕಲಿಕೆಯಿಂದ ರೋಗಿಗಳಿಗೆ ಅತ್ಯುತ್ಕೃಷ್ಟ ಶಸ್ತ್ರಚಿಕಿತ್ಸಾ ಸೌಲಭ್ಯ ದೊರೆಯುವುದನ್ನು ನೋಡಲು ನಾವು ಉತ್ಸುಕರಾಗಿದ್ದೇವೆ” ಎಂದರು.

ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಜನರಲ್ ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾರಾಕೇಶ್ ರೈ ಅವರು ಮಾತನಾಡಿ, “ಈ ಸಹಯೋಗವು ಶಸ್ತ್ರಚಿಕಿತ್ಸಾ ಶಿಕ್ಷಣದಲ್ಲಿ ಒಂದು ಅಪೂರ್ವ ಹೆಜ್ಜೆಯಾಗಿದೆ. ಮೆಡ್‌ಟ್ರಾನಿಕ್‌ ನ ತಾಂತ್ರಿಕ ಪರಿಣತಿ ಮತ್ತು ನಮ್ಮ ಸಂಸ್ಥೆಯ ಶೈಕ್ಷಣಿಕ ಮತ್ತು ವೈದ್ಯಕೀಯ ಪರಿಣತಿಯನ್ನು ಜೊತೆಗೂಡಿಸಿ ಅತ್ಯುತ್ತಮವಾಗಿ ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಲು ಶಸ್ತ್ರಚಿಕಿತ್ಸಕರಿಗೆ ಕೌಶಲ್ಯ ಒದಗಿಸಲಿದ್ದೇವೆ ಮತ್ತು ಆತ್ಮವಿಶ್ವಾಸವನ್ನು ತುಂಬಲಿದ್ದೇವೆ. ‘ಹರ್ನಿಯಾ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಗಳಿಕೆ’ ಎಂಬ ತರಬೇತಿ ಕಾರ್ಯಕ್ರಮವು ರಚನಾತ್ಮಕ, ಪ್ರಾಯೋಗಿಕ ಕಲಿಕೆಯ ಮೂಲಕ ಶಸ್ತ್ರಚಿಕಿತ್ಸೆಯ ಮಾನದಂಡಗಳನ್ನು ಉನ್ನತೀಕರಿಸುವ ಮತ್ತು ರೋಗಿಗಳಿಗೆ ಅತ್ಯುತ್ತಮ ಫಲಿತಾಂಶ ಒದಗಿಸುವ ನಮ್ಮ ದೃಷ್ಟಿಕೋನಕ್ಕೆ ಪೂರಕವಾಗಿ ಮೂಡಿಬಂದಿದೆ” ಎಂದರು.

ಈ ತರಬೇತಿ ಕಾರ್ಯಕ್ರಮವು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಕಲಿಕಾ ವಾತಾವರಣವನ್ನು ಮತ್ತಷ್ಟು ಉತ್ತೇಜಿಸುವ ಮತ್ತು ಮುಂದಿನ ಪೀಳಿಗೆಯ ಉತ್ತಮ ವೈದ್ಯಕೀಯ ಪರಿಣತರನ್ನು ರೂಪಿಸುವ ಗುರಿಯನ್ನೂ ಹೊಂದಿದೆ. ಯುವ ಶಸ್ತ್ರಚಿಕಿತ್ಸಕರಿಗೆ ಮಾರ್ಗದರ್ಶನ ನೀಡುವ ಮತ್ತು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಉತ್ತಮ ಕೌಶಲಗಳನ್ನು ಕಲಿಸುವ ಮೂಲಕ ಅಭಿವೃದ್ಧಿ ಹೊಂದುತ್ತಿರುವ ಶಸ್ತ್ರಚಿಕಿತ್ಸಾ ಕ್ಷೇತ್ರಕ್ಕೆ ಅರ್ಥಪೂರ್ಣ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ. ತರಬೇತಿ ಕಾರ್ಯಕ್ರಮಗಳು ಫಾದರ್ ಮುಲ್ಲರ್ ಆಸ್ಪತ್ರೆಯ ಒಳಗಿನ ಸ್ಕಿಲ್ ಲ್ಯಾಬ್‌ ನಲ್ಲಿ ನಡೆಯುತ್ತವೆ. ಈ ಕಾರ್ಯಕ್ರಮದಲ್ಲಿ ಎಂಡೋ-ಸೂಚರಿಂಗ್, ನಾಟಿಂಗ್, ಅಸೆಪ್ಟಿಕ್ ಟೆಕ್ನಿಕ್ ಗಳು ಮತ್ತು ಸಿಮ್ಯುಲೇಷನ್ ಆಧರಿತ ತರಬೇತಿಯನ್ನು ನೀಡಲಾಗುತ್ತದೆ. ಈ ಮೂಲಕ ತರಬೇತಿಯಲ್ಲಿ ಪಾಲ್ಗೊಂಡವರು ಶಸ್ತ್ರಚಿಕಿತ್ಸೆಯ ವಾಸ್ತವ ಜಗತ್ತಿನ ಸವಾಲುಗಳನ್ನು ಸೂಕ್ತ ರೀತಿಯಲ್ಲಿ ಎದುರಿಸಲು ಸಿದ್ಧರಾಗುತ್ತಾರೆ.

ಮೆಡ್‌ಟ್ರಾನಿಕ್ ಮತ್ತು ಎಫ್ಎಂಸಿಸಿ ಸಂಸ್ಥೆಗಳು ಭಾರತದಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಲು ನೆರವಾಗುವ ನಿಟ್ಟಿನಲ್ಲಿ ಶಸ್ತ್ರಚಿಕಿತ್ಸಾ ಶಿಕ್ಷಣದ ಸುಸ್ಥಿರ ಮಾದರಿಯನ್ನು ರಚಿಸುವ ಗುರಿಯನ್ನು ಹೊಂದಿರುವುದನ್ನು ಈ ಯೋಜನೆಯು ಸ್ಪಷ್ಟಪಡಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net