ಪ್ರಧಾನಿಗೆ ರಕ್ತದಲ್ಲಿ ಪತ್ರ ಬರೆದ ನೆನಪಿರಲಿ ಪ್ರೇಮ್

1 ckm 1
ನಟ ನೆನಪಿರಲಿ ಪ್ರೇಮ್ ರಕ್ತದಲ್ಲಿ ಪ್ರಧಾನ ಮಂತ್ರಿಗೆ ಬರೆದಿರುವ ಪತ್ರ.
Published on

ಚಿಕ್ಕಮಗಳೂರು: ಕಾವೇರಿ ನೀರಿಗಾಗಿ ರಾಜ್ಯಾದ್ಯಂತ ಜನರು ಹೋರಾಟ ನಡೆಸುತ್ತಿರುವ ಬೆನ್ನಲ್ಲೇ ಚಿತ್ರನಟ ನೆನಪಿರಲಿ ಪ್ರೇಮ್ ರಕ್ತದಲ್ಲಿ ಪ್ರಧಾನಿಗೆ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

ಚಿಕ್ಕಮಗಳೂರು ಪ್ರವಾಸದಲ್ಲಿರುವ ನಟ ಪ್ರೇಮ್ ಇಲ್ಲಿಂದಲೇ ರಕ್ತದಲ್ಲಿ ಪತ್ರ ಬರೆದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ರವಾನಿಸಿದ್ದಾರೆ. ಕಾವೇರಿ ನಮ್ಮದು. ಕಾವೇರಿ ಹಾಗೂ ಕರ್ನಾಟಕಕ್ಕೆ ನ್ಯಾಯ ಒದಗಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಟು ನರೇಂದ್ರ ಮೋದಿಜಿ, ಪಿಎಂ ಆಫ್ ಇಂಡಿಯಾ ಎಂದು ಆರಂಭಿಸಿರುವ ಪತ್ರದಲ್ಲಿ ಪ್ಲೀಸ್ ಡು ಜಸ್ಟೀಸ್ ಫಾರ್ ಅವರ್ ಕಾವೇರಿ ಆ್ಯಂಡ್ ಕರ್ನಾಟಕ ಎಂದು ಬರೆದು ಅದರ ಕೆಳಗೆ ಕಾವೇರಿ ನಮ್ಮದು ಎಂದು ಕನ್ನಡದಲ್ಲಿ ಬರೆದಿದ್ದಾರೆ. ಇದಾದ ಬಳಿಕ ಹಸ್ತಕ್ಕೆ ರಕ್ತವನ್ನು ಹಚ್ಚಿಕೊಂಡು ಹಸ್ತವನ್ನೂ ಪತ್ರದ ಮೇಲೆ ಅಚ್ಚೊತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net