ನವದೆಹಲಿ: ಆಗ್ರಾ ಮೂಲದ ವೈದ್ಯೆಯೊಬ್ಬಳನ್ನು ವೈದ್ಯಾಧಿಕಾರಿಯೊಬ್ಬ ಕತ್ತುಹಿಸುಕಿ, ಇರಿದು ಕೊಲೆಗೈದ ಘಟನೆ ನಡೆದಿದೆ. ಆಕೆ ನಾಪತ್ತೆಯಾದ ಕೆಲ ಗಂಟೆಗಳ ನಂತರ ಆಕೆಯ ಶವ ನಗರದ ಬಮ್ರೌಲಿ ಕತಾರಾ ಪ್ರದೇಶದ ಖಾಲಿ ಜಮೀನಿನಲ್ಲಿ ಪತ್ತೆಯಾಗಿದೆ. ಆಕೆಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿ ಅಪಹರಿಸಿ ಕೊಲೆ ಮಾಡಿದ್ದಾನೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.