ದೇಶದಲ್ಲೇ ವೈದ್ಯ ಶಿಕ್ಷಣ ಪಡೆಯಿರಿ- ಯುವ ಸಮುದಾಯಕ್ಕೆ ಪ್ರಧಾನಿ ಮೋದಿ ಕರೆ

Modi
Published on

ನವದೆಹಲಿ: ಯುವ ಜನರು ವೈದ್ಯಕಿಯ ಶಿಕ್ಷಣಕ್ಕಾಗಿ ಸಣ್ಣ ಸಣ್ಣ ದೇಶಗಳಿಗೆ ಹೋಗುವ ಬದಲು ಸ್ವದೇಶದಲ್ಲಿ ವ್ಯಾಸಂಗ ಮಾಡುವುದು ಒಳಿತು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ವೈದ್ಯಕಿಯ ಶಿಕ್ಷಣದ ಆಕಾಂಗಳಿಗೆ ಉತ್ತಮ ಅವಕಾಶ ನೀಡಲು ಖಾಸಗಿ ವಲಯದವರು ಮುಂದೆ ಬರಬೇಕು ಎಂದೂ ಹೇಳಿದರು. ರಷ್ಯಾ ದಾಳಿಯ ಕಾರಣ ಯೂಕ್ರೇನ್​ನಲ್ಲಿ ವೈದ್ಯಕಿಯ ಶಿಕ್ಷಣ ಪಡೆಯುತ್ತಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಅವರು ಈ ಮಾತನ್ನಾಡಿದರು. ಆದರೆ, ಯೂಕ್ರೇನ್​-ರಷ್ಯಾ ಸಂರ್ಷವನ್ನು ಅವರು ನೇರವಾಗಿ ಉಲ್ಲೇಖ ಮಾಡಲಿಲ್ಲ.

2022-23ನೇ ಸಾಲಿನ ಕೇಂದ್ರ ಬಜೆಟ್​ನಲ್ಲಿ ಆರೋಗ್ಯ ಕುರಿತು ವೆಬಿನಾರ್​ನಲ್ಲಿ ಶನಿವಾರ ಮಾತನಾಡಿದ ಪ್ರಧಾನಿ, ರಾಜ್ಯ ಸರ್ಕಾರಗಳು ಕೂಡ ವೈದ್ಯಕಿಯ ಶಿಕ್ಷಣಕ್ಕೆ ಅಗತ್ಯ ಸೌಕರ್ಯಗಳನ್ನು ಮಾಡಿಕೊಡಬೇಕು. ಕಾಲೇಜುಗಳ ಸ್ಥಾಪನೆಗೆ ಅಗತ್ಯ ಭೂಮಿ, ಮೂಲಸೌಕರ್ಯವನ್ನು ಸುಗಮ ಪ್ರಕ್ರಿಯೆಯ ಮೂಲಕ ಕಲ್ಪಿಸಬೇಕು. ಹೀಗಾದಾಗ ಹೆಚ್ಚು ಕಾಲೇಜುಗಳು ದೇಶದಲ್ಲಿ ತೆರೆಯಲ್ಪಡುತ್ತವೆ. ಇದರಿಂದ ಭಾರತದಿಂದಲೇ ಹೆಚ್ಚು ವೈದ್ಯಕಿಯ ಪದವೀಧರರು ಹೊರಹೊಮ್ಮುತ್ತಾರೆ ಎಂದರು. ಭಾರತ ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಯೂಕ್ರೇನ್​ನಲ್ಲಿ ವೈದ್ಯಕಿಯ ಶಿಕ್ಷಣ ಪಡೆಯುತ್ತಿದ್ದು, ಈಗ ಯುದ್ಧದ ೋಭೆಯ ಕಾರಣ ಅವರನ್ನು ಸ್ವದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net