ಮಿದುಳು ಸರ್ಜರಿಗೆ ಒಳಗಾಗಿರುವ ಪ್ರಣಬ್​ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ...

Pranab Mukharji
Published on

ನವದೆಹಲಿ: ಕೊವಿಡ್​-19 ಸೋಂಕಿಗೆ ಒಳಗಾಗಿರುವ ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಅವರು ಆರ್ಮಿ ರಿಸರ್ಚ್​ ಆ್ಯಂಡ್​ ರೆಫರಲ್​ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ವೆಂಟಿಲೇಟರ್​​ನಲ್ಲಿ ಅವರನ್ನು ಇಡಲಾಗಿದೆ.

ಪ್ರಣಬ್​ ಮುಖರ್ಜಿಯವರಿಗೆ ಇಂದು ಮಿದುಳು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದ ಕಾರಣ ಸರ್ಜರಿ ಮಾಡಲಾಗಿದ್ದು, ಬಳಿಕ ವೆಂಟಿಲೇಟರ್​ನಲ್ಲಿಟ್ಟು ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದ ಪ್ರಣಬ್ ಮುಖರ್ಜಿ, ನಾನು ಬೇರೆ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಇಂದು ಕೊವಿಡ್​-19 ಟೆಸ್ಟ್​ಗೆ ಒಳಗಾದಾಗ ಅದರ ವರದಿ ಪಾಸಿಟಿವ್​ ಬಂದಿದೆ ಎಂದು ಹೇಳಿದ್ದರು.

ಇದೀಗ ಆಸ್ಪತ್ರೆ ಮೂಲಗಳು ವರದಿ ನೀಡಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಆದರೆ ಪ್ರಣಬ್​ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹಾಗಾಗಿ ವೆಂಟಿಲೇಟರ್​ನಲ್ಲಿದ್ದಾರೆ ಎಂದು ತಿಳಿಸಿವೆ. ಇದನ್ನೂ ಓದಿ: ಕೊವಿಡ್​-19 ಲಸಿಕೆಗೆ ಸೆಪ್ಟೆಂಬರ್​ವರೆಗೆ ಕಾಯಬೇಕಿಲ್ಲ…?; ರಷ್ಯಾದಿಂದ ಬಂತು ಗುಡ್​ ನ್ಯೂಸ್​

ಪ್ರಣಬ್​ ಮುಖರ್ಜಿ ಬೇಗ ಚೇತರಿಸಿಕೊಳ್ಳಲಿ ಎಂದು ಕಾಂಗ್ರೆಸ್​ ಮುಖಂಡರಾದ ರಾಹುಲ್​ ಗಾಂಧಿ, ಕೇಂದ್ರ ಸಚಿವ ಪಿಯೂಷ್​ ಗೋಯಲ್​, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಹಾರೈಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net