

ಬೆಂಗಳೂರು: ಹತ್ತು ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಡೆಪ್ಯುಟಿ ಮೇಯರ್ ಅವರ 23ನೇ ಅವಧಿಯ ಮೀಸಲಾತಿಯನ್ನು ನಿಗದಿ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಪಾಲಿಕೆಯ ಹೆಸರು, ಮೇಯರ್ ಮತ್ತು ಡೆಪ್ಯುಟಿ ಮೇಯರ್ ಸ್ಥಾನಗಳ ಮೀಸಲಾತಿ ಕ್ರಮವಾಗಿ ಇಂತಿದೆ. ಬಳ್ಳಾರಿ- ಸಾಮಾನ್ಯ, ಬಿಸಿಎ (ಮಹಿಳೆ); ಬೆಳಗಾವಿ -ಸಾಮಾನ್ಯ, ಸಾಮಾನ್ಯ ಮಹಿಳೆ; ದಾವಣಗೆರೆ - ಪರಿಶಿಷ್ಟ ಮಹಿಳೆ, ಸಾಮಾನ್ಯ ಮಹಿಳೆ; ಕಲಬುರ್ಗಿ- ಸಾಮಾನ್ಯ ಮಹಿಳೆ, ಬಿಸಿಬಿ; ಮಂಗಳೂರು - ಸಾಮಾನ್ಯ, ಬಿಸಿಎ (ಮಹಿಳೆ); ಮೈಸೂರು- ಸಾಮಾನ್ಯ ಮಹಿಳೆ, ಸಾಮಾನ್ಯ; ಶಿವಮೊಗ್ಗ - ಬಿಸಿಎ (ಮಹಿಳೆ), ಸಾಮಾನ್ಯ; ತುಮಕೂರು - ಪರಿಶಿಷ್ಟ ಜಾತಿ, ಸಾಮಾನ್ಯ ಮಹಿಳೆ; ವಿಜಯಪುರ- ಪರಿಶಿಷ್ಟ ಜಾತಿ, ಬಿಸಿಎ; ಹುಬ್ಬಳ್ಳಿ ಧಾರವಾಡ- ಬಿಸಿಎ, ಪರಿಶಿಷ್ಟ ಮಹಿಳೆ.