

ಮೆಕ್ಡೊನಾಲ್ಡ್ಸ್ನಲ್ಲಿ ಕುಳಿತಿದ್ದ ಆತ ತುಂಬಾ ಬೇಸರದಲ್ಲಿದ್ದ, ಜತೆಗೆ ನಿರುದ್ಯೋಗದ ಆತಂಕದಲ್ಲೂ ಇದ್ದ. ಅಲ್ಲಿ ಊಟ ಮಾಡಿದ ಬಳಿಕ ಅವನ ಬೇಸರವೆಲ್ಲ ಮಾಯವಾಯಿತು. ಅದು ಅವನ ಆ ದಿನದ ಅತ್ಯಂತ ಖುಷಿಯ ಕ್ಷಣವಾಗಿತ್ತು. ಅದಕ್ಕೆ ಕಾರಣ, ಆ ಹುಡುಗಿ, ಎನ್ಯಾ.
ಆ ಹುಡುಗಿ ಎನ್ಯಾ, ಬೇರೆ ಯಾರೂ ಅಲ್ಲ. ಆಕೆ ಆ ಮೆಕ್ಡೊನಾಲ್ಡ್ಸ್ ಕೇಂದ್ರದ ಉದ್ಯೋಗಿ. ಆತ ಅಲ್ಲಿ ಊಟ ಮಾಡಿದ ಬಳಿಕ ಚಿಂತೆಯಲ್ಲಿದ್ದುದನ್ನು ಗಮನಿಸಿದ ಆಕೆ, ಆತನ ಬಿಲ್ ಮೊತ್ತವನ್ನು ತನ್ನ ಕಾರ್ಡ್ನಿಂದಲೇ ಸ್ವೈಪ್ ಮಾಡಿದ್ದಳು.
ಆ ವ್ಯಕ್ತಿ ತನ್ನ ಜೋಶ್ ಯು ಆರ್ ಎಂಬ ಟ್ವಿಟರ್ ಹ್ಯಾಂಡಲ್ನಲ್ಲಿ ಈ ಕುರಿತ ವಿಡಿಯೋ ಹಂಚಿಕೊಂಡು ಸಂತೋಷ ವ್ಯಕ್ತಪಡಿಸಿದ್ದಾರೆ. ಯುವತಿಯ ನಡೆಯಿಂದ ನೆಟ್ಟಿಗರೂ ಖುಷಿಯಾಗಿದ್ದು, ಈ ವಿಡಿಯೋವನ್ನು 17 ಸಾವಿರಕ್ಕೂ ಅಧಿಕ ಮಂದಿ ಮೆಚ್ಚಿದ್ದಾರೆ. ಅಂದಹಾಗೆ ಇವೆಲ್ಲ ನಡೆದಿದ್ದು ಯುಕೆನ ಟೈ ಹಿಲ್ ಎಂಬಲ್ಲಿನ ಮೆಕ್ಡೊನಾಲ್ಡ್ಸ್ನಲ್ಲಿ. (ಏಜೆನ್ಸೀಸ್)