ಮಹಿಳೆಯರ ಎದೆ ಅಳತೆ ತೆಗೆಯುವುದು ತಪ್ಪು...ಆಕೆಯ ಘನತೆ, ಗೌಪ್ಯತೆಯ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದ ಹೈಕೋರ್ಟ್

Court (2)
Published on

ರಾಜಸ್ಥಾನ: ಸರ್ಕಾರಿ ಉದ್ಯೋಗಕ್ಕಾಗಿ ನೇಮಕಾತಿ ಪ್ರಕ್ರಿಯೆ ನಡೆಸುವ ಸಂದರ್ಭದಲ್ಲಿ ಮಹಿಳಾ ಅಭ್ಯರ್ಥಿಗಳ ಎದೆಯ ಅಳತೆ ತೆಗೆದುಕೊಳ್ಳುತ್ತಾರೆ. ಆದರೆ ಈ ಮಾನದಂಡವನ್ನು ರಾಜಸ್ಥಾನ ಹೈಕೋರ್ಟ್ ಖಂಡಿಸಿದೆ.

ನೇಮಕಾತಿ ಪ್ರಕ್ರಿಯೆಯಲ್ಲಿ ದೈಹಿಕ ದಕ್ಷತೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಆದರೆ, ಎದೆಯ ಅಳತೆ ಮಾನದಂಡಗಳನ್ನು ಪೂರೈಸದ ಕಾರಣ ಅನರ್ಹಗೊಂಡ ಮೂವರು ಮಹಿಳಾ ಅಭ್ಯರ್ಥಿಗಳ ಮನವಿಯನ್ನು ನ್ಯಾಯಮೂರ್ತಿ ದಿನೇಶ್ ಮೆಹ್ತಾ ಅವರ ಏಕ ಪೀಠವು ವಿಚಾರಣೆ ನಡೆಸಿದ್ದಾರೆ.

ನೇಮಕಾತಿ ಪ್ರಕ್ರಿಯೆ ಮುಗಿದಿದೆ ಎಂಬ ಕಾರಣಕ್ಕೆ ಅರ್ಜಿಯನ್ನು ವಜಾಗೊಳಿಸಿದ ಪೀಠ, ಎದೆಯ ಮಾಪನದ ಮಾನದಂಡವನ್ನು ಮರು ಮೌಲ್ಯಮಾಪನ ಮಾಡುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿ, ಅರಣ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದೆ.

ಕೋರ್ಟ್​​ ಹೇಳಿದ್ದೇನು?: ನೇಮಕಾತಿ ಪ್ರಕ್ರಿಯೆ ಮುಗಿದಿರುವುದರಿಂದ ಮತ್ತು ಅರ್ಜಿದಾರರು ಸೇರಿದಂತೆ ಎಲ್ಲಾ ಅಭ್ಯರ್ಥಿಗಳು ಎದೆಯ ಅಳತೆ ಪರೀಕ್ಷೆಗೆ ಒಳಗಾಗಿರುವುದರಿಂದ, ಪೂರ್ಣಗೊಂಡ ನೇಮಕಾತಿಗೆ ನ್ಯಾಯಾಲಯವು ಅಡ್ಡಿಪಡಿಸುವುದಿಲ್ಲ. 'ಆದರೆ, ಮಹಿಳಾ ಅಭ್ಯರ್ಥಿಗಳಿಗೆ ಎದೆಯ ಮಾಪನದ ಅವಶ್ಯಕತೆಯ ಬಗ್ಗೆ ಸಂಪೂರ್ಣ ಪರಿಶೀಲನೆ ಅಥವಾ ಅವಲೋಕನವು ಅತ್ಯಗತ್ಯವಾಗಿರುತ್ತದೆ, ಅದು ಅರಣ್ಯ ಸಿಬ್ಬಂದಿ, ಅರಣ್ಯಾಧಿಕಾರಿಗಳು ಅಥವಾ ಯಾವುದೇ ಇತರ ಹುದ್ದೆಗಳ ನೇಮಕಾತಿಗೆ ಅನ್ವಯಿಸುತ್ತದೆ' ಶ್ವಾಸಕೋಶದ ಸಾಮರ್ಥ್ಯವನ್ನು ನಿರ್ಧರಿಸಲು ವಿಸ್ತರಣೆಯನ್ನು ಅಳೆಯುವುದು ಅರ್ಥವಾಗುವಂತಹದ್ದಾಗಿದೆ. ಆದರೆ 'ಕನಿಷ್ಠ ಎದೆಯ ಸುತ್ತಳತೆ' ಕಡ್ಡಾಯವಾಗಿದೆ ಎಂಬುದು ಒಪ್ಪುವಂಥಾ ವಿಷಯವಲ್ಲ ಎಂದು ಅಭಿಪ್ರಾಯಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.

ಹುದ್ದೆಗೆ ನಿಯೋಜಿಸಲು ಮಹಿಳೆಯ ಎದೆಯ ಗಾತ್ರವು ಅಪ್ರಸ್ತುತವಾಗಿದೆ. ಆಕೆಯ ದೈಹಿಕ ಸಾಮರ್ಥ್ಯವನ್ನು ನಿರ್ಧರಿಸಲು ಇಂಥಾ ಪರೀಕ್ಷೆಯ ಅಗತ್ಯವಿಲ್ಲ . 'ಮಹಿಳೆಯ ಎದೆಯ ಅಳತೆಯನ್ನು ತೆಗೆದುಕೊಳ್ಳುವುದು, ಭಾರತದ ಸಂವಿಧಾನದ 14 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಮಹಿಳೆಯ ಘನತೆ ಮತ್ತು ಆಕೆಯ ಗೌಪ್ಯತೆಯ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ' ಎಂದು ನ್ಯಾಯಮೂರ್ತಿ ದಿನೇಶ್‌ ಮೆಹ್ತಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net