video/ 'ಮಾಯಾರ್ ಕಿಂಗ್' ಗಾಂಭೀರ್ಯಕ್ಕೆ ನೆಟ್ಟಿಗರು ಫಿದಾ!

Mayar King tiger
Published on

ಗುಂಡ್ಲುಪೇಟೆ: ಕೆಕ್ಕನಹಳ್ಳ ಗೇಟ್ ಬಳಿ 'ಮಾಯಾರ್ ಕಿಂಗ್' ಎಂಬ ಹುಲಿ ರಸ್ತೆ ದಾಟುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಲಿಯ ಗಾಂಭೀರ್ಯ ನಡೆಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಕರ್ನಾಟಕ- ತಮಿಳುನಾಡು ಗಡಿಭಾಗದ ಮಾಯಾರ್ ನದಿ ತಟವನ್ನು ವಾಸ ಸ್ಥಳವಾಗಿರಿಸಿಕೊಂಡಿರುವ ಈ ಹುಲಿಯನ್ನು 'ಮಾಯಾರ್‌ ಕಿಂಗ್' ಎಂದೇ ಕರೆಯಲಾಗುತ್ತೆ. ಮೂರು ದಿನಗಳ ಹಿಂದೆ ಈ ರಸ್ತೆಯಲ್ಲಿ ತೆರಳುತ್ತಿದ್ದ ವಾಹನ ಸವಾರರು ಮಾಯಾರ್ ಕಿಂಗ್ ಹಾದುಹೋಗುವ ವಿಡಿಯೋ ಮಾಡಿದ್ದಾರೆ.

ಈ ಹುಲಿ ಮಾಯಾರ್ ನದಿ ಸೇರುವ ಹಳ್ಳದ ನೀರಿನ ಬಳಿಯಲ್ಲೇ ವಾಸಿಸುತ್ತದೆ. ಹಿಂದೆ ಇದ್ದ ಜಿಲ್ಲಾಧಿಕಾರಿ‌ ಕಾವೇರಿ ಅವರು ಇಲ್ಲಿಗೆ ಭೇಟಿ ನೀಡಿದ್ದಾಗಲೂ ಮಾಯಾರ್ ಕಿಂಗ್ ದರ್ಶನ ನೀಡಿತ್ತು ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ. ಬಾಲಚಂದ್ರ ತಿಳಿಸಿದ್ದಾರೆ.

ಪ್ರಿನ್ಸ್ ಎಂಬ ಹುಲಿ ಮನುಷ್ಯರನ್ನು ಕಂಡು ವಿಚಲಿತಗೊಳ್ಳದೆ ಗತ್ತು ತೋರಿ ಅತಿ ಹೆಚ್ಚು ಪೋಟೋ ಕ್ಲಿಕ್ಕಿಸಿಕೊಂಡಿರುವ ವ್ಯಾಘ್ರ ಎಂಬ ಕೀರ್ತಿಗೆ ಪಾತ್ರವಾದಂತೆ ಮಾಯಾರ್ ಕಿಂಗ್ ಗಾಂಭೀರ್ಯದ ನಡೆಯೂ ಹಲವರಿಗೆ ಇಷ್ಟವಾಗಿದೆ. ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net