More

    ಸದ್ಯಕ್ಕಂತೂ ಕರೊನಾ ಪಿಡುಗಿನಿಂದ ಜಗತ್ತು ಮುಕ್ತವಾಗಲ್ಲವಂತೆ… ಹಾಗಾದರೆ ಯಾವಾಗ ಆಗಬಹುದು?

    ನವದೆಹಲಿ: ವಿಶ್ವಮಾರಿಯಾಗಿ ಅಬ್ಬರಿಸುತ್ತಿರುವ ಕರೊನಾ ಪಿಡುಗು ಸದ್ಯಕ್ಕೆ ಅಂತ್ಯಗೊಳ್ಳುವ ಯಾವುದೇ ಲಕ್ಷಣಗಳಿಲ್ಲ. ಇದನ್ನು ತಕ್ಷಣವೇ ನಿಯಂತ್ರಣ ತರಬೇಕೆಂದಾದರೆ, ವಿಶ್ವದ ಮೂರನೇ ಎರಡು ಭಾಗದಷ್ಟು ಜನರು ಸಂಪೂರ್ಣವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

    ಅಮೆರಿಕದ ಮಿನ್ನೆಸೊಟಾ ವಿಶ್ವವಿದ್ಯಾಲಯದ ಸೆಂಟರ್​ ಫಾರ್​ ಇನ್​ಫೆಕ್ಸೀಯಸ್​ ಡಿಸೀಸ್​ ರಿಸರ್ಚ್​ ಆ್ಯಂಡ್​ ಪಾಲಿಸಿ ವಿಭಾಗದ ತಜ್ಞರು ಈ ಅಧ್ಯಯನ ಕೈಗೊಂಡಿದ್ದಾರೆ. ಸೋಂಕು ತಗುಲಿದ್ದರೂ ಅದರ ಲಕ್ಷಣಗಳು ಗೋಚರಿಸದವರಿಂದ ಈ ಸೋಂಕು ಹರಡುತ್ತದೆ. ಹಾಗಾಗಿ ಇನ್​ಫ್ಲುಯೆನ್ಜಾ ರೀತಿಯಲ್ಲಿ ಇದನ್ನು ನಿಯಂತ್ರಿಸುವುದು ತುಂಬಾ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.

    ಈ ಸೋಂಕು ಹರಡದಂತೆ ತಡೆಯಲು ವಿಶ್ವದಾದ್ಯಂತ ದೇಶಕ್ಕೆ ದೇಶವನ್ನೇ ಲಾಕ್​ಡೌನ್​ ಮಾಡಲಾಗಿದೆ. ಈ ಸೋಂಕು ಸದ್ಯಕ್ಕೆ ನಿಯಂತ್ರಣಕ್ಕೆ ಬರುತ್ತಿರುವಂತೆ ತೋರುತ್ತಿದೆ. ಹಾಗಾಗಿ ಕೆಲವು ರಾಷ್ಟ್ರಗಳಲ್ಲಿ ಲಾಕ್​ಡೌನ್​ ಅನ್ನು ಸಡಿಲಿಸಿ, ಕೆಲವೊಂದು ಆರ್ಥಿಕ ಚಟುವಟಿಕೆ ಕೈಗೊಳ್ಳಲು ಅವಕಾಶ ಮಾಡಿಕೊಡಲಾಗುತ್ತಿದೆ.

    ಆದರೂ ವಿಶ್ವದ ಮೂರನೇ ಎರಡು ಭಾಗದಷ್ಟು ಜನರು ಸಂಪೂರ್ಣ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಆಗಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ. ಇಲ್ಲವಾದರೆ ಈ ಪಿಡುಗು 2022ರ ನಂತರವೂ ಮುಂದುವರಿದು, ಜನರನ್ನು ಬಿಟ್ಟುಬಿಡದಂತೆ ಕಾಡುವುದು ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

    ಮದುವೆಗೆ ಪೊಲೀಸರು ಕೊಡಲಿಲ್ಲ ಪರ್ಮಿಷನ್​, ಮದುಮಗ ಬಿಟ್ಟಾನೆಯೇ? ಸೈಕಲ್​ ಏರಿಯೇ ಬಿಟ್ಟ… ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts