ಜೀವರಕ್ಷಕ ಔಷಧಗಳು ಅಗ್ಗ: ಕೋವಿಡ್ ಮೆಡಿಸಿನ್​ಗೆ ವಿನಾಯಿತಿ ವಿಸ್ತರಣೆ; ಸ್ವಿಗ್ಗಿ, ಜೊಮ್ಯಾಟೊಗೂ ಟ್ಯಾಕ್ಸ್

Front
Published on

ನವದೆಹಲಿ: ಕೋವಿಡ್ ಸಂಕಷ್ಟದ ಕಾಲದಲ್ಲಿ ಎರಡು ಜೀವರಕ್ಷಕ ಔಷಧಗಳ ಮೇಲಿನ ತೆರಿಗೆ ರದ್ದುಗೊಳಿಸುವ ಜತೆಯಲ್ಲೇ ಕರೊನಾ ಔಷಧಗಳ ಮೇಲಿರುವ ತೆರಿಗೆ ವಿನಾಯಿತಿಯನ್ನು ಡಿಸೆಂಬರ್ 31ರ ತನಕ ವಿಸ್ತರಿಸುವ ಮಹತ್ವದ ನಿರ್ಧಾರ 45ನೇ ಜಿಎಸ್​ಟಿ ಕೌನ್ಸಿಲ್ ಸಭೆಯಲ್ಲಿ ಹೊರಹೊಮ್ಮಿದೆ. ಶುಕ್ರವಾರ ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಸಭೆಯ ಬಳಿಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜಿಎಸ್​ಟಿ ಸಭೆಯ ತೀರ್ವನಗಳನ್ನು ಪ್ರಕಟಿಸಿದರು. ಭಾರಿ ನಿರೀಕ್ಷೆ ಹುಟ್ಟಿಸಿದ್ದ, ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ಪ್ರಸ್ತಾವನೆ ವಿಚಾರವಾಗಿ ಸಭೆಯಲ್ಲಿ ಯಾವುದೇ ನಿರ್ಧಾರವಾಗಿಲ್ಲ. ವಿಶೇಷವಾಗಿ ಪೆಟ್ರೋಲಿಯಂ ಉತ್ಪನ್ನಗಳು ಸರ್ಕಾರಕ್ಕೆ ಹೆಚ್ಚಿನ ಆದಾಯ ಒದಗಿಸುತ್ತಿವೆ ಎಂಬುದು ಈ ತೀರ್ವನದ ಹಿಂದಿರುವ ಒಳಸುಳಿ.

‘ಒಂದು ದೇಶ ಒಂದು ತೆರಿಗೆ’ ವ್ಯವಸ್ಥೆಯಾಗಿರುವ ಜಿಎಸ್​ಟಿಯನ್ನು 2017ರ ಜುಲೈ 1ರಂದು ಜಾರಿಗೊಳಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಆದಾಯ ಮೂಲವಾಗಿರುವ ಕಚ್ಚಾ ತೈಲ, ನೈಸರ್ಗಿಕ ಅನಿಲ, ಪೆಟ್ರೋಲ್, ಡೀಸೆಲ್ ಮತ್ತು ಎಟಿಎಫ್​ಗಳನ್ನು ಆ ಸಂದರ್ಭದಲ್ಲಿಯೇ ಜಿಎಸ್​ಟಿ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಈ ಪ್ರಕಾರವಾಗಿ ಕೇಂದ್ರ ಸರ್ಕಾರ ಇವುಗಳ ಮೇಲೆ ಅಬಕಾರಿ ಸುಂಕ ಹೇರಿದರೆ, ರಾಜ್ಯ ಸರ್ಕಾರಗಳು ವ್ಯಾಟ್ ಹೇರುತ್ತಿವೆ. ಈ ತೆರಿಗೆಯನ್ನು ಕಾಲಾನುಕ್ರಮದಲ್ಲಿ ಏರಿಸುತ್ತಲೇ ಬರಲಾಗಿದೆ. ಇಂಧನ ದರ ಹೆಚ್ಚಳ ಅಥವಾ ಕಡಿಮೆಯಾದಾಗಲೂ ತೆರಿಗೆ ದರ ಇಳಿಕೆಯಾಗಿಲ್ಲ ಎಂಬ ಟೀಕೆ ವ್ಯಾಪಕವಾಗಿದೆ. ಪೆಟ್ರೋಲ್ ಮೇಲಿನ ಸಬ್ಸಿಡಿಯನ್ನು 2010ರಲ್ಲೂ, ಡೀಸೆಲ್ ಮೇಲಿನ ಸಬ್ಸಿಡಿಯನ್ನು 2014ರಲ್ಲೂ ಕೇಂದ್ರ ಸರ್ಕಾರ ಕೊನೆಗೊಳಿಸಿತ್ತು.

ಗ್ರಾಹಕರ ಮೇಲಿಲ್ಲ ಹೊರೆ: ಸ್ವಿಗ್ಗಿ, ಜೊಮ್ಯಾಟೊ ಮುಂತಾದ ಡೆಲಿವರಿ ವೇದಿಕೆಗಳ ಮೇಲೆ ಶೇಕಡ 5 ಜಿಎಸ್​ಟಿ ಅನ್ವಯಿಸುತ್ತದೆ. ರೆಸ್ಟೋರೆಂಟ್​ಗಳು ಪಾವತಿಸುತ್ತಿದ್ದ ತೆರಿಗೆಯನ್ನು ಇನ್ನು ಸ್ವಿಗ್ಗಿ ಮತ್ತು ಜೊಮ್ಯಾಟೊ ಮೂಲಕ ಸಂಗ್ರಹಿಸಲಾಗುತ್ತದೆ. ಕೆಲವು ರೆಸ್ಟೋರೆಂಟ್​ಗಳು ತೆರಿಗೆ ಪಾವತಿಸದೆ ವಂಚಿಸುತ್ತಿರುವುದು ಬೆಳಕಿಗೆ ಬಂದ ಕಾರಣ ಜಿಎಸ್​ಟಿ ಕೌನ್ಸಿಲ್ ಈ ತೀರ್ವನಕ್ಕೆ ಬಂದಿದೆ. ಇದುವರೆಗೆ ರೆಸ್ಟೋರೆಂಟ್​ಗಳು ತೆರಿಗೆ ಪಾವತಿಸುತ್ತಿದ್ದವು. ಸ್ವಿಗ್ಗಿ, ಜೊಮ್ಯಾಟೊ ಮುಂತಾದ ವೇದಿಕೆಗಳು ತೆರಿಗೆ ಪಾವತಿಸುವ ಅವಶ್ಯಕತೆ ಇರಲಿಲ್ಲ. ಸ್ವಿಗ್ಗಿ ಅಥವಾ ಜೊಮ್ಯಾಟೊ ಮೇಲೆ ಈ ತೆರಿಗೆ ಭಾರ ಬಿದ್ದರೂ ಗ್ರಾಹಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ತೈಲೋತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತರುವ ವಿಚಾರ ಪರಿಶೀಲನೆಗೆ ಒಳಗಾಗಿದೆ. ಆದರೆ ಅದಕ್ಕೀಗ ಸಕಾಲವಲ್ಲ.

| ನಿರ್ಮಲಾ ಸೀತಾರಾಮನ್ ವಿತ್ತ ಸಚಿವೆ

ಕೌನ್ಸಿಲ್​ನ ಪ್ರಮುಖ ತೀರ್ಮಾನ

ಹೊಸ ಸೇರ್ಪಡೆ:  ಹೊಸ ಪಾದರಕ್ಷೆ ಮತ್ತು ಜವಳಿ ದರಗಳನ್ನು ಜನವರಿ 1ರಿಂದ ಜಿಎಸ್​ಟಿ ವ್ಯಾಪ್ತಿಗೆ ಅನ್ವಯಿಸಲು ತೀರ್ವನ.

ಬೆಲೆ ಏರಿಕೆ: ಎಲ್ಲ ಮಾದರಿಯ ಪೆನ್​ಗಳ ಮೇಲೆ ಶೇಕಡ 18 ತೆರಿಗೆ ್ಝಶ್ಚಿತ ಮರುಬಳಕೆಯ ಸೆಕ್ಟರ್​ನ ಉಪಕರಣ ಮೇಲೆ ಶೇಕಡ 12 ತೆರಿಗೆ.

ಇಳಿಕೆ: ಕ್ಯಾನ್ಸರ್​ ಸಂಬಂಧಿತ ಡ್ರಗ್ಸ್​ ಮೇಲಿನ ತೆರಿಗೆ ಶೇ.12ರಿಂದ ಶೇಕಡ 5ಕ್ಕೆ ಮತ್ತು ಮಂಡಕ್ಕಿ ಮೇಲಿನ ತೆರಿಗೆ ಶೇಕಡ 18ರಿಂದ ಶೇಕಡ 5ಕ್ಕೆ ಇಳಿಸಲಾಗಿದೆ. ಡೀಸೆಲ್​​ಗೆ ಸೇರಿಸುವ ಬಯೋ ಡೀಸೆಲ್ ಮೇಲಿನ ತೆರಿಗೆ ಶೇಕಡ 12ರಿಂದ ಶೇಕಡ 5ಕ್ಕೆ ಇಳಿಸಲಾಗಿದೆ.

ಯಾವುದಕ್ಕೆಲ್ಲ ಸಿಗಲಿದೆ ವಿನಾಯಿತಿ?

  • ನರರೋಗ, ಮಾಂಸಖಂಡಗಳಿಗೆ ಸಂಬಂಧಿಸಿದ ಜೀವರಕ್ಷಕ ಔಷಧಗಳಾದ ಝೋಲೊಗ್ನ್​ಜೆಲ್ಸಮಾ ಮತ್ತು ವಿಲ್ಟೆಪ್ಸೊಗಳಿಗೆ ವಿನಾಯಿತಿ ನೀಡಲಾಗಿದೆ. ಇವೆರಡರ ಬೆಲೆ ಅಂದಾಜು -ಠಿ;16 ಕೋಟಿ
  • ಕೋವಿಡ್ ಸಂಬಂಧಿತ ಔಷಧೋಪಕರಣಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಡಿ.31ರ ತನಕ ವಿಸ್ತರಿಸಲಾಗಿದೆ.
  • ಆರೋಗ್ಯ ಸಚಿವಾಲಯ ಶಿಫಾರಸು ಮಾಡಿದ ಮಸ್ಕುಲರ್ ಅಟ್ರೋಫಿ ಡ್ರಗ್ಸ್​ಗಳನ್ನು ವೈಯಕ್ತಿಕ ಬಳಕೆಗೆ ಆಮದು ಮಾಡಿಸಿಕೊಂಡರೆ ಅದರ ಮೇಲಿನ ಐಜಿಎಸ್​ಟಿಗೂ ವಿನಾಯಿತಿ ಸಿಗಲಿದೆ.
  • ವಾಹನಗಳ ರೆಟ್ರೋ ಫಿಟ್​ವೆುಂಟ್ ಕಿಟ್ ಅನ್ನು ಅಂಗವೈಕಲ್ಯ ಹೊಂದಿದವರು ಬಳಸುವುದಾದರೆ ಅದಕ್ಕೆ ಶೇಕಡ 5 ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು.
  • ನೌಕೆ ಮತ್ತು ವಿಮಾನಗಳ ಮೂಲಕ ಸರಕು ಸಾಗಣೆಗೆ ಜಿಎಸ್​ಟಿ ತೆರಿಗೆ ಇಲ್ಲ. ಲೀಸ್​ಗೆ ಏರ್​ಕ್ರಾಫ್ಟ್ ಪಡೆದು ಆಮದು ಮಾಡಿಕೊಂಡರೆ ಅದಕ್ಕೆ ಐಜಿಎಸ್​ಟಿ ಇರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net