

ಜಿನೀವಾ: ಅರ್ಕಾಟಿಕಾ ಮೇಲಿನ ಓಝೋನ್ ಪದರದಲ್ಲಿ 2011ರಿಂದ ಈಚೆಗೆ ಉಂಟಾಗಿದ್ದ ಅತೀ ದೊಡ್ಡ ರಂಧ್ರ ಈಗ ಮುಚ್ಚಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ) ತಿಳಿಸಿದೆ. ಆದರೆ ಒಜೋನ್ ಪದರದಲ್ಲಾದ ಈ ಬೆಳವಣಿಗೆಗೆ ಯಾವುದೇ ಮಾನವ ಚಟುವಟಿಕೆ ಅಥವಾ ಕರೊನಾ ಹಿನ್ನೆಲೆ ಲಾಕ್ಡೌನ್ನಿಂದಾಗಿ ಉಂಟಾಗಿರುವ ಅತ್ಯಂತ ಕಡಿಮೆ ಮಾಲಿನ್ಯ ಕಾರಣವಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮಾರ್ಚ್ನಲ್ಲಿ ಅರ್ಕಾಟಿಕಾ ಪ್ರದೇಶದಲ್ಲಿ ಧ್ರುವ ಸುಳಿ ಎಂದು ಕರೆಯಲ್ಪಡುವ ತಣ್ಣನೆಯ ಗಾಳಿಯಿಂದ ತುಂಬಿದ ಕಡಿಮೆ ಒತ್ತಡದ ವಾತಾವರಣ ಉಂಟಾಗಿತ್ತು. ಇದರಿಂದಾಗಿ ಎತ್ತರದ ಮೋಡಗಳ ರಚನೆಯಾಗಿದ್ದರಿಂದ ಓಝೋನಲ್ಲಿನ ರಂಧ್ರ ದುರಸ್ತಿಯಾಗಿದೆ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.