ಆಫ್ರಿಕಾದ ಬಂಗುಯಿಯಲ್ಲಿ ಭೀಕರ ಸ್ಫೋಟ, ಕಾಲ್ತುಳಿತ; 29 ಮಕ್ಕಳು ಬಲಿ: 270 ಮಂದಿಗೆ ಗಾಯ! | Stampede

dk - 2025-06-26T211453.472
Published on

Stampede: ಆಫ್ರಿಕಾ ಗಣರಾಜ್ಯದ ರಾಜಧಾನಿ ಬಂಗುಯಿಯ ಶಾಲೆಯೊಂದರಲ್ಲಿ ಗುರುವಾರ ಸಂಭವಿಸಿದ ಭೀಕರ ಸ್ಫೋಟ ಮತ್ತು ಕಾಲ್ತುಳಿತದಲ್ಲಿ 29 ಕ್ಕೂ ಅಧಿಕ ಶಾಲೆ ಮಕ್ಕಳು ಬಲಿಯಾಗಿದ್ದು, 270ಕ್ಕೂ ಹೆಚ್ಚಿನ ಜನರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ.

ರಾಷ್ಟ್ರೀಯ ಶಿಕ್ಷಣ ಸಚಿವಾಲಯದ ಪ್ರಕಾರ, ಬಾರ್ತೆಲೆಮಿ ಬೊಗಾಂಡಾ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು, 5,300 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎರಡನೇ ದಿನದ ಬ್ಯಾಕಲೌರಿಯೇಟ್ ಪರೀಕ್ಷೆ ಬರೆಯುತ್ತಿದ್ದರು. ಶಾಲಾ ಆವರಣದಲ್ಲಿ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗೆ ವಿದ್ಯುತ್ ಸರಬರಾಜು ಮರುಸ್ಥಾಪಿಸುತ್ತಿದ್ದಾಗ ಸ್ಫೋಟ ಸಂಭವಿಸಿದೆ. ಈ ವೇಳೆ ಕಾಲ್ತುಳಿತ ಕೂಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದ ಪರಿಣಾಮವಾಗಿ ಕಾಲ್ತುಳಿತ ಸಂಭವಿಸಿದ ನಂತರ 16 ಹುಡುಗಿಯರು ಸೇರಿದಂತೆ ಹೆಚ್ಚಿನ ಸಂತ್ರಸ್ತರು ಸ್ಥಳದಲ್ಲೇ ಸಾವನ್ನಪ್ಪಿದರು ಮತ್ತು ಇತರರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಕನಿಷ್ಠ 260 ವಿದ್ಯಾರ್ಥಿಗಳು ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net