

ಬಾಗಲಕೋಟೆ: ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ಡೌನ್ ಆಗಿದೆ. ಇದೊಂತರ ಕರ್ಫ್ಯೂ ತರಹವೇ ಆಗಿದ್ದು, ಜನರು ರಸ್ತೆಗಳಿಯದಂತೆ, ಕಾನೂನು ಉಲ್ಲಂಘನೆಯಾಗದಂತೆ ತಡೆಯಲು ಪೊಲೀಸರು ಬಿಸಿಲಲ್ಲಿ ನಿಂತು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತಮ್ಮ ಊಟ, ತಿಂಡಿ, ಆರೋಗ್ಯವನ್ನೂ ಲೆಕ್ಕಿಸದೆ ಬಿಸಿಲಿನಲ್ಲಿ ಡ್ಯೂಟಿ ಮಾಡುತ್ತಿರುವ ಪೊಲೀಸರಿಗೆ ಕೂಲಿಕಾರ್ಮಿಕರ ಗುಂಪೊಂದು ಅನ್ನ, ನೀರು, ಹಣ್ಣು ವಿತರಣೆ ಮಾಡಿದೆ.
ಬಾಗಲಕೋಟೆಯಲ್ಲಿ ಕರ್ತವ್ಯ ನಿರತ ಪೊಲೀಸರಿಗೆ ಒಂದಷ್ಟು ಜನರು ಸೇರಿಕೊಂಡು ಅನ್ನ, ನೀರು ಕೊಟ್ಟಿದ್ದಾರೆ. ಅವರೆಲ್ಲ ಇದ್ದಲ್ಲೆ ಗಾಡಿ ಮೇಲೆ ತೆಗೆದುಕೊಂಡು ಹೋಗಿ ವಿತರಣೆ ಮಾಡಿದ್ದಾರೆ.
ಲಾಕ್ಡೌನ್ ಆಗಿರುವ ಕಾರಣಕ್ಕೆ ಯಾವುದೇ ಹೋಟೆಲ್, ರಸ್ತೆ ಬದಿಯ ಅಂಗಡಿಗಳೂ ಬಾಗಿಲು ತೆಗೆದುಕೊಂಡಿಲ್ಲ. ಪೊಲೀಸರು ಕೂಡ ಸರಿಯಾದ ಸಮಯಕ್ಕೆ ಊಟ-ತಿಂಡಿ ಮಾಡಲು ಸಾಧ್ಯವಾಗದೆ ಸಂಕಟಪಡುತ್ತಿದ್ದಾರೆ. ಹೀಗಿರುವಾಗ ಗೆಳೆಯರ ಬಳಗವೊಂದು ಅವರಿಗೆ ಊಟ ನೀಡುತ್ತಿರುವ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)