ಎನ್‌ಐಟಿಕೆ ಡಿಜಿಟಲ್ ಲೈಬ್ರರಿ ಹಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಯೋಗ ಸಂದೇಶದ ನೇರ ಪ್ರಸಾರವನ್ನು ವೀಕ್ಷಿಸುವುದರೊಂದಿಗೆ ದಿನದ ಚಟುವಟಿಕೆಗಳು ಆರಂಭಗೊಂಡವು. ಇದರಲ್ಲಿ ಸಂಸ್ಥೆಯ ಡೀನ್‌ಗಳು, ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು. ಬಳಿಕ ಹೊಸ ಕ್ರೀಡಾ ಸಂಕೀರ್ಣದ ಯೋಗ ಸಭಾಂಗಣದಲ್ಲಿ ನಡೆದ ಮುಖ್ಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಹಾಗೂ ನಿವಾಸಿಗಳು ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ಮಂದಿ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಭಾಗವಹಿಸಿದರು.