

ಕೋಲಾರ: ತಾಲೂಕಿನ ತೆರಹಳ್ಳಿ ಆದಿಮ ಸಾಂಸತಿಕ ಕೇಂದ್ರದಲ್ಲಿ ಕಾರ್ಯದರ್ಶಿ ಕೆ.ಎಂ.ಕೊಮ್ಮಣ್ಣ ನೆನಪಿನಲ್ಲಿ 214 ನೇ ಹುಣ್ಣಿಮೆ ಹಾಡು ಪ್ರಯುಕ್ತ ಗಿರೀಶ್ ಕಾರ್ನಾಡ್ ಅವರ ಮಾವಿಷಾದ ನಾಟಕ ಪ್ರದರ್ಶನ ನಡೆಯಿತು.
ಬೆಂಗಳೂರಿನ ರಂಗದರ್ಶನ ಪ್ರದರ್ಶನ ಕಲಾಕೇಂದ್ರದ ಕಲಾವಿದರ ತಂಡವು ಮೈಕೊ ಶಿವಶಂಕರ್ ರಂಗವಿನ್ಯಾಸ ಮತ್ತು ನಿರ್ದೇಶನ, ಸಿದ್ಧರಾಮ ಕೇಸಾಪುರ ಸಂಗೀತ, ರಾಮಕೃಷ್ಣ ಬೆಳ್ತೂರು ಪ್ರಸಾದನ, ಸಹಾಯ ಶ್ರೀನಿವಾಸ್ ತುರಾಂಡಹಳ್ಳಿ ಬೆಳಕು ವೇದಿಕೆಯ ಮೇಲೆ ನಾಟಕ ಪ್ರದರ್ಶಿಸಿದರು.
ಸಂಸತಿಕ ಚಿಂತಕ ಪದ್ಮಾಲಯ ನಾಗರಾಜ್ ಮಾತನಾಡಿ, ಕೊಮ್ಮಣ್ಣ ಅವರದು ಮಿತವಾದ ಮಾತು, ಮಾತಿನ ನಿಖರತೆ ಬೆರಗುಗೊಳಿಸಿತ್ತು. ನಮಗೆ ಮಾರ್ಗದರ್ಶನ ನೀಡುತ್ತಾ ದಂಸಂಸ ಒಂದು ವಿಸ್ಮಯ, ಭರವಸೆ, ಗೆಲ್ಲುವ, ಗೆಲ್ಲಿಸುವ ನಿರೀಕ್ಷೆಗಳ ಕಾಲವದು. ಕೂಡಿ ಕಟ್ಟಿಕೊಂಡ ಚಳವಳಿ ಸ್ವಾರ್ಥ, ಸ್ವಹಿತಾಸಕ್ತಿಗಳ ಕಾರಣಕ್ಕೆ ವಿಗಡಣೆಯಾಗಿ, ಒಡಕುಂಟಾಗಿ ಒಡೆದು ಹೋಯಿತು. ಒಡೆದು ಹೋಗಲು ಪ್ರತಿ ಸಣ್ಣ ಕಾರಣವೂ ಕೊಮ್ಮಣ್ಣನವರಿಗೆ ಗೊತ್ತಿತ್ತು. ಆ ಬಗ್ಗೆ ಅನೇಕ ಬಾರಿ, ಅನೇಕ ಚರ್ಚೆಗಳಲ್ಲಿ ನೋವು ತೋಡಿಕೊಂಡು ಹೇಳಿಕೊಂಡಿದ್ದಾರೆ. ತಲತಲಾಂತರಗಳ ಶೋಷಿತ ಸಮುದಾಯಗಳ ವಿಮೋಚನೆಗಾಗಿ ದಲಿತ ಸಂರ್ಷ ಸಮಿತಿ ಕಟ್ಟಿಕೊಂಡಿದ್ದು ಒಂದು ವಿಸ್ಮಯ ಆದರೆ, ಅದರಲ್ಲಿ ಒಡಕು ಸಂಭವಿಸಿದ್ದು ವಿಪರ್ಯಾಸ ಎನ್ನುವ ತಳಮಳ ಅವರಲ್ಲಿತ್ತು ಎಂದು ಬೇಸರಿಸಿದರು.
ಬಂಗಾರಪೇಟೆ ದಲಿತ ಮುಖಂಡ ಎಂ.ರಾಜೇಂದ್ರಕುಮಾರ್ ಮಾತನಾಡಿ, ಕೊಮ್ಮಣ್ಣ ಅಂದರೇ, ಶುದ್ಧ ಹಸ್ತ, ಪ್ರಮಾಣಿಕತೆ, ಜ್ಞಾನ, ದಯೆ, ಕರುಣೆ, ದಲಿತರ ಬಿಡುಗಡೆ. ಕೊಮ್ಮಣ್ಣ ಸಮಾಜಕ್ಕಾಗಿ ಬದುಕಿ ತೋರಿಸಿದವರು ಎಂದು ಬಣ್ಣಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ದಲಿತ ಸಂರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಜಿ.ಗಂಗಪ್ಪ ಮಾತನಾಡಿ, ಗೌರಿಬಿದನೂರಿಗೆ ಸರ್ಕಾರಿ ಶಿಕ್ಷಕರಾಗಿ ಬಂದವರು ಶೋಷಿತ ದಲಿತರ ಬಿಡುಗಡೆಗೆ ಶ್ರಮಿಸಿದರು. ಅದು, ಕುದುರೆ ಲಗಾಮಿನಂತೆ ದಾರಿತೋರಿ ನಡೆಸಿದವರು ಕೊಮ್ಮಣ್ಣ ಎಂದರು.
ನಿವೃತ್ತ ಮುಖ್ಯೋಪಾಧ್ಯಾಯ ನರಸಿಂಹಯ್ಯ, ಕಾರ್ಯಕ್ರಮದಲ್ಲಿ ಆದಿಮ ಅಧ್ಯಕ್ಷ ಎನ್.ಮುನಿಸ್ವಾಮಿ, ಹ.ಮಾ.ರಾಮಚಂದ್ರ, ಗೋವಿಂದಪ್ಪ, ಡಿ.ಆರ್.ರಾಜಪ್ಪ, ಕೊಂಡರಾಜನಹಳ್ಳಿ ಮಂಜುಳ, ಚೈತ್ರಾ, ಸಾಹಿತಿ ಎಚ್.ಎಸ್.ಸತ್ಯನಾರಾಯಣ, ನೀಲಕಂಠೇಗೌಡ, ರೈತ ಹೋರಾಟಗಾರ ಶಿವಪ್ಪ, ಪ್ರಾಧ್ಯಾಪಕರಾದ ಗುಂಡಪ್ಪ ದೇವಿಕೇರಿ, ಡಾ.ಮುರಳಿ. ಡಾ.ಸರ್ವೇಶ್ ಬಂಟಹಳ್ಳಿ, ಕವಿ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ಚಿನ್ನಯ್ಯ, ಸತೀಶ್ ಕಾಟೇರಿ, ನಾಯಕ್, ಶ್ರೀರಂಗ ಆಚಾರಿ, ಪಿ,ನರಸಿಂಹಮೂರ್ತಿ, ಶಿಕ್ಷಕ ನಾರಾಯಣಸ್ವಾಮಿ ಉಪಸ್ಥಿತರಿದ್ದರು.