ಗೋ ರಕ್ಷಣೆಗಾಗಿ ಸಾಮೂಹಿಕ ಪಾರಾಯಣ

https://cdn.vvimgs.com/wp-content/uploads/2025/01/Mass-chanting-for-the-protection-of-Go.webp
ವಿಜಯಪುರ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಗೋರಕ್ಷಣೆಗಾಗಿ ಸಾಮೂಹಿಕ ಪಾರಾಯಣ ಮಾಡಲಾಯಿತು.
Published on

ವಿಜಯಪುರ: ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ ಗೋರಕ್ಷಣೆಗಾಗಿ ಒಂದು ವಾರ ಸಾಮೂಹಿಕ ವಿಷ್ಣುಸಹಸ್ರನಾಮ ಪಾರಾಯಣ ಹಮ್ಮಿಕೊಳ್ಳಲಾಗಿತ್ತು.

ಪಂ.ವಾಸುದೇವಾಚಾರ್ಯ ಅಗ್ನಿಹೋತ್ರಿ ಮಾತನಾಡಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಗೋ ರಕ್ಷಣೆೆಗಾಗಿ ಕರೆ ನೀಡಿದ್ದ ವಿಷ್ಣುಸಹಸ್ರನಾಮ ಸಾಮೂಹಿಕ ಪಾರಾಯಣದ ನಿಮಿತ್ತ ಮಹಿಳೆಯರು, ನಿಲಯದ ವಿದ್ಯಾರ್ಥಿಗಳಿಂದ ಪಾರಾಯಣ ನಡೆಯಿತು ಎಂದರು.

ಶ್ರೀಕೃಷ್ಣನು ಗೋಪಾಲಕನಾಗಿ ಗೋವುಗಳನ್ನು ರಸಿದ್ದಾನೆ. ಹೀಗಾಗಿ ಶ್ರೀ ಕೃಷ್ಣನ ಸನ್ನಿಧಾನದಲ್ಲಿ ಸಾಮೂಹಿಕವಾಗಿ ವಿಷ್ಣು ಸಹಸ್ರನಾಮ ಪಠಿಸಿ ಗೋ ಸಂತತಿ ಉಳಿಯಬೇಕು ಎಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು ಎಂದು ತಿಳಿಸಿದರು.

ಶ್ರೀಕೃಷ್ಣ ವಾದಿರಾಜ ಮಠದ ಅಧ್ಯಕ್ಷ ಡಾ. ಕಿರಣ ಝುಳಕಿ, ಗೌರವಾಧ್ಯಕ್ಷ ಗೋಪಾಲ ನಾಯಕ, ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಖಜಾಂಚಿ ಅಶೋಕರಾವ ಹಾಗೂ ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net