

ಕೋಲ್ಕತ್ತ: ಇಲ್ಲಿನ ಪೊಲ್ಲೊಕ್ ಸ್ಟ್ರೀಟ್ನಲ್ಲಿರುವ ಕಟ್ಟಡವೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ.
ಇಂದು ಸಂಜೆ 5.24ರ ಹೊತ್ತಿಗೆ ಈ ಕಟ್ಟಡದ ಮೂರು ಮತ್ತು ನಾಲ್ಕನೇ ಅಂತಸ್ತಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಹಲವು ಕಚೇರಿಗಳನ್ನೊಳಗೊಂಡ ಬಹುಮಹಡಿ ಕಟ್ಟಡ ಇದಾಗಿದೆ. ಇಲ್ಲಿ ಯಾರದ್ದೂ ಮನೆಯಿಲ್ಲದ ಕಾರಣ ಜೀವ ಹಾನಿಯಾಗಿಲ್ಲ.
ಸ್ಥಳಕ್ಕೆ ಸುಮಾರು 20 ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ, ಬೆಂಕಿ ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ಸಮಯದಲ್ಲಿ ಅದರಲ್ಲಿದ್ದ ಓರ್ವ ವ್ಯಕ್ತಿಯನ್ನು ಕಾಪಾಡಲಾಗಿದೆ ಎಂದು ಕೋಲ್ಕತ್ತ ಪೊಲೀಸರು ತಿಳಿಸಿದ್ದಾರೆ.
ಕಟ್ಟಡಕ್ಕೆ ಬೆಂಕಿ ತಗುಲಲು ಕಾರಣ ಏನು ಎಂಬುದು ಇನ್ನೂ ಗೊತ್ತಾಗಿಲ್ಲ ಎಂದಿದ್ದಾರೆ. (ಏಜೆನ್ಸೀಸ್)