

ಬೆಂಗಳೂರು: ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ ಸೇರಿ ಸಿಇಟಿ ಪರೀಕ್ಷೆ ಬರೆದಿರುವ ವಿಕಲಚೇತನ ಅಭ್ಯರ್ಥಿಗಳಿಗೆ ಮೇ 28ರಿಂದ 30ರವರೆಗೆ ಬೆಂಗಳೂರಿನ ಕೆಇಎ ಕಚೇರಿಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.
ಅಂಗವಿಕಲ ಕೋಟಾ ಅಡಿಯಲ್ಲಿ ಸೀಟು ಪಡೆಯಲು ಯುಜಿಸಿಇಟಿ-2025ನಲ್ಲಿ ಆನ್‌ಲೈನ್ ಅರ್ಜಿಯಲ್ಲಿ ಮೀಸಲಾತಿ ಕ್ಲೇಮ್ ಮಾಡಿರುವ ಅಭ್ಯರ್ಥಿಗಳಿಗೆ ಅಂಗವಿಕಲತೆ ಅರ್ಹತೆಯನ್ನು ಪರೀಕ್ಷೆಸಲಾಗುತ್ತದೆ.
ಅಂತಹ ಅಭ್ಯರ್ಥಿಗಳು ಮೇ 26ರಿಂದ ಸ್ಲಾಟ್ ಬುಕ್ (ಸಮಯ ಮತ್ತು ದಿನಾಂಕ) ಮಾಡಿಕೊಂಡು ಹಾಜರಾಗಬಹುದು. ಬುಕ್ ಮಾಡಿರುವ ಸಮಯಕ್ಕೆ ಹಾಜರಾಗಬೇಕು. ಹಾಜರಾಗುವ ವೇಳೆ ಸ್ಲಾಟ್ ಬುಕಿಂಗ್ ಪ್ರತಿ, ಸಿಇಟಿ ಅಂತಿಮವಾಗಿ ಸಲ್ಲಿಸಿರುವ ಅರ್ಜಿ ಪ್ರತಿ, ಪ್ರವೇಶ ಪತ್ರ, ಆಧಾರ್ ಕಾರ್ಡ್ ಸೇರಿ ತರಬೇಕಾದ ದಾಖಲಾತಿಗಳ ವಿವರಗಳನ್ನು ಕೆಇಎ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.