

ರಾಣೆಬೆನ್ನೂರ: ಇಲ್ಲಿಯ ಚೋಳಮರಡೇಶ್ವರ ನಗರದ ಮಾತಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾಥಿರ್ಗಳು ಇತ್ತೀಚಿಗೆ ಆಯೋಜಿಸಿದ್ದ ರಾಣೆಬೆನ್ನೂರ ನಂ&1 ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವದಲ್ಲಿ ಭಾಗವಹಿಸಿ ವಿವಿಧ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಛದ್ಮವೇಶದಲ್ಲಿ ಮಹಮ್ಮದ್ ರಾಹಿಲ್ ಪ್ರಥಮ, ಕನ್ನಡ ಕಂಠಪಾಠದಲ್ಲಿ ಕೃತಿಕಾ ಕಮ್ಮಾರ ಪ್ರಥಮ, ಹಿಂದಿ ಕಂಠಪಾಠದಲ್ಲಿ ಕುಶಾಲ್ ಸಿ. ಎಸ್. ದ್ವೀತಿಯ ಸ್ಥಾನ, ಇಂಗ್ಲಿಷ್ ಕಂಠಪಾಠದಲ್ಲಿ ಅಂಕಿತಾ ಬಂಡಿ ದ್ವೀತಿಯ ಸ್ಥಾನ, ಆಶುಭಾಷಣ ಸ್ಪರ್ಧೆಯಲ್ಲಿ ಖುಷಿ ಹಾಲಿವಾಣದ ದ್ವೀತಿಯ, ಏಕ ಅಭಿನಯ ಗೀತೆಯಲ್ಲಿ ಸನ್ನಿಧಿ ಗಾರೆ ದ್ವೀತಿಯ ಸ್ಥಾನ ಪಡೆದಿದ್ದಾರೆ ಎಂದು ಶಾಲಾ ಮುಖ್ಯಶಿಕ ಚನಬಸಪ್ಪ ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.