

ಈ ನಿಟ್ಟಿನಲ್ಲಿ ನಮ್ಮ ಶೈಕ್ಷಣಿಕೆ ವ್ಯವಸ್ಥೆ, ಪೋಷಕರ ಮಾರ್ಗದರ್ಶನ ಹಾಗೂ ಉತ್ತೇಜನವು ನಿರ್ವಣವಾಗಬೇಕು. ಇತ್ತೀಚಿನ ದಿವಸ ಗಳಲ್ಲಿ, ಜಾಗತಿಕ ಮಟ್ಟದಲ್ಲಿ ಹಾಗೂ ಭಾರತದಲ್ಲಿ ಸುದ್ದಿಯಾದ ಅನೇಕ ಪ್ರಸಂಗಗಳಲ್ಲಿ, ಭಾರತೀಯರನ್ನು ಅಮೆರಿಕದಿಂದ ಗಡಿಪಾರು ಮಾಡಿದ್ದೂ ಒಂದು. ಅನೇಕ ರಾಜಕೀಯ ನೇತಾರರು ಅದರ ಕುರಿತು ಪರ-ವಿರೋಧದ ಮಾತುಗಳನ್ನು ಆಡಿದರು. ನಾವು ವಿದೇಶಕ್ಕೆ ಹೋಗಬಾರದು ಎಂಬುದು ನನ್ನ ಅಭಿಪ್ರಾಯವಲ್ಲ.
ಆದರೆ ಇನ್ನೂ ನಾವು ಇತರ ದೇಶಗಳ ಮುಂದೆ ಕೆಲಸಕ್ಕಾಗಿ ಕೈಚಾಚಿ ಕುಳಿತಿರುವುದು ಅಥವಾ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಇದ್ದರೆ, ಅದು ನಮ್ಮ ದೇಶಕ್ಕೆ ಒಳ್ಳೆಯದಲ್ಲ ಎಂಬುದಷ್ಟೇ ನನ್ನ ಅಭಿಪ್ರಾಯ. ಬ್ರಿಟಿಷರು ನಮ್ಮನ್ನು ಆಕ್ರಮಿಸುವ ಮುಂಚೆ, 3-4 ಶತಮಾನಗಳ ಕಾಲ ಮೊಘಲರು ನಮ್ಮನ್ನು ಆಳಿದರು.
ಆದರೂ ಸಹ ಜಾಗತಿಕ ಮಟ್ಟದಲ್ಲಿಮೊಘಲರ ಆಳ್ವಿಕೆಯ ಮುಂಚೆ ನಮ್ಮ ಜಿಡಿಪಿ ಶೇಕಡ 35ಇದ್ದರೆ, ಮೊಘಲರ ಆಳ್ವಿಕೆಯ ನಂತರ ಸುಮಾರು ಶೇ. 25 ಇತ್ತು ಎಂದು ಸಂಶೋಧನೆಗಳು ತಿಳಿಸುತ್ತವೆ. ಅದರಿಂದ ನಮ್ಮ ದೇಶ ಕೈಗಾರಿಕೆ ಪ್ರಧಾನವಾಗಿತ್ತು ಎಂದು ಅನೇಕ ಅರ್ಥಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ. ಈ ನಿಟ್ಟಿನಲ್ಲಿ ಇತ್ತೀಚಿನ ದಿವಸಗಳಲ್ಲಿ ಅನೇಕ ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ. ಆದರೆ ಸರ್ಕಾರ ಮತ್ತು ನಾವು ಒಟ್ಟಾಗಿ ಸರಿಯಾದ ರೀತಿಯಲ್ಲಿ ಆಲೋಚಿಸಿ, ವ್ಯವಸ್ಥೆಯನ್ನು ನಿರ್ವಿುಸಿದರೆ, ನಮ್ಮ ದೇಶ ಮತ್ತೊಮ್ಮೆ ಭೂತಕಾಲದ ಸ್ಥಿತಿಗೆ ಮರಳುವುದರಲ್ಲಿ ಯಾವುದೇ ಸಂಶಯವಿಲ್ಲ.