ಮಾಸ್ಕ್​ಮ್ಯಾನ್ ಅಲಿಯಾಸ್​​ ಚಿನ್ನಯ್ಯ ಅರೆಸ್ಟ್ : 10 ದಿನಗಳ ಕಾಲ ಎಸ್​ಐಟಿ ಕಸ್ಟಡಿಗೆ..mask man

ವಿಜಯವಾಣಿ - 2025-08-23T183239.157
Published on

ಬೆಂಗಳೂರು: ( mask man )  ಧರ್ಮಸ್ಥಳ ವ್ಯಾಪ್ತಿಯಲ್ಲಿ ನೂರಾರು ಶವ ಹೂತಿದ್ದೇನೆ ಎಂದು ಆರೋಪ ಮಾಡಿದ್ದ ಮಾಸ್ಕ್​ಮ್ಯಾನ್​​ನನ್ನು ಇದೀಗ ಎಸ್​ಐಟಿ ಅಧಿಕಾರಿಗಳು ಬಂಧಿಸಿದ್ದು, 10 ದಿನಗಳ ಕಾಲ ಎಸ್‌ ಐಟಿ ಕಸ್ಟಡಿಗೆ ತಗೆದುಕೊಳ್ಳಲಾಗಿದೆ.

10 ದಿನಗಳ ಕಾಲ ಮಾಸ್ಕ್‌ಮ್ಯಾನ್‌ ಎಸ್‌ ಐಟಿ ಕಸ್ಟಡಿಗೆ

ಮಾಸ್ಕ್​ಮ್ಯಾನ್  ಅಲಿಯಾಸ್​ ಎನ್.ಚಿನ್ನಯ್ಯ ಅರೆಸ್ಟ್ ಆಗಿದ್ದಾನೆ. ತಲೆಬುರುಡೆ ತಂದ ಕೇಸ್​ನಲ್ಲಿ ಮಾಸ್ಕ್​ಮ್ಯಾನನ್ನು ಬಂಧಿಸಿ ಇಂದು ಬೆಳ್ತಂಗಡಿ ಕೋರ್ಟ್​ಗೆ ಮಾಸ್ಕ್​ಮ್ಯಾನ್​​​ ನನ್ನ ಎಸ್​ಐಟಿ ಅಧಿಕಾರಿಗಳು ಹಾಜರುಪಡಿಸಿದ್ದಾರೆ.

ಚಿನ್ನಯ್ಯ ಅಲಿಯಾಸ್ ಚೆನ್ನ. ಈತ ಮಂಡ್ಯ ಜಿಲ್ಲೆಯ ಮಂಡ್ಯ ತಾಲ್ಲೂಕಿನ ಚಿಕ್ಕಬಳ್ಳಿ ಗ್ರಾಮದವನು. ಈತನಿಗೆ ಮೂವರು ಹೆಂಡತಿಯರು. ಈ ಹಿಂದೆ ಧರ್ಮಸ್ಥಳದಲ್ಲಿ ಸಫಾಯಿ ಕರ್ಮಚಾರಿ ಕೆಲಸ ಮಾಡಿದ್ದ.  ಬಳಿಕ ಅಲ್ಲಿಂದ ತಮಿಳುನಾಡಿನ  ಈರೋಡ್‌ಗೆ ಹೋಗಿ ಅಲ್ಲಿ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ.

 ನಡೆದಿದ್ದೇನು?: 

ಕೆಲವು ದಿನಗಳ ಹಿಂದೆ ಬಂದು ಬುರುಡೆ ತಂದು, ಪೊಲೀಸರಿಗೆ, ಕೋರ್ಟ್​​ಗೆ ಕೊಟ್ಟ. ನಾನು ಧರ್ಮಸ್ಥಳ ಸುತ್ತಮುತ್ತ ಅಕ್ರಮವಾಗಿ ಶವ ಹೂತಿದ್ದೇನೆ ಎಂದು ಆರೋಪ ಮಾಡಿದ್ದನು. ಆದಾದ ಬಳಿಕ ಆತ ತೋರಿಸಿದ 15 ಜಾಗದಲ್ಲಿ ಅಗೆದರೂ ಆತ ಹೇಳಿದಂತೆ ನೂರಾರು ಶವಗಳ ಅಸ್ಥಿಪಂಜರಗಳು ಸಿಗಲಿಲ್ಲ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು  ಮಾಸ್ಕ್ ಮ್ಯಾನ್ ನನ್ನೇ ಬಂಧಿಸಿದ್ದಾರೆ. ಮಾಸ್ಕ್ ಮ್ಯಾನ್ ಆಗಿದ್ದ ಚಿನ್ನಯ್ಯ ಅಲಿಯಾಸ್ ಚಿನ್ನನ ಈಗಿನ ಲೇಟೆಸ್ಟ್ ಪೋಟೋ ಕೂಡ ಬಿಡುಗಡೆಯಾಗಿದೆ.

ಮಾಸ್ಕ್ ಮ್ಯಾನ್ ಇಷ್ಟು ದಿನ ನೂರಾರು ಶವ ಹೂತ್ತಿದ್ದೆ ಎಂದು ಪೊಲೀಸರಿಗೆ ದೂರು  ನೀಡಿದ್ದರಿಂದ ದೂರುದಾರ ಹಾಗೂ ಕೇಸ್ ಸಾಕ್ಷಿದಾರನಾಗಿದ್ದ. ಆದರೇ, ಈಗ ಸಾಕ್ಷಿ, ದೂರುದಾರನೇ ಆರೋಪಿಯಾಗಿದ್ದಾನೆ. ಪೊಲೀಸರಿಗೆ ಸುಳ್ಳು ದೂರು ಕೊಡುವುದು ಕೂಡ ಅಪರಾಧ. ಹೀಗಾಗಿ ಚಿನ್ನಯ್ಯ ಅಲಿಯಾಸ್ ಚಿನ್ನನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಇದೀಗ ಕಸ್ಟಿಡಗೆ  ತೆಗೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net