ಶಾಸಕ ಟ್ರಸ್ಟ್​ನಿಂದ ಸಾಮೂಹಿಕ ವಿವಾಹ, ಅಪ್ರಾಪ್ತ ಜೋಡಿಗಳಿಗೆ ವೇದಿಕೆಯಿಂದ ಗೇಟ್​ಪಾಸ್​

9994
Published on

ಬಾಗೇಪಲ್ಲಿ ತಾಲೂಕಿನ ಗಡಿದಂನಲ್ಲಿ ಶಾಸಕ ಎಸ್​.ಎನ್​.ಸುಬ್ಬಾರೆಡ್ಡಿ ಚಾರಿಟಬಲ್​ ಟ್ರಸ್ಟ್​ ವತಿಯಿಂದ ಶುಕ್ರವಾರ ಆಯೋಜಿಸಿದ್ದ 22ನೇ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 85 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಾಲ್ಯವಿವಾಹಗಳ ನಡೆಯದಂತೆ ಕಟ್ಟೆಚ್ಚರ ವಹಿಸಿರುವ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ವಿವಾಹಕ್ಕೆ ಅಣಿಯಾಗಿದ್ದ ಮೂರು ಅಪ್ರಾಪ್ತ ಜೋಡಿಗಳಿಗೆ ವೇದಿಕೆಯಿಂದ ಗೇಟ್​ಪಾಸ್​ ನೀಡಿದರು.

ಸುದ್ದಿಗಾರರ ಜತೆ ಮಾತನಾಡಿದ ಎಸ್​.ಎನ್​.ಸುಬ್ಬಾರೆಡ್ಡಿ, ರಾಜಕೀಯಕ್ಕಿಂತ ಸಮಾಜಸೇವೆ ಮಾಡುವುದರಲ್ಲೇ ಹೆಚ್ಚು ಸಂತೃಪ್ತನಾಗಿದ್ದೇನೆ. ಹಿರಿಯರು ಹಾಕಿಕೊಟ್ಟ ಸಂಪ್ರದಾಯದಂತೆ ನೂತನ ಜೋಡಿಗಳಿಗೆ ಟ್ರಸ್ಟ್​ ವತಿಯಿಂದ ಸೀಮೆಹಸುವನ್ನು ಕೊಡುಗೆಯಾಗಿ ನೀಡಿ ಬದುಕಿಗೆ ಆಸರೆ ಕಲ್ಪಿಸಲಾಗಿದೆ ಎಂದರು.

10 ತಿರಸತ, 7 ಗೈರು ಸಾಮೂಹಿಕ ವಿವಾಹಕ್ಕೆ 102 ಜೋಡಿಗಳು ನೋಂದಣಿಯಾಗಿದ್ದವು. ಅರ್ಜಿಗಳನ್ನು ಪರಿಶೀಲಿಸಿದ ವೇಳೆ ಪೂರಕ ದಾಖಲೆ ಸಲ್ಲಿಸದ 7, ವಯಸ್ಸು ದೃಢೀಕರಣ ಪ್ರಮಾಣಪತ್ರ ಸಲ್ಲಿಸದ 3 ಅರ್ಜಿಗಳನ್ನು ತಿರಸತಗೊಳಿಸಲಾಯಿತು. ಉಳಿದ 92 ಜೋಡಿಗಳ ಅರ್ಜಿಗಳು ಪುರಸತಗೊಂಡಿದ್ದವು. ಈ ಪೈಕಿ 7 ಜೋಡಿಗಳು ಕಾರ್ಯಕ್ರಮಕ್ಕೆ ಗೈರಾಗಿದ್ದು, ಉಳಿದ 85 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಎಂದು ಸಾಮೂಹಿಕ ವಿವಾಹಗಳ ಪರಿಶೀಲನಾ ಅಧಿಕಾರಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಚಂದ್ರ ತಿಳಿಸಿದರು. ಆದಿಚುಂಚನಗಿರಿ ಚಿಕ್ಕಬಳ್ಳಾಪುರದ ಶಾಖಾ ಮಠಾಧೀಶ ಶ್ರೀ ಮಂಗಳಾನಂದನಾಥ ಸ್ವಾಮೀಜಿ, ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ, ಜಿಪಂ ಸಿಇಒ ಪ್ರಕಾಶ್​ ಜಿ.ಟಿ. ನಿಟ್ಟಾಲಿ, ಪೊಲೀಸ್​ ಜಿಲ್ಲಾ ವರಿಷ್ಠಾಧಿಕಾರಿ ಕುಶಾಲ್​ ಚೌಕ್ಸಿ ಮತ್ತಿತರರು ಇದ್ದರು.

*ಸಚಿವ ಸ್ಥಾನ ಖಚಿತ

ಬಾಗೇಪಲ್ಲಿ ೇತ್ರದಿಂದ ಮೂರು ಬಾರಿ ಶಾಸಕನಾಗಿ ಆಯ್ಕೆಗೊಂಡಿರುವ ನನಗೆ ರಾಜಕೀಯವಾಗಿ ಎಲ್ಲ ಅರ್ಹತೆಗಳು ಇವೆ. ಆಪರೇಷನ್​ ಕಮಲ ನಡೆದಾಗ ಸಚಿವ ಸ್ಥಾನದ ಅಮಿಷ ಒಡ್ಡಲಾಗಿತ್ತು. ಆದರೂ ಕಾಂಗ್ರೆಸ್​ ತೊರೆಯಲಿಲ್ಲ. ಪಕ್ಷದ ನಿಷ್ಠಾವಂತನಾಗಿ ಪಕ್ಷದಲ್ಲೇ ಉಳಿದು ಮತ್ತೆ ಶಾಸಕನಾಗಿದ್ದೇನೆ.ಇದುವರೆಗೂ ಸಚಿವ ಸ್ಥಾನ ಸಿಕ್ಕಿಲ್ಲ. ಆದ್ದರಿಂದ ಈ ಬಾರಿ ಸಂಪುಟ ಪುನಾರಚನೆ ಸಮಯದಲ್ಲಿ ಸಚಿವ ಸ್ಥಾನ ಸಿಗಲಿದೆ ಎಂದು ಖಚಿತ ಎಂದು ಸುಬ್ಬಾರೆಡ್ಡಿ ಹೇಳಿದರು.

*ಕ್ಷೇತ್ರಕ್ಕೆ ಸಂಸದರ ಕೊಡುಗೆ ಏನು?

ಬಾಗೇಪಲ್ಲಿ ಅಭಿವೃದ್ಧಿ ವಿಚಾರದ ಬಗ್ಗೆ ಪದೇಪದೆ ಪ್ರಸ್ತಾಪಿಸಿ ಸ್ಥಳಿಯ ಶಾಸಕರು ಅಭಿವೃದ್ಧಿ ಮರೆತಿದ್ದಾರೆಂದು ಟೀಕೆ ಮಾಡುತ್ತಿರುವ ಸಂಸದ ಡಾ. ಕೆ. ಸುಧಾಕರ್​ ಅವರು ಬಾಗೇಪಲ್ಲಿ ೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಬಹಿರಂಗಗೊಳಿಸಲಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಬಾಗೇಪಲ್ಲಿ ಬಗ್ಗೆ ಗಮನವನ್ನೇ ಹರಿಸಲಿಲ್ಲ ಎಂದು ಸುಬ್ಬಾರೆಡ್ಡಿ ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net