ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಲಿ

Published on

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಯಲುವಳ್ಳಿ ರಮೇಶ್​ ಸೂಚನೆ

ವಿಜಯವಾಣಿ ಸುದ್ದಿಜಾಲ ಗುಡಿಬಂಡೆ

ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ತಲುಪಿಸುವ ಕೆಲಸ ಸದಸ್ಯರು ಹಾಗೂ ಅಧಿಕಾರಿಗಳು ಮಾಡಬೇಕೆಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ

ಜಿಲ್ಲಾಧ್ಯಕ್ಷ ಯಲುವಳ್ಳಿ ರಮೇಶ್​ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳಡಿ ಇಲಾಖೆಗಳು ಸಾಧಿಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಬಡವರಿಗೆ ಪಂಚ ಗ್ಯಾರಂಟಿ ಯೋಜನೆ ತಲುಪಡಿಸಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದವರಿಗೆ ಸೂಚನೆ ನೀಡಿ, ಗೃಹಲಕ್ಷಿ$್ಮಯೋಜನೆ ಸಿಡಿಪಿಒ ರಫೀಕ್​ರಿಂದ ಮಾಹಿತಿ ಪಡೆದರು. ತಾಲೂಕಿನಲ್ಲಿ ಒಟ್ಟು 13854 ಪಡಿತರ ಚೀಟಿಗಳಿದ್ದು, 13844 ಅರ್ಜಿಗಳು ಸಲ್ಲಿಕೆಯಾಗಿವೆ. 13824 ಫಲಾನುಭವಿಗಳಿಗೆ ಯೋಜನೆಯಡಿ ಪ್ರತಿ ತಿಂಗಳು ಹಣ ಜಮಾ ಆಗುತ್ತಿದೆ. ಇನ್ನು 10 ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಿಲ್ಲ. 20 ಫಲಾನುಭವಿಗಳಿಗೆ ಜಿ.ಎಸ್​.ಟಿ ಮತ್ತು ಆದಾಯ ತೆರಿಗೆಯ ಸಮಸ್ಯೆಯಿಂದ ಅರ್ಜಿಗಳು ಬಾಕಿ ಇವೆ. 20 ಫಲಾನುಭವಿಗಳಲ್ಲಿ 1 ಫಲಾನುಭವಿ ಬ್ಯಾಂಕ್​ಗೆ ಆಧಾರ್​ ಕಾರ್ಡ್​ ಲಿಂಕ್​ ಸಮಸ್ಯೆ ಇದ್ದು, 19 ಫಲಾನುಭವಿಗಳಿಗೆ ಜಿ.ಎಸ್​.ಟಿ ಸಮಸ್ಯೆಯಿಂದ ಯೋಜನೆಯಿಂದ ವಂಚಿತರಾಗಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು. ಕೂಡಲೇ ಉಳಿದ 20 ಫಲಾನುಭವಿಗಳಿಗೂ ಹಣ ಜಮಾ ಮಾಡುವಂತೆ ಕ್ರಮವಹಿಸುವಂತೆ ಸಮಿತಿಯ ಅಧ್ಯಕ್ಷ ಸೂಚನೆ ನೀಡಿದರು.

ತಾಲೂಕಿನಲ್ಲಿ ಪ್ರಥಮ ದರ್ಜೆ ಕಾಲೇಜು ಮತ್ತು ಒಂದು ಇಂಜಿನಿಯರ್​ ಕಾಲೇಜುಗಳಿವೆ, ತಾಲೂಕಿನಲ್ಲಿ ಒಟ್ಟು 298 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.298 ವಿದ್ಯಾರ್ಥಿಗಳಲ್ಲಿ 199 ವಿದ್ಯಾರ್ಥಿಗಳು ಯುವನಿಧಿಗೆ ಅರ್ಜಿ ಸಲ್ಲಿಸಿದ್ದು, 99 ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದ ಅರ್ಜಿ ಸಲ್ಲಿಸಿಲ್ಲ, ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಈಗಾಗಲೇ ಖಾತೆಗಳಿಗೆ ಹಣ ಜಮಾ ಆಗಿದೆಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ತಿಳಿಸಿದರು.

ಅನ್ನ ಭಾಗ್ಯ ಯೋಜನೆಯಡಿಯಲ್ಲಿ ನೂತನವಾಗಿ 854 ಅರ್ಜಿಗಳು ಸಲ್ಲಿಸಿದ್ದು, ಇದರಲ್ಲಿ 527 ಅರ್ಜಿಗಳು ಅನುಮೋದನೆ ಮಾಡಿದ್ದು, ಇತರ ಕಾರಣಗಳಿಂದ 163 ಅರ್ಜಿಗಳು ತಿರಸತಗೊಂಡಿವೆ. 164 ಅರ್ಜಿಗಳು ಪರಿಶೀಲನೆ

ಹಂತದಲ್ಲಿದೆಂದು ಆಹಾರ ನಿರೀಕ್ಷಕರು ತಿಳಿಸಿದರು.

ಶಕ್ತಿ ಯೋಜನೆಯಡಿ ಬಾಗೇಪಲ್ಲಿ ಘಟಕದಿಂದ ಇಲ್ಲಿಯವರೆವಿಗೂ 1 ಕೋಟಿ 29 ಲಕ್ಷ ಮಹಿಳೆಯರು ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, 50 ಕೋಟಿ 59 ಲಕ್ಷ ಅನುದಾನ ಫಲಾನುಭವಿಗಳಿಗೆ ವಿತರಿಸಿದೆಂದು

ಕೆಎಸ್​ಆರ್​ಟಿಸಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಆದಿರೆಡ್ಡಿ ಮಾತನಾಡಿ, ಶಕ್ತಿ ಯೋಜನೆಯಡಿ ಚಾಲಕರು ಮಹಿಳೆಯರು ಬಸ್​ ನಿಲ್ಲಿಸುವಂತೆ ಕೇಳಿದಾಗ, ಬಸ್​ ನಿಲ್ಲಿಸುತ್ತಿಲ್ಲ ಎಂಬ ದೂರುಗಳು ಬಂದಿದ್ದು, ಚಾಲಕರು ಬಸ್​ ನಿಲ್ಲಿಸುವಂತೆ ಸೂಚನೆ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಸದಸ್ಯರಾದ ರಾಮಚಂದ್ರ, ಲಕ್ಷಿ$್ಮಪತಿ, ತಿರುಮಳಕ್ಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net