ಹಳ್ಳಿಕಾರ ಸಮುದಾಯ ಪ್ರವರ್ಗ 1ಕ್ಕೆ ಸೇರಿಸಲು ಕ್ರಮ

ಅತಿಕಡಿಮೆ ಜನಸಂಖ್ಯೆ ಹೊಂದಿರುವ ಹಳ್ಳಿಕಾರ ಸಮುದಾಯವನ್ನು ಪ್ರವರ್ಗ&1ಕ್ಕೆ ಸೇರಿಸಲು ಸಿಎಂ ಜತೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್​ ಆಶ್ವಾಸನೆ ನೀಡಿದ್ದಾರೆ.
hallikara
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಡಿಸಿಎಂ ಡಾ. ಜಿ. ಪರಮೇಶ್ವರ್​ ಪುರಸ್ಕಾರ ನೀಡಿ ಅಭಿನಂದಿಸಿದರು.folder
Published on: 

ಬೆಂಗಳೂರು: ಅತಿಕಡಿಮೆ ಜನಸಂಖ್ಯೆ ಹೊಂದಿರುವ ಹಳ್ಳಿಕಾರ ಸಮುದಾಯವನ್ನು ಪ್ರವರ್ಗ-1ಕ್ಕೆ ಸೇರಿಸಲು ಸಿಎಂ ಜತೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಡಿಸಿಎಂ ಡಾ. ಜಿ. ಪರಮೇಶ್ವರ್​ ಆಶ್ವಾಸನೆ ನೀಡಿದ್ದಾರೆ.

ನಗರದ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್​ ಕನ್ವೆಷನ್​ ಸೆಂಟರ್​ನಲ್ಲಿ ಆರ್​.ಎಂ.ಆರ್​. ಹಳ್ಳಿಕಾರ ಫೌಂಡೇಶನ್​ ಟ್ರಸ್ಟ್​ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ 2025-2026ನೇ ಸಾಲಿನ ಎಸ್​ಎಸ್​ಎಲ್​ಸಿ ಮತ್ತು ದ್ವೀತಿಯ ಪಿಯುಸಿ ಪರೀೆಯಲ್ಲಿ ಉತ್ತಮ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಸಂವಿಧಾನದಲ್ಲಿ ಎಲ್ಲ ಸಮುದಾಯಗಳಿಗೆ ಪ್ರಾಶಸ್ತ್ಯ ನೀಡಲಾಗಿದೆ. ದೊಡ್ಡ ಸಮುದಾಯಗಳ ಆರ್ಭಟದಿಂದ ಸಣ್ಣ ಸಮುದಾಯಗಳು ರ್ನಿಲಕ್ಷ$್ಯಕ್ಕೆ ಒಳಗಾಗಿದ್ದವು. ಚಿನ್ನಸ್ವಾಮಿ, ವೆಂಕಟಸ್ವಾಮಿ, ಕಾಂತರಾಜು ಆಯೋಗ ನೇಮಕ ಮಾಡಿ ರ್ನಿಲಕ್ಷಕ್ಕೆ ಒಳಗಾದ ಹಿಂದುಳಿದ ಸಣ್ಣ ಸಮುದಾಯ, ಪರಿಶಿಷ್ಟ ಜಾತಿ ವರ್ಗಗಳಿಗೆ ಸಹಾಯ ಮಾಡುವ ಕೆಲಸ ಸರ್ಕಾರ ಮಾಡಿದೆ. ಹಳ್ಳಿಕಾರ ಸಮುದಾಯವನ್ನು ಪವರ್ಗ 1 ಕ್ಕೆ ಸರ್ಕಾರ ಸೇರಿಸುವ ಬೇಡಿಕೆ ಬಂದಿದೆ. ಈ ಸಂಬಂಧ ಸಿಎಂ ಡಿ.ಕೆ. ಶಿವಕುಮಾರ್​ ಜತೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಉನ್ನತ ಹುದ್ದೆಗೇರಲು ಮುಂದಾಗಿ:

ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಟ್ರಸ್ಟ್​ ಅಡಿಯಲ್ಲಿ ರಾಜ್ಯದ 10 ಜಿಲ್ಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಗೆ ಸಹಾಯಹಸ್ತ ಚಾಚಲಾಗುತ್ತಿದೆ. ವಿದ್ಯಾರ್ಥಿಗಳು ಈ ಸಹಾಯವನ್ನು ಪಡೆದು ಉನ್ನತ ಹುದ್ದೆಗೇರಲು ಮುಂದಾಗಬೇಕು ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸಚಿವರಾದ ಬಿ. ರಘುಮೂರ್ತಿ, ಎಚ್​.ಸಿ. ಬಾಲಕೃಷ್ಣ, ಶಾಸಕ ಟಿ.ಬಿ. ಜಯಚಂದ್ರ, ಎಂಎಲ್ಸಿ ಪುಟ್ಟಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್​.ಎಂ. ರೇವಣ್ಣ, ಮಾಜಿ ಉಪ ಮೇಯರ್​ ಬಿ.ಎಸ್​. ಪುಟ್ಟರಾಜು, ಬಿಬಿಎಂಪಿ ಮಾಜಿ ಸದಸ್ಯ ಟಿ. ದಾಸೇಗೌಡ, ಟ್ರಸ್ಟ್​ನ ಪದಾಧಿಕಾರಿಗಳಾದ ಮಾರುತಿ, ಎನ್​. ನಾರಾಯಣಮೂರ್ತಿ, ಶ್ರೀನಿವಾಸಮೂರ್ತಿ, ಮುಖಂಡರಾದ ಎಂ. ಶಿವಕುಮಾರ್​, ಬಿ.ಆರ್​. ವಾಸುದೇವ್​, ಬಿ. ಮಲ್ಲಿಕಾರ್ಜುನ್​, ಕೆ.ಎನ್​. ಹರೀಶ್​ ಉಪಸ್ಥಿತರಿದ್ದರು.

ಜಾತಿ ಗಣತಿ ವರದಿ ಮೇರೆಗೆ ರ್ನಿಲಕ್ಷಕ್ಕೆ ಒಳಗಾದ ಹಳ್ಳಿಕಾರ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಸರ್ಕಾರ ಕ್ರಮವಹಿಸಬೇಕು. - ಕೆ.ಎಂ. ನಾಗರಾಜ್​, ಆರ್​.ಎಂ.ಆರ್​. ಹಳ್ಳಿಕಾರ ಫೌಂಡೇಶನ್​ ಟ್ರಸ್ಟ್​ನ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net