ಕಣ್ಣೆದುರೇ ಕುಸಿದ ಬೃಹತ್ ಬೆಟ್ಟ; ಉತ್ತರಾಖಂಡದ ಕುಮಾಂನಲ್ಲಿ ಬೆಚ್ಚಿಬೀಳಿಸುವ ದೃಶ್ಯ! | Uttarakhand Landslide

ಉತ್ತರಾಖಂಡದ ಕುಮಾಂನಲ್ಲಿ ಭಾರಿ ಮಳೆಗೆ ಬೆಟ್ಟವೇ ಕುಸಿದಿದ್ದು, ಬೃಹತ್ ಪ್ರಮಾಣದ ಮಣ್ಣು-ಕಲ್ಲುಗಳು ಕುಸಿಯುವ ಭೀಕರ ದೃಶ್ಯ ಇದೀಗ ವೈರಲ್ ಆಗಿದೆ.
Kumaon Landslide
ಉತ್ತರಾಖಂಡದ ಕುಮಾಂನಲ್ಲಿ ಭಾರಿ ಮಳೆಗೆ ಕುಸಿದ ಬೆಟ್ಟ
Published on: 

Uttarakhand Landslide: ಉತ್ತರಾಖಂಡದ ಕುಮಾಂ (Kumaon) ವಿಭಾಗದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಬೆಟ್ಟದ ಬೃಹತ್ ಭಾಗವೇ ಕಣ್ಣೆದುರೇ ಕುಸಿದು ಬೀಳುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಕುಮಾಂ ಪ್ರಾಂತ್ಯದ ಹಿಮಾಲಯದ ತಪ್ಪಲು ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ಸುರಿದ ನಿರಂತರ ಭಾರಿ ಮಳೆಯಿಂದಾಗಿ ಗುಡ್ಡದ ಮಣ್ಣು ಸಡಿಲಗೊಂಡಿದ್ದು, ಇದರ ಪರಿಣಾಮವಾಗಿ ಪರ್ವತದ ಒಂದು ದೊಡ್ಡ ಭಾಗ ಕುಸಿದು ಬಿದ್ದಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ಏಕಾಏಕಿ ಕುಸಿದ ಬೃಹತ್ ಬೆಟ್ಟ

ಭೂಕುಸಿತದ ವೇಳೆ ಬೆಟ್ಟದ ಮೇಲ್ಭಾಗದಿಂದ ಭಾರೀ ಪ್ರಮಾಣದ ಮಣ್ಣು, ಬಂಡೆ ಹಾಗೂ ಕಲ್ಲುಗಳು ಏಕಾಏಕಿ ಕುಸಿದು ಬೀಳುತ್ತಿರುವ ಭೀಕರ ದೃಶ್ಯ ಕಂಡುಬಂದಿದೆ. ನೋಡ ನೋಡುತ್ತಿದ್ದಂತೆಯೇ ಬೆಟ್ಟದ ದೊಡ್ಡ ಭಾಗವೇ ಕುಸಿದು ಕೆಳಕ್ಕೆ ಜಾರಿದ್ದು, ಈ ದೃಶ್ಯ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಭೂಕುಸಿತದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ವಿಡಿಯೋ ಕಂಡ ನೆಟ್ಟಿಗರು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.

ಪ್ರವಾಸಿಗರಿಗೆ ಎಚ್ಚರಿಕೆ

ಭೂಕುಸಿತದ ಹಿನ್ನೆಲೆಯಲ್ಲಿ ಉತ್ತರಾಖಂಡದ ಅಧಿಕಾರಿಗಳು ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಅಪಾಯಕಾರಿ ಗುಡ್ಡಗಾಡು ಪ್ರದೇಶಗಳು ಮತ್ತು ಭೂಕುಸಿತ ಸಂಭವಿಸುವ ಸಾಧ್ಯತೆ ಇರುವ ಸ್ಥಳಗಳಿಂದ ದೂರ ಇರುವಂತೆ ಸಲಹೆ ನೀಡಲಾಗಿದೆ.

ಇದನ್ನೂ ಓದಿ: Noise Pollution: ಹಾರ್ನ್‌ನಿಂದ ಡಿಜೆವರೆಗೆ ಎಲ್ಲೆಲ್ಲೂ ಸದ್ದು; ಕಿವಿ ಮಾತ್ರವಲ್ಲ, ನಿದ್ದೆ-ಹೃದಯದ ಆರೋಗ್ಯಕ್ಕೂ ಬೀಳ್ತಿದೆ ಹೊಡೆತ!

ಮಳೆ ಮುಂದುವರಿದಿರುವ ಪ್ರದೇಶಗಳಲ್ಲಿ ಗುಡ್ಡ-ಬೆಟ್ಟಗಳ ಬಳಿ ಹಾಗೂ ರಸ್ತೆ ಬದಿಗಳಲ್ಲಿ ಸಂಚರಿಸುವಾಗ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಭೂಕುಸಿತದ ಅಪಾಯ ಇರುವ ಸ್ಥಳಗಳಿಂದ ದೂರವಿದ್ದು, ಅನಗತ್ಯವಾಗಿ ಅಪಾಯಕಾರಿ ಪ್ರದೇಶಗಳಿಗೆ ತೆರಳದಂತೆ ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net