ಉರುಳಿ ಬಿದ್ದ ಬೃಹತ್ ಬಂಡೆ, ಎರಡು ಕಾರು ಅಪ್ಪಚ್ಚಿ; ಇಬ್ಬರ ಸಾವು, ಮೂವರಿಗೆ ಗಂಭೀರ ಗಾಯ

Rock Car 1
Published on

ದಿಮಾಪುರ್: ಭಾರಿ ಮಳೆಗೆ ಬೃಹತ್ ಬಂಡೆಗಳು ಗುಡ್ಡದ ಮೇಲಿಂದ ರಸ್ತೆಗೆ ಉರುಳಿ ಬಿದ್ದ ಪರಿಣಾಮವಾಗಿ ಕ್ಷಣಮಾತ್ರದಲ್ಲೇ ಮೂರು ಕಾರುಗಳು ಅಪ್ಪಚ್ಚಿಯಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಾಗಾಲ್ಯಾಂಡ್​ನ ಚುಮೌಕೆಡಿಮಾ ಜಿಲ್ಲೆಯಲ್ಲಿ ಇಂದು ಸಂಜೆ ಈ ಭೀಕರ ಅವಘಡ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 29ರ ಚೆಕ್​ಪೋಸ್ಟ್​ನಲ್ಲಿ ಸಂಜೆ 5 ಗಂಟೆ ಸುಮಾರಿಗೆ ವಾಹನಗಳು ನಿಂತಿದ್ದಾಗ ಈ ದುರ್ಘಟನೆ ನಡೆದಿದೆ. ಮೃತರಿಬ್ಬರ ಪೈಕಿ ಒಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದರು. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎರಡು ಬೃಹತ್ ಬಂಡೆಗಳು ಉರುಳಿಬಿದ್ದಿದ್ದು, ಅದರ ತೀವ್ರತೆ ಎಷ್ಟಿತ್ತೆಂದರೆ.. ಒಂದು ಬಂಡೆ ಎರಡು ಕಾರುಗಳನ್ನು ಕ್ಷಣಮಾತ್ರದಲ್ಲಿ ಅಪ್ಪಚ್ಚಿಗೊಳಿಸಿದೆ. ಇನ್ನೊಂದು ಬಂಡೆ ಮತ್ತೊಂದು ಕಾರಿನ ಮೇಲೆ ಬಿದ್ದಿದ್ದು ಅದು ಕೂಡ ಸಂಪೂರ್ಣ ಜಖಂಗೊಂಡಿದೆ. ಈ ದೃಶ್ಯ ಹಿಂದಿದ್ದ ಇನ್ನೊಂದು ಕಾರಿನಲ್ಲಿನ ಡ್ಯಾಷ್​ಬೋರ್ಡ್​ ಕ್ಯಾಮೆರಾದ ವಿಡಿಯೋದಲ್ಲಿ ಸೆರೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net