

ಸೋಮವಾರಪೇಟೆ : ತಾಲೂಕಿನ ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದ ವತಿಯಿಂದ ಶಾಲಾ ಆವರಣದಲ್ಲಿ ಸೋಮವಾರ ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನ ಆಚರಿಸಲಾಯಿತು. ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾಲೇಜು ಪ್ರಾಂಶುಪಾಲ ಎಚ್.ಕೆ.ಉಮೇಶ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ, ದೇಶಕ್ಕೆ ಅವರ ಕೊಡುಗೆ ಇಂದಿನ ಯುವ ಜನಾಂಗಕ್ಕೆ ಮಾರ್ಗದರ್ಶನವಾಗಬೇಕೆಂದರು. ಮುಖ್ಯ ಶಿಕ್ಷಕ ಎಂ.ಎಂ.ಯಶ್‌ವಂತ್ ಕುಮಾರ್, ಸಹ ಶಿಕ್ಷಕರಾದ ರಂಜಿನಿ, ಮಂಜುನಾಥ್, ಕೃಷ್ಣಪ್ಪ, ರೇಖಾ ಕಾಲೇಜು ಉಪನ್ಯಾಸಕ ನಿಶ್ಚಯ್ಯ ಇದ್ದರು.